Quantcast
Channel: Beauty | Kannada Dunia | Kannada News | Karnataka News | India News
Viewing all 3709 articles
Browse latest View live

ಡಿಫರೆಂಟ್ ‘ಹೇರ್ ಸ್ಟೈಲ್’ಗೆ ಬಳಸಿ ಹೇರ್ ರಿಂಗ್

$
0
0

ಸುಂದರವಾಗಿ ಕಾಣಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಹುಡುಗಿಯರು ಅದ್ರಲ್ಲಿ ಮುಂದು. ಹೊಸ ವರ್ಷ ಹತ್ತಿರ ಬರ್ತಿದ್ದಂತೆ ಪಾರ್ಟಿಗಳಿಗೆ ಈಗಾಗಲೇ ಹುಡುಗಿಯರು ಸಿದ್ಧವಾಗ್ತಿದ್ದಾರೆ. ಬ್ಯೂಟಿಪಾರ್ಲರ್ ಗಳ ಮುಂದೆ ಹುಡುಗಿಯರ ಸಾಲಿದೆ.

ಈ ಬಾರಿ ಪಾರ್ಟಿಯಲ್ಲಿ ಸ್ವಲ್ಪ ಡಿಫರೆಂಟ್ ಆಗಿ ಕಾಣಬೇಕೆಂದ್ರೆ ಕೂದಲಿನ ಬಗ್ಗೆ ಹೆಚ್ಚು ಗಮನ ನೀಡಿ. ನಿಮ್ಮ ಕೂದಲಿಗೆ ಹೇರ್ ರಿಂಗ್ ಬಳಸಿ ಡಿಸೈನ್ ಮಾಡಿ, ಎಲ್ಲರನ್ನು ಆಕರ್ಷಿಸಿ.

ಇತ್ತೀಚಿನ ದಿನಗಳಲ್ಲಿ ಹೇರ್ ರಿಂಗ್ ಬಳಕೆ ಫ್ಯಾಷನ್ ಆಗಿದೆ. ಕೂದಲು ಸ್ವಲ್ಪ ಉದ್ದವಿದ್ದರೂ ನೀವು ಹೇರ್ ರಿಂಗ್ ಬಳಸಿ ಕೂದಲ ಸೌಂದರ್ಯವನ್ನು ಇಮ್ಮಡಿ ಮಾಡಬಹುದು. ಮೊದಲು ಸಣ್ಣದಾಗಿ ಜಡೆ ಹಾಕಿಕೊಳ್ಳಿ. ನಂತ್ರ ಅದಕ್ಕೆ ಹೇರ್ ರಿಂಗ್ ಹಾಕುತ್ತ ಬನ್ನಿ.

ಹಿಂದೆ ಮಾತ್ರ ಜಡೆ ಹಾಕಬೇಕಾಗಿಲ್ಲ. ಸೈಡಿನಲ್ಲಿ ಸಣ್ಣ ಜಡೆ ಹಾಕಬಹುದು. ಮುಂದೆ ಹಾಕಬಹುದು.ನಿಮಗೆ ಇಷ್ಟವಾಗುವ ಕಡೆ ಜಡೆ ಹಾಕಿ ಅದಕ್ಕೆ ಹೇರ್ ರಿಂಗ್ ಹಾಕಬಹುದು. ಕೂದಲಿಗೆ ಕಲರಿಂಗ್ ಮಾಡಿದ್ರೆ ಅದಕ್ಕೆ ಹೊಂದುವ ಹೇರ್ ರಿಂಗ್ ಆಯ್ಕೆ ಮಾಡಿಕೊಳ್ಳಿ.

ಹೇರ್ ರಿಂಗ್ ನಿಮ್ಮ ಕೂದಲಿಗೆ ಯಾವುದೇ ಹಾನಿ ಮಾಡುವುದಿಲ್ಲ. ಇದನ್ನು ಹಾಕಿಕೊಳ್ಳುವುದು ಕೂಡ ತುಂಬಾ ಸುಲಭ.

ಹೇರ್ ರಿಂಗ್ ಬಳಕೆಯಿಂದ ಕೂದಲು ಉದುರುತ್ತೆ ಎಂಬ ಭಯ ಬೇಡ. ರಾತ್ರಿ ಮಲಗುವ ಮೊದಲು ಇದನ್ನು ತೆಗೆದು ಮಲಗಿ.


ಮುಖದ ಕಾಂತಿ ದುಪ್ಪಟ್ಟು ಮಾಡುವ ‘ಸೈಂಧವ ಲವಣ’

$
0
0

ಕಾಂತಿಯುತ  ಮುಖ ಯಾರಿಗೆ ಬೇಡ ಹೇಳಿ? ಆಕರ್ಷಕ ಮುಖಕ್ಕಾಗಿ ಎಷ್ಟೆಲ್ಲ ಖರ್ಚು ಮಾಡ್ತೇವೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಬರ್ತೇವೆ. ಆದ್ರೆ ಮನೆಯಲ್ಲಿರುವ ಸೈಂಧವ ಲವಣ ನಿಮ್ಮ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಶಕ್ತಿ ಹೊಂದಿದೆ. ಆರೋಗ್ಯದ ಜೊತೆಗೆ ಸೌಂದರ್ಯ ವರ್ಧನೆಯಾಗಿ ಕೆಲಸ ಮಾಡುತ್ತೆ ಸೈಂಧವ ಲವಣ.

ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ಸೈಂಧವ ಲವಣವನ್ನು ಹಚ್ಚಿಕೊಳ್ಳುವುದ್ರಿಂದ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ. ಡೆಡ್ ಸ್ಕಿನ್ ಸಮಸ್ಯೆ ಕಡಿಮೆಯಾಗುತ್ತದೆ. ವಾರಕ್ಕೆ ಎರಡು ಬಾರಿ ಸೈಂಧವ ಲವಣದ ಪ್ಯಾಕ್ ಹಚ್ಚಿಕೊಳ್ಳುವುದ್ರಿಂದ ಕಪ್ಪು ಕಲೆ ಕಡಿಮೆಯಾಗುತ್ತದೆ.

ಸೈಂಧವ ಲವಣದ ಜೊತೆ ಆಲಿವ್ ಆಯಿಲ್ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದ್ರಿಂದ ಮುಖ ವಿಶೇಷ ಹೊಳಪು ಪಡೆಯುತ್ತದೆ. ಒಣ ಚರ್ಮಕ್ಕೆ ಇದು ಪ್ರಯೋಜನಕಾರಿ. ಸೈಂಧವ ಲವಣಕ್ಕೆ ಆಲಿವ್ ಆಯಿಲ್ ಬೆರೆಸಿರುವುದ್ರಿಂದ ಮುಖ ತೇವಾಂಶ ಪಡೆಯುತ್ತದೆ.

ಒಂದು ದೊಡ್ಡ ಚಮಚ ಓಟ್ಸ್ ತೆಗೆದುಕೊಂಡು ಸಣ್ಣ ಚಮಚದಷ್ಟು ಉಪ್ಪನ್ನು ಬೆರೆಸಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಬಾದಾಮಿ ಎಣ್ಣೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ.

ಸಾಮಾನ್ಯ ಚರ್ಮದವರು ಸೈಂಧವ ಲವಣಕ್ಕೆ ಮೊಸರು ಬೆರೆಸಿ ಹಚ್ಚಿಕೊಳ್ಳುವುದು ಒಳ್ಳೆಯದು. ಇದು ಚರ್ಮ ಹೊಳಪು ಪಡೆಯಲು ನೆರವಾಗುತ್ತದೆ. ಎರಡು ಚಮಚ ಮೊಸರು, ಒಂದು ಚಮಚ ಸೈಂಧವ ಲವಣ ಹಾಗೂ ಸ್ವಲ್ಪ ಜೇನು ತುಪ್ಪವನ್ನು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಮುಖವನ್ನು ತೊಳೆದುಕೊಳ್ಳಿ.

ಮದುವೆ ದಿನ ಸುಂದರವಾಗಿ ಕಾಣಬೇಕಾ…? ಹಾಗಾದ್ರೆ ಈ ತಪ್ಪುಗಳನ್ನು ಮಾಡಬೇಡಿ

$
0
0

ಮದುವೆ ಎಂಬುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವಂತದು. ಮದುವೆ ದಿನದಂದು ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲಾ ಹುಡುಗಿಯರಿಗೂ ಇದ್ದೇ ಇರುತ್ತದೆ. ಅಂತವರು ಮುಖದ ಅಂದ ಕೆಡಿಸುವಂತಹ ಈ ತಪ್ಪುಗಳನ್ನು ಮಾಡಬೇಡಿ.

ಮದುವೆ ದಿನ ಹತ್ತಿರ ಬರುತ್ತಿರುವಾಗ ವಧು ತಿನ್ನುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಇದು ಮುಖದ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ದೇಹದ ಪಿಎಚ್ ಪ್ರಮಾಣ ಕಡಿಮೆ ಮಾಡುವಂತಹ ಆಹಾರಗಳನ್ನು ಸೇವಿಸಬಾರದು.

ಉದಾಹರಣೆಗೆ ಕಾರ್ಬೊನೇಟೆಡ್ ಪಾನೀಯಗಳು, ಆಲ್ಕೋಹಾಲ್, ಸಕ್ಕರೆ, ಮತ್ತು ಮೊಟ್ಟೆಯ ಹಳದಿ ಭಾಗಗಳನ್ನು ಸೇವಿಸಬಾರದು. ಇದರಿಂದ ಮೊಡವೆಗಳು, ಚರ್ಮದ ಉರಿ, ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಅದರ ಬದಲು ಪಿಎಚ್ ಪ್ರಮಾಣ ಸಮತೋಲನದಲ್ಲಿಡುವಂತಹ ಹಸಿರು ತರಕಾರಿಗಳು, ಅರಿಶಿನ, ಚಿಯಾ ಬೀಜಗಳು ಮತ್ತು ನಿಂಬೆಹಣ್ಣುಗಳನ್ನು ಸೇವಿಸಬೇಕು.

ಹಾಗೇ ಮುಖ ತೊಳೆಯುವ ಸೋಪ್ ಬಗ್ಗೆಯೂ ಕಾಳಜಿ ಇರಬೇಕು. ತುಂಬಾ ಹಾರ್ಡ್ ಆಗಿರುವ ಸೋಪ್ ಗಳನ್ನು ಬಳಸಬಾರದು. ಇದು ಮುಖದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಮೃದುವಾದ ಸೋಪ್ ಅಥವಾ ಫೇಸ್ ವಾಶ್ ಗಳನ್ನು ಬಳಸಿ.

ಬ್ಯೂಟಿ ಪಾರ್ಲರ್ ಗೆ ಹೋಗಿ ಕೆಮಿಕಲ್ ಯುಕ್ತ ಫೇಶಿಯಲ್ ಗಳನ್ನು ಮಾಡಿಸಬೇಡಿ. ಇದು ಕೆಲವೊಮ್ಮೆ ಮುಖದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಮನೆಯಲ್ಲೇ ತಯಾರಿಸುವಂತಹ ಫೇಸ್ ಪ್ಯಾಕ್ ಗಳನ್ನು ಬಳಸಿ. ಇದು ಮುಖಕ್ಕೆ ತುಂಬಾ ಒಳ್ಳೆಯದು.

ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯಬೇಡಿ. ಇದರಿಂದ ಮುಖದ ಚರ್ಮ ಕಳೆಗುಂದುತ್ತದೆ. ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಬಳಸುವುದು ಉತ್ತಮ.

ಸ್ನಾನ ಮಾಡಿದ ನಂತರ ಸೋಪ್ ನಿಂದಾಗಿ ಸ್ಕಿನ್ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಸ್ನಾನ ಮಾಡಿದ ತಕ್ಷಣ ಮಾಯಶ್ಚರೈಸಿಂಗ್ ಕ್ರೀಂಗಳನ್ನು ಬಳಸಿ ಇದು ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ʼತೂಕʼ ಕಡಿಮೆ ಮಾಡುತ್ತೆ 5 ನಿಮಿಷದ ಈ ಟ್ರಿಕ್ಸ್

$
0
0

ತೂಕ ಕಡಿಮೆ ಮಾಡಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಜಿಮ್, ವ್ಯಾಯಾಮ, ವಾಕಿಂಗ್, ಮಾರುಕಟ್ಟೆಯಲ್ಲಿ ಸಿಗುವ ಔಷಧಿ, ಡಯೆಟ್ ಹೀಗೆ ಏನೆಲ್ಲ ಮಾಡಿದ್ರೂ ಕೊಬ್ಬು ಮಾತ್ರ ಕಡಿಮೆಯಾಗೋದಿಲ್ಲ. ಏನಪ್ಪಾ ಮಾಡೋದು ಅಂತಾ ಚಿಂತೆಯಲ್ಲಿರುವವರು ಈ ಜಪಾನಿ ಟ್ರಿಕ್ಸ್ ಬಳಸಿ. ಈ ವ್ಯಾಯಾಮ ಮಾಡಿದ್ರೆ ಕೆಲ ದಿನಗಳಲ್ಲಿ ನಿಮ್ಮ ತೂಕ ಕಡಿಮೆಯಾಗಲಿದೆ.

ಈ ವ್ಯಾಯಾಮ ಕೇವಲ ಕೊಬ್ಬನ್ನು ಮಾತ್ರ ಕಡಿಮೆ ಮಾಡೋದಿಲ್ಲ. ಬೆನ್ನು ನೋವಿಗೂ ಇದು ರಾಮಬಾಣ. ಇದಕ್ಕಾಗಿ ನೀವು ವಿಶೇಷವಾಗಿ ಏನೂ ಮಾಡಬೇಕಾಗಿಲ್ಲ. ದುಬಾರಿ ಬೆಲೆಯ ಜಿಮ್ ಮಷಿನ್ ಖರೀದಿ ಮಾಡುವ ಅವಶ್ಯಕತೆ ಇಲ್ಲ. ಈ ವ್ಯಾಯಾಮಕ್ಕೆ ಕೇವಲ ಟವೆಲ್ ರೋಲ್ ಇದ್ದರೆ ಸಾಕು.

ಯಸ್, ನಿಮ್ಮ ವ್ಯಾಯಾಮಕ್ಕೆ ಟವೆಲ್ ರೋಲ್ ಬೇಕು. ಈ ಟವೆಲ್ ರೋಲ್ ಬಳಸಿ ಮಾಡುವ ವ್ಯಾಯಾಮದಿಂದ ನೀವು ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ವೈದ್ಯರೂ ಒಪ್ಪಿಕೊಂಡಿದ್ದಾರೆ. ಈ ಟವೆಲ್ ರೋಲ್ ಸೊಂಟದ ಬಳಿ ಇರುವ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಈ ವ್ಯಾಯಾಮ ಮಾಡುವ ಮೊದಲು 15 ಇಂಚು ಉದ್ದ ಹಾಗೂ 4 ಇಂಚು ಅಗಲದ ಟವೆಲ್ ತೆಗೆದುಕೊಳ್ಳಿ. ಅದನ್ನು ಸರಿಯಾಗಿ ರೋಲ್ ಮಾಡಿ. ಮಧ್ಯೆ ಗಂಟು ಹಾಕಿ ಸುರಳಿ ಬಿಚ್ಚದಂತೆ ನೋಡಿಕೊಳ್ಳಿ. ಈ ಟವೆಲ್ ರೋಲನ್ನು ಸೊಂಟದ ಕೆಳಗಿಟ್ಟು, ಕಾಲುಗಳನ್ನು ನೇರವಾಗಿಟ್ಟುಕೊಳ್ಳಿ. ಕೈ ತಲೆಯ ಮೇಲಿರಲಿ. ಐದು ನಿಮಿಷಗಳ ಕಾಲ ಹೀಗೆ ಇರಿ. ನಂತ್ರ ಸಾಮಾನ್ಯ ಸ್ಥಿತಿಗೆ ಮರಳಿ. ಟವೆಲ್ ರೋಲ್ ವ್ಯಾಯಾಮದಲ್ಲಿ ಸಾಕಷ್ಟು ಭಂಗಿಗಳಿವೆ. ಈ ಎಲ್ಲ ಭಂಗಿಗಳೂ ತೂಕ ಇಳಿಸಿಕೊಳ್ಳಲು ನೆರವಾಗುತ್ತವೆ.

ಈ ಅಭ್ಯಾಸಗಳನ್ನು ಬಿಟ್ರೆ ‘ಮೊಡವೆ’ಯಿಂದ ಸಿಗುತ್ತೆ ಮುಕ್ತಿ

$
0
0

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು ಕೆಟ್ಟ ಹವ್ಯಾಸಗಳನ್ನು ಅಥವಾ ಅಭ್ಯಾಸಗಳನ್ನು ಬಿಟ್ರೆ ಅಂದದ, ಕಲೆರಹಿತ ಸುಂದರ ಮುಖ ನಿಮ್ಮದಾಗುತ್ತದೆ.

ಮುಖವನ್ನು ದಿನಕ್ಕೆ ಎರಡು ಬಾರಿ ಸ್ವಚ್ಛವಾಗಿ ತೊಳೆದುಕೊಳ್ಳಿ. ಒಳ್ಳೆಯ ಗುಣಮಟ್ಟದ ಫೇಸ್ ವಾಶ್ ಬಳಸಿ.

ಡೈರಿ ಉತ್ಪನ್ನಗಳ ವಿಪರೀತ ಸೇವನೆಯಿಂದ ಮುಖದ ಮೇಲೆ ಮೊಡವೆಗಳು ಏಳುತ್ತವೆ. ಉರಿಯೂತ ಕೂಡ ಕಾಣಿಸಿಕೊಳ್ಳಬಹುದು. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಕೂಡ ಸೇವಿಸಬೇಡಿ. ಆಗ ಮೊಡವೆಯಿಂದ ಮುಕ್ತಿ ಪಡೆಯಬಹುದು.

ಸ್ಮಾರ್ಟ್ ಫೋನ್ ನಲ್ಲಿ ಹೆಚ್ಚು ಹೊತ್ತು ಮಾತನಾಡುವುದು ಕೂಡ ಮೊಡವೆಗೆ ಕಾರಣ. ಕಿವಿಯ ಬಳಿ ಮೊಬೈಲ್ ಇಟ್ಟುಕೊಂಡು ಬಹಳ ಹೊತ್ತು ಮಾತನಾಡುವುದರಿಂದ ಬ್ಯಾಕ್ಟೀರಿಯಾಗಳು ಮುಖದ ಚರ್ಮದ ರಂಧ್ರದ ಒಳಕ್ಕೆ ಪ್ರವೇಶಿಸುತ್ತವೆ. ಹಾಗಾಗಿ ಮೊಬೈಲ್ ನಲ್ಲಿ ಮಾತನಾಡುವಾಗ ಇಯರ್ ಫೋನ್ ಬಳಸಿ.

ಕೆಲವರು ಮುಖಕ್ಕೂ ಬಾಡಿ ಲೋಶನ್ ಹಚ್ಚಿಕೊಳ್ತಾರೆ. ಇದ್ರಿಂದ್ಲೂ ಮೊಡವೆಗಳೇಳುವ ಸಾಧ್ಯತೆ ಹೆಚ್ಚು. ಬಾಡಿ ಲೋಶನ್ ನಲ್ಲಿ ಬೆಣ್ಣೆಯ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಮುಖಕ್ಕೆ ಯಾವಾಗಲೂ ಫೇಸ್ ಕ್ರೀಮ್ ಹಚ್ಚಿ.

ಹೆಚ್ಚು ಸಿಹಿ ತಿನ್ನುವುದು ಒಳ್ಳೆಯದಲ್ಲ. ಸಕ್ಕರೆಯಲ್ಲಿ ಗ್ಲೆಸೆಮಿಕ್ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಡ್ ಪ್ರಮಾಣ ಅಧಿಕವಾಗಿರುವ ಯಾವುದೇ ಪದಾರ್ಥವನ್ನೂ ಹೆಚ್ಚಾಗಿ ಸೇವಿಸಬೇಡಿ. ಪೋಷಕಾಂಶ ಭರಿತ ಹಣ್ಣು ಮತ್ತು ತರಕಾರಿ ತಿನ್ನುವುದು ಉತ್ತಮ.

ವ್ಯಾಯಾಮವಿಲ್ಲದೆ ‘ಫಿಟ್’ಇರೋದು ಹೇಗೆ ಗೊತ್ತಾ…?

$
0
0

ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ವ್ಯಾಯಾಮದಿಂದ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯಕರ ದೇಹ ನಮ್ಮದಾಗುತ್ತದೆ. ಆದ್ರೆ ಕೆಲವು ಮಹಿಳೆಯರು ವ್ಯಾಯಾಮ ಮಾಡೋದೇ ಇಲ್ಲ. ಆದ್ರೂ ಆರೋಗ್ಯವಾಗಿ, ಸುಂದರವಾಗಿರ್ತಾರೆ. ಇದಕ್ಕೆ ಅನೇಕ ಕಾರಣಗಳಿವೆ.

ನೀವು ವ್ಯಾಯಾಮ ಮಾಡಬೇಕೆಂದೇನೂ ಇಲ್ಲ. ಪ್ರತಿದಿನ ನಿಗಧಿತ ಸಮಯದಲ್ಲಿ ಧ್ಯಾನ ಮಾಡುವುದರಿಂದಲೂ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಧ್ಯಾನ ಮಾಡುವುದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಒತ್ತಡ ಕಡಿಮೆಯಾಗಿ ದೇಹಕ್ಕೆ ಹೊಸ ಚೈತನ್ಯ ಸಿಗುತ್ತದೆ.

ಕಸೂತಿ ಕೆಲಸ ಮಾಡುವುದರಿಂದಲೂ ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಕಸೂತಿ ಮೇಲೆ ಹೆಚ್ಚಿನ ಗಮನ ಹೋಗುವುದರಿಂದ ಉಳಿದ ಚಿಂತೆಗಳು ದೂರವಾಗಿ ಮೆದುಳು ಉತ್ತಮವಾಗಿ ಕೆಲಸ ಮಾಡಲು ಶುರುಮಾಡುತ್ತದೆ.

ಸಾಕುನಾಯಿಗಳ ಜೊತೆ ಆಟವಾಡುವುದು ಕೂಡ ಒಂದು ವ್ಯಾಯಾಮ. ಇದ್ರ ಜೊತೆ ಆಟವಾಡುವುದರಿಂದ ಒಂಟಿತನ ದೂರವಾಗುತ್ತದೆ. ಜೊತೆಗೆ ಮಾನಸಿಕ ಸಂಬಂಧಿ ಖಾಯಿಲೆಗಳು ಬಾಧಿಸುವುದಿಲ್ಲ.

ಯಾರು ಪ್ರತಿದಿನ ಅಡುಗೆ ಮಾಡ್ತಾರೋ ಅವರಿಗೆ ಬೇಗ ಬೊಜ್ಜು ಕಾಣಿಸಿಕೊಳ್ಳುವುದಿಲ್ಲ. ಅಡುಗೆ ಮಾಡುವುದರಿಂದ 130 ಕ್ಯಾಲೋರಿ ಬರ್ನ್ ಆಗುವುದೇ ಇದಕ್ಕೆ ಕಾರಣ.

ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣ ಮಾಡುವುದರಿಂದಲೂ ಅನೇಕ ಪ್ರಯೋಜನಗಳಿವೆ. ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ಅನುಭವ ನಿಮ್ಮದಾಗುತ್ತದೆ. ಜೊತೆಗೆ ದೇಹ ಫಿಟ್ ಆಗಿ ಆರೋಗ್ಯವಾಗಿರುತ್ತದೆ. ಪ್ರಯಾಣ ಮಾಡುವುದರಿಂದ ರಕ್ತದೊತ್ತಡ ಸರಿಯಾಗಿರುತ್ತದೆ. ಕ್ಯಾನ್ಸರ್ ಅಪಾಯ ಕೂಡ ಕಡಿಮೆ ಎನ್ನುತ್ತಾರೆ ವೈದ್ಯರು.

ಮಹಿಳೆಯರನ್ನು ಆಕರ್ಷಿಸುವ ‘ಡಿಸೈನರ್ ಬ್ಲೌಸ್’ಗಳು

$
0
0

ತಾವು ತೊಡುವ ಸೀರೆ ಅತ್ಯಾಕರ್ಷಕವಾಗಿ ಕಾಣಬೇಕೆಂಬ ಬಯಕೆಯಿಂದ ಮಹಿಳೆಯರು ಇಂದು ಬ್ಲೌಸ್ ಗಳ  ಆಯ್ಕೆಗೂ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ತಾವು ಉಡಬೇಕಾಗಿರುವ ಸೀರೆಯ ಬಣ್ಣಕ್ಕೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್ ಗಳನ್ನು ಹೊಲಿಸಿಕೊಳ್ಳುವುದಲ್ಲದೇ ಆಕರ್ಷಕವಾದ ನೆಕ್, ಕುಸುರಿಗಳನ್ನು ಬ್ಲೌಸ್ ಗಳ ಮೇಲೆ ಅರಳಿಸಿ ಸೌಂದರ್ಯವತಿಯಾಗಿ ಕಾಣಲು ಬಯಸುತ್ತಾರೆ.

ಉದ್ದ ತೋಳಿನ ಬ್ಲೌಸ್, ಮುಕ್ಕಾಲು ಭಾಗ ತೋಳಿನ ಬ್ಲೌಸ್ ಗಳು ಈಗ ಮತ್ತೆ ಹೆಂಗಳೆಯರ ಮನಸ್ಸನ್ನು ಆಕರ್ಷಿಸುತ್ತಿವೆ.

ಡೀಪ್ ನೆಕ್, ವಿ ನೆಕ್ ಕೆಲವರಿಗೆ ಇಷ್ಟವಾದರೆ ನೆಕ್ ಗೆ ವಿವಿಧ ವಿನ್ಯಾಸದ ಬಣ್ಣ ಬಣ್ಣದ ಲೇಸ್ ಗಳನ್ನು ಹಚ್ಚಿಸಿಕೊಂಡು ಸಾಧಾರಣ ಬ್ಲೌಸ್ ಗಳನ್ನು ಅತ್ಯಾಕರ್ಷಕವಾಗಿ ಕಾಣುವಂತೆ ಕೆಲವರು ಮಾಡಿಕೊಳ್ಳುತ್ತಾರೆ, ರವಿಕೆಗಳಿಗೆ ಅದೇ ಬಟ್ಟೆಯಿಂದ ದಪ್ಪ ದಾರಗಳನ್ನು ಹೊಲಿದು ಹಿಂಭಾಗದ ನೆಕ್ ಗೆ ಜೋಡಿಸಿ ಎರಡೂ ದಾರಗಳ ಗಂಟನ್ನು  ಮಧ್ಯದಲ್ಲಿ ಹಾಕಲಾಗುತ್ತದೆ. ಈ ಫ್ಯಾಷನ್ ಎಲ್ಲಾ ಹೆಂಗಳೆಯರಿಗೂ ಅಚ್ಚುಮೆಚ್ಚು.

ಒಟ್ಟಿನಲ್ಲಿ ಡಿಸೈನರ್ ಬ್ಲೌಸ್ ಗಳು ಬರಿ ಸಿನಿಮಾ ನಾಯಕಿಯರಿಗಷ್ಟೆ ಅಲ್ಲ, ಇಂದು ಸಾಮಾನ್ಯ ಮಹಿಳೆಯರೂ ಇಷ್ಟಪಟ್ಟು ಧರಿಸುವ ವಸ್ತ್ರವಾಗಿದೆ. ತಮ್ಮ ವ್ಯಕ್ತಿತ್ವಕ್ಕೆ ಸೂಕ್ತವಾದ ಸೀರೆ, ಅದಕ್ಕೆ ಒಪ್ಪುವ ಡಿಸೈನರ್ ಬ್ಲೌಸ್ ಇದ್ದರೆ ಸೀರೆ ತೊಡುವ ಮಹಿಳೆಯ ಅಂದ ದುಪ್ಪಟ್ಟಾಗುತ್ತದೆ, ಎಂಬುದರಲ್ಲಿ ಎರಡು ಮಾತಿಲ್ಲ.

ಸದಾ ಯಂಗ್‌ ಆಗಿ ಕಾಣಲು ಪ್ರತಿ ರಾತ್ರಿ ಹೀಗೆ ಮಾಡಿ

$
0
0

ಸುಂದರವಾಗಿ ಕಾಣೋದಿಕ್ಕೆ ಏನೆಲ್ಲ ಕಸರತ್ತು ಮಾಡ್ತೇವೆ. ವಯಸ್ಸನ್ನು ಮುಚ್ಚಿಡಲು ಮೇಕಪ್ ಮೇಲೆ ಮೇಕಪ್ ಮಾಡ್ತೇವೆ. ಹಗಲಿನಲ್ಲಿ ನಮ್ಮ ಸೌಂದರ್ಯದ ಬಗ್ಗೆ ಅತಿ ಕಾಳಜಿ ವಹಿಸುವ ನಾವು ರಾತ್ರಿ ಮಾತ್ರ ಇದನ್ನು ಮರೆತು ಬಿಡ್ತೇವೆ. ರಾತ್ರಿ ಚರ್ಮದ ಬಗ್ಗೆ ನೀವು ಅಲಕ್ಷ ಮಾಡಿದ್ದರೆ ಈಗಲಾದ್ರೂ ಎಚ್ಚೆತ್ತುಕೊಳ್ಳಿ.

ತಜ್ಞರ ಪ್ರಕಾರ ರಾತ್ರಿ ಚರ್ಮಕ್ಕೆ ಆರೈಕೆ ಅಗತ್ಯ. ನಿರ್ಲಕ್ಷಿಸಿದ್ರೆ ಅಪಾಯವುಂಟಾಗಬಹುದು. ಹಾಗಾಗಿ ರಾತ್ರಿ ಮಲಗುವ ಮುನ್ನ ಕೆಲವೊಂದು ರೂಢಿ ಬೆಳೆಸಿಕೊಂಡು ನಿಮ್ಮ ಚರ್ಮವನ್ನು ಕಾಪಾಡಿಕೊಳ್ಳಿ.

ಅದೆಷ್ಟೇ ಒತ್ತಡವಿರಲಿ, ನಿದ್ದೆ ಬಂದಿರಲಿ ಯಾವುದೇ ಕಾರಣಕ್ಕೂ ಮೇಕಪ್ ಹಾಕಿಯೇ ಮಲಗಬೇಡಿ. ಹಾಸಿಗೆಗೆ ಹೋಗುವ ಮುನ್ನ ಮೇಕಪ್ ತೆಗೆಯಲು ಮರೆಯಬೇಡಿ. ಮೇಕಪ್ ನಲ್ಲಿರುವ ರಾಸಾಯನಿಕ ವಸ್ತುಗಳು ನಿಮ್ಮ ಚರ್ಮದ ರಂಧ್ರಗಳನ್ನು ಮುಚ್ಚಿಬಿಡುತ್ತವೆ. ಇದರಿಂದಾಗಿ ಚರ್ಮ ಹೊಳಪು ಕಳೆದುಕೊಳ್ಳುತ್ತದೆ.

ಚರ್ಮ ಒಣಗಿದಂತಾಗಿದ್ದರೆ ಚಿಂತೆ ಬೇಡ. ಮಲಗುವ ಮುನ್ನ ನಿಮ್ಮ ಸ್ವಚ್ಛವಾದ ಕೈಗಳಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಇದರಿಂದ ರಕ್ತ ಪರಿಚಲನೆ ಹೆಚ್ಚಾಗಿ ನಿರ್ಜೀವವಾಗಿದ್ದ ಚರ್ಮ ಹೊಳೆಯಲಾರಂಭಿಸುತ್ತದೆ.

ಹಾಸಿಗೆಗೆ ಹೋಗುವ ಮುನ್ನ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಉತ್ತಮ. ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಸ್ನಾನ ಮಾಡುವುದನ್ನು ರೂಢಿ ಮಾಡಿಕೊಳ್ಳಿ. ಉಪ್ಪಿಗೆ ಸೋಂಕನ್ನು ಹೊಡೆದೋಡಿಸುವ ಶಕ್ತಿ ಇದೆ.

ನಿಮ್ಮ ಕೂದಲು ಉದ್ದವಾಗಿದ್ದರೆ ಮಲಗುವ ಮೊದಲು ಕೂದಲನ್ನು ಬಾಚಿಕೊಳ್ಳಿ. ಹೀಗೆ ಮಾಡುವುದರಿಂದ ರಕ್ತ ಪರಿಚಲನೆ ಸರಿಯಾಗುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ.

ದಿನವಿಡಿ ಮಾಡುವ ದಣಿವು ಕಣ್ಣಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕಣ್ಣುಗಳನ್ನು ರಾತ್ರಿ ನೀರಿನಲ್ಲಿ ತೊಳೆದು ಮಲಗಬೇಕು. ಆಗ ಕಣ್ಣು ಕೆಳಗೆ ಕಾಣಿಸಿಕೊಳ್ಳುವ ಕಪ್ಪು ಕಲೆಯಿಂದ ಮುಕ್ತಿ ಪಡೆಯಬಹುದಾಗಿದೆ.


ಅಡುಗೆಗೂ ಸೈ…ಸೌಂದರ್ಯಕ್ಕೂ ಸೈ ಈರುಳ್ಳಿ

$
0
0

ಅಡುಗೆ ಮಾಡುವಾಗ ಉಪಯೋಗಿಸುವ ಸಾಮಾನ್ಯವಾದ ವಸ್ತು ಈರುಳ್ಳಿ. ಇದನ್ನು ಒಗ್ಗರಣೆಗೆ, ಹಸಿಯಾಗಿ, ಪಲ್ಯಕ್ಕೆ… ಹೀಗೆ ಎಲ್ಲಾದಕ್ಕೂ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ.

ಆದರೆ ಇದೆ ಈರುಳ್ಳಿಯಿಂದ ಕೂದಲ ಸಮಸ್ಯೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆ ನಿವಾರಿಸಿಕೊಳ್ಳಬಹುದು. ಹೇಗೆ ಅನ್ನೋದನ್ನು ನೋಡೋಣ.

* ಈರುಳ್ಳಿಯಲ್ಲಿರುವ ವಿಟಮಿನ್ ಸಿ, ಈ ಮತ್ತು ಎ ಸ್ಕಿನ್ ಗ್ಲೋ ಆಗಲು ಸಹಕರಿಸುತ್ತದೆ. ಅದಕ್ಕಾಗಿ ಎರಡು ಚಮಚ ಹೆಸರು ಬೇಳೆ ಹಿಟ್ಟು, ಅರ್ಧ ಚಮಚ ಈರುಳ್ಳಿ ರಸ ಮತ್ತು ಅರ್ಧ ಚಮಚ ಹಾಲು ಮಿಕ್ಸ್ ಮಾಡಿ ಮುಖ ಮತ್ತು ಕೈಗಳಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ನಂತರ ಹಾಲಿನಿಂದಲೇ ತೊಳೆದರೆ ಸ್ಕಿನ್ ಗ್ಲೋ ಆಗುತ್ತದೆ.

* ಈರುಳ್ಳಿ ರಸದಿಂದ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ಸುಕ್ಕು, ನೆರಿಗೆ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತದೆ.

* ಒಂದು ಚಮಚ ಈರುಳ್ಳಿ ರಸಕ್ಕೆ ಒಂದು ಚಮಚ ಆಲಿವ್ ಆಯಿಲ್ ಬೆರೆಸಿ ಮುಖಕ್ಕೆ ಹಚ್ಚಿದರೆ ಪಿಂಪಲ್ ಸಮಸ್ಯೆ ನಿವಾರಣೆಯಾಗುತ್ತದೆ.

* ಯೋಗರ್ಟ್ ಜೊತೆ ಈರುಳ್ಳಿ ರಸ ಬೆರೆಸಿ, ಅದಕ್ಕೆ ಯಾವುದೇ ಎಸೆನ್ಷಿಯಲ್ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷ ವೃತ್ತಾಕಾರದಲ್ಲಿ ಮಸಾಜ್ ಮಾಡಿದರೆ ಡಾರ್ಕ್ ಸರ್ಕಲ್ ಮಾಯವಾಗುತ್ತದೆ.

* ಮುಖದಲ್ಲಿ ಕಲೆ, ಮಚ್ಚೆ ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ, ಈರುಳ್ಳಿ ರಸ ಹಚ್ಚಿ ಮಸಾಜ್ ಮಾಡುತ್ತಾ ಬಂದರೆ ಒಂದು ತಿಂಗಳಲ್ಲಿ ಮಚ್ಚೆ ಸಮಸ್ಯೆ ನಿವಾರಣೆಯಾಗುತ್ತದೆ.

* ರೆಗ್ಯುಲರ್ ಆಗಿ ಈರುಳ್ಳಿ ರಸವನ್ನು ತುಟಿಗೆ ಹಚ್ಚಿ ಮಸಾಜ್ ಮಾಡಿದರೆ ಡೆಡ್ ಸ್ಕಿನ್ ನಿವಾರಣೆಯಾಗಿ ತುಟಿ ಮೃದು ಮತ್ತು ಕೋಮಲವಾಗುತ್ತದೆ.
* ಕೂದಲು ತೆಳ್ಳಗಾಗುತ್ತಿದ್ದರೆ ಈರುಳ್ಳಿ ರಸ ಮತ್ತು ಜೇನು ಮಿಕ್ಸ್ ಮಾಡಿ ರಾತ್ರಿ ಕೂದಲಿಗೆ ಹಚ್ಚಿ ಹಾಗೆ ಬಿಡಿ. ಬೆಳಗ್ಗೆ ಎದ್ದು ಶ್ಯಾಂಪೂವಿನಿಂದ ವಾಷ್ ಮಾಡಿ. ಇದರಿಂದ ಕೂದಲು ದಪ್ಪಗಾಗುತ್ತದೆ.

* ತಲೆಹೊಟ್ಟಿನ ಸಮಸ್ಯೆ ಇದ್ದವರು ಈರುಳ್ಳಿ ರಸದೊಂದಿಗೆ ಒಣಗಿದ ನಿಂಬೆ ಸಿಪ್ಪೆ ಪುಡಿ ಮತ್ತು ಯೋಗರ್ಟ್ ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿದರೆ ತಲೆಹೊಟ್ಟಿನ ಸಮಸ್ಯೆ ದೂರವಾಗುತ್ತದೆ.

* ಕೂದಲು ಚೆನ್ನಾಗಿ ಬೆಳೆಯಲು ಈರುಳ್ಳಿ ರಸಕ್ಕೆ ಒಂದು ಚಮಚ ಮೆಂತೆ ಪುಡಿ ಸೇರಿಸಿ ಹಚ್ಚಿ. ಒಣಗಿದ ಮೇಲೆ ಚೆನ್ನಾಗಿ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡಿದರೆ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

ಮನೆಯಲ್ಲಿಯೇ ಶೇವ್ ಮಾಡಿ ‘ಗ್ಲೋಯಿಂಗ್ ಸ್ಕಿನ್’ನಿಮ್ಮದಾಗಿಸಿಕೊಳ್ಳಿ

$
0
0

ಕೆಲಸದ ಒತ್ತಡದಲ್ಲಿ ಸರಿಯಾದ ಸಮಯ ಸಿಗೋದಿಲ್ಲ. ಜೊತೆಗೆ ಆಲಸ್ಯ ಬೇರೆ. ಹಾಗಾಗಿ ಅನೇಕ ಪುರುಷರು ಶೇವಿಂಗ್ ಮಾಡಿಸಿಕೊಳ್ಳಲು ಪಾರ್ಲರ್ ಮೊರೆ ಹೋಗ್ತಾರೆ. ಪಾರ್ಲರ್ ನಲ್ಲಿ ಶೇವಿಂಗ್ ಮಾಡಿಸಿಕೊಳ್ಳುವುದರಿಂದ ಜೇಬಿಗೆ ಕತ್ತರಿ ಬೀಳುತ್ತದೆ.

ವಾರಕ್ಕೆರಡು ಬಾರಿ ಶೇವಿಂಗ್ ಮಾಡಿಸಿಕೊಳ್ಳುವವರ ಸ್ಕಿನ್ ನಿಧಾನವಾಗಿ ಹಾಳಾಗುತ್ತ ಬರುತ್ತೆ. ಹಾಗಾಗಿ ವಾರಕ್ಕೊಮ್ಮೆ ಮನೆಯಲ್ಲಿಯೇ ಶೇವಿಂಗ್ ಮಾಡಿಕೊಂಡು ಗ್ಲೋ ಸ್ಕಿನ್ ನಿಮ್ಮದಾಗಿಸಿಕೊಳ್ಳಬಹುದು.

ಶೇವಿಂಗ್ ನಂತರ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವರ ಚರ್ಮ ಒಣಗಿದ್ರೆ ಮತ್ತೆ ಕೆಲವರಿಗೆ ತುರಿಕೆ ಕಾಣಿಸಿಕೊಳ್ಳುತ್ತೆ. ಚರ್ಮ ಒರಟಾಗುತ್ತದೆ. ಗಾಯಗಳಾಗುವುದೂ ಉಂಟು. ಹಾಗಾಗಿ ಮನೆಯಲ್ಲಿ ಶೇವಿಂಗ್ ಮಾಡಿಕೊಳ್ಳಲು ಅನೇಕರು ಹೆದರ್ತಾರೆ. ಶೇವಿಂಗ್ ಕ್ರೀಂ ಬಳಸುವುದು ಎಲ್ಲ ಪುರುಷರಿಗೂ ಇಷ್ಟವಾಗುವುದಿಲ್ಲ. ಹಾಗಿರುವಾಗ ಕೆಲವೊಂದು ಟಿಪ್ಸ್ ಅನುಸರಿಸಿ ಮನೆಯಲ್ಲಿ ಭಯವಿಲ್ಲದೆ ಶೇವಿಂಗ್ ಮಾಡಿಕೊಳ್ಳಬಹುದು.

ಕೆಲವರು ಶೇವಿಂಗ್ ಮಾಡುವಾಗ ಹೇಗೆಂದರೆ ಹಾಗೆ ರೇಜರ್ ಬಳಸ್ತಾರೆ. ಮೇಲೆ, ಕೆಳಗೆ, ಅಡ್ಡ ರೇಜರ್ ಉಪಯೋಗಿಸ್ತಾರೆ. ಯಾವಾಗಲೂ ಒಂದು ಮುಖದಲ್ಲಿ ರೇಜರ್ ಬಳಸಬೇಕು.

ಶೇವಿಂಗ್ ಮಾಡಿದ ನಂತ್ರ ಕೆಲವರು ಕ್ರೀಂ ಹಚ್ಚಿಕೊಳ್ತಾರೆ. ಮತ್ತೆ ಕೆಲವರು ಹಾಗೆ ಬಿಡ್ತಾರೆ. ಇದರಿಂದ ಉರಿ ಕಾಣಿಸಿಕೊಳ್ಳುತ್ತೆ. ಅಂತವರು ಅಲವೇರಾ ರಸವನ್ನು ಹಚ್ಚಿಕೊಳ್ಳುವುದು ಒಳ್ಳೆಯದು. ಇದರಿಂದ ಉರಿ ಕಾಣಿಸಿಕೊಳ್ಳುವುದಿಲ್ಲ.

ಶೇವಿಂಗ್ ಮಾಡುವ ವೇಳೆ ಗಾಯವಾದ್ರೆ ಭಯಪಡುವ ಅಗತ್ಯವಿಲ್ಲ. ಅರಿಶಿನದ ಪೇಸ್ಟ್ ಮಾಡಿ ಹಚ್ಚಿಕೊಳ್ಳಿ. ಇದು ಚರ್ಮಕ್ಕೆ ಸೋಂಕು ತಗಲುವುದನ್ನು ತಪ್ಪಿಸುತ್ತದೆ.

ಶೇವಿಂಗ್ ಮಾಡುವ ಮೊದಲ ಹಾಗೂ ನಂತ್ರ ಮಸಾಜ್ ಮಾಡಿಕೊಳ್ಳಬೇಕು. ಎಣ್ಣೆಯಿಂದ ಗಡ್ಡ ಹಾಗೂ ಮುಖವನ್ನು ಮಸಾಜ್ ಮಾಡಿಕೊಳ್ಳಿ. ರಾತ್ರಿ ಎಣ್ಣೆ ಮಸಾಜ್ ಮಾಡಿ ಮಲಗಿ. ಬೆಳಿಗ್ಗೆ ಎದ್ದ ನಂತ್ರ ಶೇವಿಂಗ್ ಮಾಡಿಕೊಳ್ಳಿ. ಇದರಿಂದ ಚರ್ಮ ಮೃದುವಾಗಿ ಶೇವಿಂಗ್ ಮಾಡುವುದು ಸುಲಭವಾಗುತ್ತದೆ.

ಒಣಗಿದ ಚರ್ಮವಿರುವಾಗ ಎಂದೂ ಶೇವಿಂಗ್ ಮಾಡಬೇಡಿ. ಸಮಯವಿದ್ದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಆಗ ಚರ್ಮ ಮೃದುವಾಗುವ ಜೊತೆಗೆ ಕೂದಲು ಬಿಡಿಬಿಡಿಯಾಗುತ್ತದೆ. ಸಮಯವಿಲ್ಲದ ವೇಳೆ ಬಿಸಿ ನೀರಿನಿಂದ ಮುಖ ತೊಳೆದು 10 ನಿಮಿಷ ಹಾಗೆ ಬಿಡಿ. ನಂತ್ರ ಶೇವಿಂಗ್ ಮಾಡಿಕೊಳ್ಳಿ.

ʼಸೌಂದರ್ಯʼ ವರ್ಧನೆಗೆ ಸರಳ ಸಲಹೆಗಳು

$
0
0

ಸುಂದರವಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ. ಚರ್ಮದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬೇಕೆಂದರೆ ಈ ಸಲಹೆಗಳನ್ನು ಪಾಲಿಸಿ. ಇದರಿಂದ ಸೌಂದರ್ಯ ಇಮ್ಮಡಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

* ಪ್ರತಿದಿನ ಸ್ವಲ್ಪ ತುಳಸಿ ರಸವನ್ನು ಜೇನುತುಪ್ಪದೊಡನೆ ಸೇವಿಸುತ್ತಿದ್ದರೆ, ಮುಖದ ತೇಜಸ್ಸು ಹೆಚ್ಚುತ್ತದೆ. ಅಲ್ಲದೆ ಮುಖದ ಮೇಲಿನ ಕಲೆಗಳೂ ಕೂಡ ಮಾಯವಾಗುತ್ತದೆ.

* ಕಹಿ ಬೇವಿನ ಏಳೆಂಟು ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ತುಸು ಉಗುರು ಬೆಚ್ಚಗಿರುವಾಗಲೇ ಮುಖ ತೊಳೆದುಕೊಳ್ಳುತ್ತಿದ್ದರೆ, ಸೌಂದರ್ಯ ವೃದ್ಧಿಸುತ್ತದೆ. ಅಲ್ಲದೆ ಸಿಡಿಬಿನ ಕಲೆಗಳು ಮಾಯವಾಗುತ್ತವೆ.

* ಹಸಿ ಹಾಲನ್ನು ಮುಖ, ಕೈ, ಕಾಲು ಮತ್ತು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ನಂತರ ಸ್ನಾನ ಮಾಡಿದರೆ ನ್ಯಾಚುರಲ್ ಕಂಡೀಶನರ್‌ನಂತೆ ಕೆಲಸ ಮಾಡುತ್ತದೆ ಮತ್ತು ಮುಖ ಹಾಗೂ ಕೂದಲಿನ ಹೊಳಪನ್ನು ಕಾಯ್ದಿರಿಸಿ ಸೌಂದರ್ಯ ಹೆಚ್ಚಲು ಸಹಕಾರಿಯಾಗುತ್ತದೆ.

* ದಾಲ್ಚಿನಿ ಚಕ್ಕೆಗಳನ್ನು ಪುಡಿ ಮಾಡಿ ನಿಂಬೆರಸ ಸೇರಿಸಿ ಹಚ್ಚಿಕೊಂಡರೆ ಮೊಡವೆಗಳು ಮಾಯವಾಗುತ್ತದೆ.

* ಕಡಲೇ ಹಿಟ್ಟಿಗೆ ಸೌತೆ ರಸ ಬೆರೆಸಿ ಮುಖ ಹಾಗೂ ಕತ್ತಿಗೆ ಹಚ್ಚಿಕೊಂಡು 15 ನಿಮಿಷಗಳ ನಂತರ ಮುಖ ತೊಳೆದುಕೊಳ್ಳಿ. ಪ್ರತಿನಿತ್ಯ ಈ ರೀತಿ ಮಾಡಿದರೆ ತ್ವಚೆ ನುಣುಪು ಹಾಗೂ ಕೋಮಲತೆ ಪಡೆಯುತ್ತದೆ.

* ಸೌತೆಕಾಯಿಯನ್ನು ಅತಿ ತೆಳುವಾಗಿ ಕತ್ತರಿಸಿ, ಅವುಗಳನ್ನು 10 ನಿಮಿಷ ಕಣ್ಣಿನ ರೆಪ್ಪೆ ಮೇಲೆ ಇಟ್ಟುಕೊಂಡರೆ ಕಣ್ಣಿನ ಸುತ್ತಲಿನ ಕಪ್ಪುವೃತ್ತ ಮಾಯವಾಗುತ್ತದೆ.

* ಟೊಮ್ಯಾಟೋ ಕತ್ತರಿಸಿ ಪ್ರತಿದಿನ ಮುಖದ ಮೇಲೆ ತಿಕ್ಕುವುದರಿಂದ ತ್ವಚೆ ಹೊಳಪು ಪಡೆಯುತ್ತದೆ.

* ಹಾಲಿನ ಕೆನೆಯನ್ನು ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ ತ್ವಚೆ ಮೃದುವಾಗುತ್ತದೆ ಅಲ್ಲದೆ ನಂಜುನಿರೋಧಕ ಶಕ್ತಿ ಪಡೆಯುತ್ತದೆ. ಜೊತೆಗೆ ಕಪ್ಪು ಕಲೆ ಹಾಗೂ ನೆರಿಗೆಗಳು ಮಾಯವಾಗುತ್ತದೆ.

* ಪಪ್ಪಾಯಿ ಸಿಪ್ಪೆಯಿಂದ ನಿಯಮಿತವಾಗಿ ಉಜ್ಜಿಕೊಳ್ಳುತ್ತಿದ್ದರೆ ಮಚ್ಚೆಗಳು ನಿವಾರಣೆಯಾಗುತ್ತದೆ.

* ಪ್ರತಿದಿನ ಊಟದ ನಂತರ ಸೇಬುಹಣ್ಣನ್ನು ತಿನ್ನುವುದರಿಂದ ಹಲ್ಲುಗಳು ಹೊಳೆಯುತ್ತದೆ.

ಕಪ್ಪು ಕಾಲು ಬೆಳ್ಳಗಾಗಲು ಇಲ್ಲಿದೆ ‘ಟಿಪ್ಸ್’

$
0
0
2017_3image_14_59_560608839darkfeet-ll

ಮಿನಿ, ಮಿಡಿ, ಶಾರ್ಟ್ಸ್ ಹಾಕಿಕೊಳ್ಳಲು ಅನೇಕ ಹುಡುಗಿಯರು ಇಷ್ಟಪಡ್ತಾರೆ. ಕೆಲವರ ಕಾಲು ಕಪ್ಪಗಿರುವುದರಿಂದ ಇಷ್ಟವಿದ್ರೂ ಮಿನಿ, ಮಿಡಿ ಹಾಕಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೇಸಿಗೆಯಲ್ಲಿ ಕಾಲುಗಳು ಮತ್ತಷ್ಟು ಕಪ್ಪಾಗುತ್ತವೆ. ಬಿಸಿಲಿಗೆ ಕಾಲು ಬಣ್ಣ ಕಳೆದುಕೊಳ್ಳುತ್ತದೆ. ಸುಂದರ ಮುಖಕ್ಕಾಗಿ ನಾವು ಬೇಕಾದಷ್ಟು ಮನೆ ಮದ್ದಿನ ಪ್ರಯೋಗ ಮಾಡ್ತೇವೆ. ಹಾಗೆ ಸುಂದರ ಕಾಲುಗಳಿಗಾಗಿ ಕೆಲವೊಂದು ಟಿಪ್ಸ್ ಇಲ್ಲಿದೆ.

ಮೊಸರು ಮತ್ತು ರೋಸ್ ವಾಟರ್: ಬ್ಲೀಚಿಂಗ್ ಗೆ ಮೊಸರು ಬೆಸ್ಟ್. ಚರ್ಮದ ಡೆಡ್ ಸ್ಕಿನ್ ತೆಗೆದುಹಾಕಿ ಚರ್ಮದ ಕಾಂತಿಯನ್ನು ಇದು ಹೆಚ್ಚಿಸುತ್ತದೆ. ಪ್ರತಿದಿನ 2 ಚಮಚ ಮೊಸರಿಗೆ ಒಂದು ಚಮಚ ರೋಸ್ ವಾಟರ್ ಸೇರಿಸಿ ಕಾಲುಗಳಿಗೆ ಹಚ್ಚಿಕೊಳ್ಳಿ. ಐದು ನಿಮಿಷ ಬಿಟ್ಟು ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.

ಅಲೋವೆರಾ ಮತ್ತು ಬಾದಾಮಿ ಎಣ್ಣೆ : ಅಲೋವೆರಾ ಜೆಲ್ ಕಾಲಿಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ಇಲ್ಲವೆ ಒಂದು ಚಮಚ ಅಲೋವೆರಾ ಜೆಲ್ ಹಾಗೂ ಒಂದು ಚಮಚ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಕಾಲಿಗೆ ಹಾಕಿ ರಬ್ ಮಾಡಿ. ಪ್ರತಿದಿನ ಎರಡು ಬಾರಿ ಹೀಗೆ ಮಾಡುವುದರಿಂದ ಕಾಲು ಕಾಂತಿ ಪಡೆಯುತ್ತದೆ.

ಸೌತೆಕಾಯಿ ಹಾಗೂ ನಿಂಬೆ ರಸ : ಸೌತೆಕಾಯಿ ಹೋಳು ಮಾಡಿ ಇದನ್ನು ಕಾಲಿಗೆ ರಬ್ ಮಾಡಿ. ನಿಂಬೆ ರಸವನ್ನು ಸೌತೆ ಕಾಯಿಗೆ ಬೆರೆಸಿ ಕೂಡ ಮಸಾಜ್ ಮಾಡಿಕೊಳ್ಳಬಹುದು.

ಬೇಕಿಂಗ್ ಸೋಡಾ ಮತ್ತು ಹಾಲು : ಮೂರು ಚಮಚ ಹಾಲಿಗೆ ಒಂದು ಚಮಚ ಬೇಕಿಂಗ್ ಸೋಡಾ ಬೆರೆಸಿ ಇದನ್ನು ಕಾಲಿಗೆ ಹಚ್ಚಿಕೊಳ್ಳಿ. ಗಮನಾರ್ಹವಾದ ಬದಲಾವಣೆ ಕಾಣಬಹುದಾಗಿದೆ.

ಮುಖದ ನೈಸರ್ಗಿಕ ‘ಸೌಂದರ್ಯ’ಕ್ಕಾಗಿ ಸರಳ ವಿಧಾನ

$
0
0

ಸೌಂದರ್ಯ ಹಾಗೂ ಮಹಿಳೆಗೆ ಅವಿನಾಭಾವ ಸಂಬಂಧ. ಸೌದರ್ಯವರ್ದನೆಗೆ ಬ್ಯೂಟಿಪಾರ್ಲರ್ ಗೆ ಹೋಗದ ಹುಡುಗಿಯರಿಲ್ಲ. ದುಬಾರಿ ಹಣ ನೀಡಿ ಶೂನ್ಯ ಫಲಿತಾಂಶ ಪಡೆಯುವ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡೇ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು .ಡಾರ್ಕ್ ಸ್ಕಿನ್, ಒಣ ಚರ್ಮ ಮುಂತಾದ ಸಮಸ್ಯೆಗಳಿಗೆ ಇಲ್ಲಿದೆ ಮನೆ ಮದ್ದು.

ಶುಂಠಿ, ತುಳಸಿ ಮತ್ತು ಪುದೀನ ಎಲೆಗಳ ಪೇಸ್ಟ ಮಾಡಿ ನಿಂಬೆ ರಸ ಮಿಶ್ರಣ ಮಾಡಿ ಮುಖದ ಮೇಲೆ ಫೇಸ್  ಪ್ಯಾಕ್ ರೀತಿ ಹಾಕುವುದರಿಂದ ಮುಖದ ಮೇಲಿನ  ಕಲೆಗಳು ಮಾಯವಾಗುತ್ತವೆ.

ಬಾದಾಮಿ ಮತ್ತು ಪಪ್ಪಾಯಿ ಪೇಸ್ಟ್ನಲ್ಲಿ ಅರಿಶಿನ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿರಿ. ಪಪ್ಪಾಯದ ಒಣಗಿದ  ಸಿಪ್ಪೆ  ಮತ್ತು ಗ್ಲಿಸರಿನ್ ಮಿಶ್ರಣ ಸೇರಿಸಿ ಮುಖದ ಮೇಲೆ ಸ್ಕ್ರಬ್ ಮಾಡುವುದರಿಂದ ಕೂಡ ಮುಖ ಹೆಚ್ಚು ಕಾಂತಿಯುಕ್ತವಾಗಿ ಕಾಣುತ್ತದೆ.

ಮುಲ್ತಾನಿ ಮಿಟ್ಟಿ ಅತ್ಯಂತ ಅಗ್ಗದ ಚರ್ಮದ ಸೌಂದರ್ಯವರ್ಧಕವೆಂದು ಪರಿಗಣಿಸಲಾಗಿದೆ. ಮುಲ್ತಾನಿ ಮಿಟ್ಟಿ, ಆಲಿವ್ ಎಣ್ಣೆ ಮತ್ತು ರೋಸ್ ವಾಟರ್ ಪ್ಯಾಕ್ ಅನ್ನು ಮನೆಯಲ್ಲೇ ತಯಾರಿಸಿ ಮುಖಕ್ಕೆ ಹಚ್ಚಿ. ಮುಲ್ತಾನಿ ಮಿಟ್ಟಿ ಚರ್ಮದ ರಂಧ್ರಗಳಲ್ಲಿ ಅಡಗಿರುವ ಧೂಳು ಮತ್ತು ಬ್ಯಾಕ್ಟೀರಿಯಾ ಹೊರತೆಗೆಯುತ್ತದೆ.

ಬಾದಾಮಿ ತೈಲ, ಜೇನುತುಪ್ಪ, ಸೌತೆಕಾಯಿ ಮತ್ತು ಆಲೂಗೆಡ್ಡೆ ರಸವನ್ನು ಸೇರಿಸಿ ಕಣ್ಣಿನ ಕೆಳಗೆ ಅಪ್ಲೈ ಮಾಡಿ. ಕಣ್ಣಿನ ಕೆಳಗಿನ ಭಾಗದ ಕಪ್ಪುಕಲೆ ಇದ್ರಿಂದ ಮಾಯವಾಗುತ್ತದೆ. ಕಣ್ಣು ಹಾಗು ಮುಖದ ಕಾಂತಿ ಹೆಚ್ಚುತ್ತದೆ.

 

ಒಂದು ರಾತ್ರಿಯಲ್ಲಿ ಮೊಣಕೈ ಜಿಡ್ಡನ್ನು ದೂರ ಮಾಡಲು ಈ ಉಪಾಯ ಮಾಡಿ

$
0
0
2017_4image_10_49_501045091darkelbow-ll

ಬೇಸಿಗೆಯಲ್ಲಿ ತೆಳುವಾದ ಹಾಗೂ ತೋಳಿಲ್ಲದ ಬಟ್ಟೆ ಧರಿಸಲು ಜನರು ಇಷ್ಟಪಡ್ತಾರೆ. ಬೇಸಿಗೆಯಲ್ಲಿ ವಾತಾವರಣ ಹಾಗೂ ಬಿಸಿಲಿನಿಂದಾಗಿ ಕೈ-ಕಾಲುಗಳು ಕಪ್ಪಗಾಗೋದು ಮಾಮೂಲಿ. ಮೊಣಕೈ ಕೂಡ ಕಪ್ಪಾಗೋದ್ರಿಂದ ಪಾರ್ಟಿಯಲ್ಲಿ ಅಥವಾ ಕಚೇರಿಯಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ.

ಡೆಡ್ ಸ್ಕಿನ್ ತೆಗೆದು ಮೊಣಕೈ ಬೆಳ್ಳಗೆ ಮಾಡಿಕೊಳ್ಳಲು ಸಾಕಷ್ಟು ಕಸರತ್ತು ಮಾಡ್ತಾರೆ ಹುಡುಗಿಯರು. ಆದ್ರೆ ಒಂದೇ ಒಂದು ಉಪಾಯದಿಂದ ಮೊಣಕೈ ಬೆಳ್ಳಗೆ ಮಾಡಿಕೊಳ್ಳಬಹುದು.

ಮೊಣಕೈ ಹೊಳಪು ನೀಡುವ ಮನೆ ಮದ್ದಿಗೆ ಬೇಕಾಗುವ ಸಾಮಗ್ರಿ :

2 ಚಮಚ ಜೇನುತಪ್ಪು

1 ಚಮಚ ಆಲಿವ್ ಆಯಿಲ್

½ ಚಮಚ ನಿಂಬು ರಸ

1 ಚಮಚ ಅಡುಗೆ ಸೋಡಾ

ಮಾಡುವ ವಿಧಾನ : ಜೇನುತುಪ್ಪ, ಆಲಿವ್ ಆಯಿಲ್, ನಿಂಬೆ ರಸ, ಅಡುಗೆ ಸೋಡಾವನ್ನು ಒಂದು ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮೊಣಕೈ ಹಾಗೂ ಮೊಣಕಾಲುಗಳಿಗೆ ರಾತ್ರಿ ಹಚ್ಚಿಕೊಳ್ಳಿ. ಇದಕ್ಕೆ ಬಟ್ಟೆ ಕಟ್ಟಿ ರಾತ್ರಿ ಪೂರ್ತಿ ಇಡಿ. ಬೆಳಿಗ್ಗೆ ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸಿ, ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಿ. ತಿಂಗಳಿನಲ್ಲಿ ಮೂರು ಬಾರಿ ಈ ಮದ್ದು ಮಾಡಿ ಪರಿಣಾಮವನ್ನು ನೀವೇ ನೋಡಿ.

ನಿಮ್ಮ ಪಾದರಕ್ಷೆಯ ಆಯ್ಕೆ ಹೀಗಿರಲಿ

$
0
0

ನೀವು ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಜೊತೆಗೆ ಡೇಟಿಂಗ್ ಗೆ ಹೊರಟಿದ್ರೆ ಅಥವಾ ಇನ್ಯಾವುದೇ ಮಹತ್ವದ ಸಭೆಗೆ ಹೋಗುವಾಗ ಆ ಸಂದರ್ಭಕ್ಕೆ ತಕ್ಕಂತಹ ಚಪ್ಪಲಿ ಧರಿಸುವುದು ಬಹಳ ಮುಖ್ಯ.

ಯಾಕಂದ್ರೆ ಪಾದರಕ್ಷೆ ನಮ್ಮ ವ್ಯಕ್ತಿತ್ವದ ಕೈಗನ್ನಡಿಯಿದ್ದಂತೆ. ಮದುವೆ, ಔಟಿಂಗ್, ಪ್ರವಾಸ, ಟ್ರೆಕ್ಕಿಂಗ್, ಶಾಪಿಂಗ್ ಹೀಗೆ ಆಯಾ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ತೆರನಾದ ಪಾದರಕ್ಷೆಗಳನ್ನು ಧರಿಸಬೇಕು.

ಆರಾಮದಾಯಕವಾದ ಸ್ನೀಕರ್ ಶೂಗಳನ್ನು ನೀವು ಯಾವಾಗ ಬೇಕಾದ್ರೂ ಧರಿಸಬಹುದು. ಡೆನಿಮ್ ಹಾಗೂ ಕ್ಲಾಸಿಕಲ್ ಸ್ಟ್ರೇಟ್ ಡೆನಿಮ್ ಗಳ ಮೇಲೂ ಅವು ಚೆನ್ನಾಗಿ ಹೊಂದಿಕೆಯಾಗುತ್ತವೆ.

ವೆಜಸ್ ಗಳಂತೂ ನಿಮ್ಮ ಪಾದಗಳಿಗೆ ಹೇಳಿ ಮಾಡಿಸಿದಂತಿರುತ್ತವೆ. ಹೈಹೀಲ್ಡ್ ಅಂತಾ ಚಿಂತಿಸಬೇಕಿಲ್ಲ. ಪಾದ ನೋವು ಶುರುವಾಗಬಹುದೆಂಬ ಆತಂಕ ಬೇಡ. ಅವು ತುಂಬಾ ಮೃದುವಾಗಿರುವುದರಿಂದ ಕಾಲುಗಳಿಗೂ ಆರಾಮ ಸಿಗುತ್ತದೆ. ಎಲ್ಲಾ ತೆರನಾದ ಉಡುಪಿನ ಜೊತೆಗೂ ಹೊಂದಾಣಿಕೆಯಾಗುತ್ತದೆ.

ಲೋ ಪರ್ಸ್ ಸ್ಲಿಪ್ಪರ್ ಗಳು ಸಖತ್ ಕ್ಲಾಸಿ ಲುಕ್ ಕೊಡುತ್ತವೆ. ಜೊತೆಗೆ ಆರಾಮದಾಯಕವೂ ಹೌದು. ಇದನ್ನು ಶಾರ್ಟ್ಸ್ ಹಾಗೂ ಡೆನಿಮ್ ಎರಡರ ಜೊತೆಗೂ ಧರಿಸಬಹುದು. ಕಪ್ಪು, ನೀಲಿ ಮತ್ತು ಕಂದು ಬಣ್ಣದ ಚಪ್ಪಲಿಗಳನ್ನು ಆಯ್ದುಕೊಳ್ಳಿ.

ಇತ್ತೀಚೆಗೆ ಬಿಳಿಯ ಬೂಟುಗಳು ಫ್ಯಾಷನ್ ಆಗ್ಬಿಟ್ಟಿವೆ. ಅದನ್ನು ಕೂಡ ನೀವು ಕೊಂಡುಕೊಳ್ಳಬಹುದು. ನಿಮ್ಮ ಕ್ಯಾಶುವಲ್ ಕಲೆಕ್ಷನ್ ನಲ್ಲಿ ಅದು ಕೂಡ ಒಂದು. ಇದು ನಿಮ್ಮನ್ನು ಸಖತ್ ಕಲರ್ ಫುಲ್ ಆಗಿ ಕಾಣುವಂತೆ ಮಾಡುತ್ತದೆ, ನಿಮ್ಮ ಲುಕ್ ಇನ್ನಷ್ಟು ಸ್ಟೈಲಿಶ್ ಎನಿಸುತ್ತದೆ.


ಹೊಳೆಯುವ ಬಿಳಿ ಹಲ್ಲು ನಿಮ್ಮದಾಗಬೇಕಾ…?

$
0
0

ಹಲ್ಲು ಕೂಡ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸುಂದರ, ಹೊಳೆಯುವ ಹಲ್ಲು ಮುಂದಿರುವವರನ್ನು ಆಕರ್ಷಿಸುತ್ತದೆ. ಆದ್ರೆ ಕೆಲವರ ಹಲ್ಲು ಬಿಳಿ ಬದಲು ಹಳದಿ ಬಣ್ಣದಲ್ಲಿರುತ್ತದೆ. ಎಲ್ಲರೆದುರು ಹಳದಿ ಬಣ್ಣದ ಹಲ್ಲುಳ್ಳವರು ನಗಲು ಹಿಂದೇಟು ಹಾಕ್ತಾರೆ. ಜನರ ಮುಂದೆ ತಮಾಷೆ ವಸ್ತುವಾಗದಿರಲಿ ಎಂಬುದು ಅವ್ರ ಉದ್ದೇಶ. ಹಳದಿ ಹಲ್ಲನ್ನು ಬಿಳಿ ಹಲ್ಲು ಮಾಡಬಹುದು.

ಹಳದಿ ಬಣ್ಣದ ಹಲ್ಲು ನಿಮ್ಮದಾಗಿದ್ದು,ಹಲ್ಲನ್ನು ಹುಳ ತಿನ್ನಲು ಶುರು ಮಾಡಿದ್ದರೆ ಚಿಂತೆ ಕಾಡುವುದು ಸಾಮಾನ್ಯ. ನೀವು ಇಂಥವರಲ್ಲಿ ಒಬ್ಬರಾಗಿದ್ದರೆ ಹಲ್ಲನ್ನು ನಿಂಬೆ ರಸ ಹಾಗೂ ಉಪ್ಪಿನಿಂದ ಸ್ವಚ್ಛಗೊಳಿಸಿ. ನಿಂಬೆ ರಸಕ್ಕೆ ಉಪ್ಪು ಹಾಗೂ ಸಾಸಿವೆ ಎಣ್ಣೆಯನ್ನು ಹಾಕಿ ಸ್ವಚ್ಛಗೊಳಿಸಿ. ದಿನದಲ್ಲಿ 2 ಬಾರಿ ಹೀಗೆ ಮಾಡಿ. ನಾಲ್ಕೈದು ದಿನಗಳಲ್ಲಿ ನಿಮಗೆ ಫಲಿತಾಂಶ ಸಿಗುತ್ತದೆ.

ಹಲ್ಲನ್ನು ಬಿಳಿಗೊಳಿಸಲು ನೀವು ಇದ್ದಿಲು ಪುಡಿ ಬಳಸಬಹುದು. ಇದ್ದಿಲನ್ನು ಪುಡಿ ಮಾಡಿ ಅದನ್ನು ಹಲ್ಲಿಗೆ ಉಜ್ಜಬೇಕು. ಅನೇಕ ದಿನಗಳ ಕಾಲ ಇದನ್ನು ಬಳಸಬಾರದು.

ಅಡುಗೆ ಸೋಡಾ ಕೂಡ ನಿಮ್ಮ ಹಲ್ಲನ್ನು ಬಿಳಿ ಮಾಡುತ್ತದೆ. ವಾರದಲ್ಲಿ ಒಂದು ಅಥವಾ ಎರಡು ದಿನ ಪೇಸ್ಟ್ ಗೆ ಅಡುಗೆ ಸೋಡಾ ಹಾಕಿ ಬ್ರೆಷ್ ಮಾಡಿ. ಅಡುಗೆ ಸೋಡಾ ನಿಮ್ಮ ಹಲ್ಲನ್ನು ಸ್ವಚ್ಛಗೊಳಿಸುತ್ತದೆ. ಅಡುಗೆ ಸೋಡಾ ಬಳಸಿದ ನಂತ್ರ ಬೆಚ್ಚಗಿನ ನೀರಿನಲ್ಲಿ ಹಲ್ಲನ್ನು ಸ್ವಚ್ಛಗೊಳಿಸಿ.

ಕಿತ್ತಳೆ ಸಿಪ್ಪೆಕೂಡ ನಿಮ್ಮ ಹಲ್ಲನ್ನು ಬಿಳಿ ಬಣ್ಣಕ್ಕೆ ತರುವಲ್ಲಿ ನೆರವಾಗುತ್ತದೆ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ಹಲ್ಲುಜ್ಜಲು ಬಳಸಿ.

ಬೇಡದ ಕೂದಲಿನ ನಿವಾರಣೆಗೆ ‘ಸುಲಭ ಉಪಾಯ’

$
0
0

ಸಾಮಾನ್ಯವಾಗಿ ಮಹಿಳೆಯರಿಗೆಲ್ಲ ಬೇಡದ ಕೂದಲುಗಳೇ ದೊಡ್ಡ ತಲೆನೋವು. ಅದರಲ್ಲೂ ಮುಖದ ಮೇಲೆ ಕೂದಲಿದ್ದರೆ ಸ್ತ್ರೀಯರು ತುಂಬಾನೇ ಮುಜುಗರಪಟ್ಟುಕೊಳ್ತಾರೆ. ಅದನ್ನು ಹೋಗಲಾಡಿಸೋದು ಹೇಗೆ ಅನ್ನೋದು ಎಲ್ಲರನ್ನೂ ಕಾಡುವ ಪ್ರಶ್ನೆ.

ಎಲ್ರೂ ಕೂದಲಿನ ನಿವಾರಣೆಗಾಗಿ ಫೇಶಿಯಲ್, ವ್ಯಾಕ್ಸಿಂಗ್ ಅಂತಾ ಬ್ಯೂಟಿ ಪಾರ್ಲರ್ ಗೆ ಅಲೆಯೋದು ಸಾಮಾನ್ಯ. ಆದ್ರೆ ಇನ್ಮೇಲೆ ಅದಕ್ಕಾಗಿ ನೀವು ಚಿಂತಿಸಬೇಕಿಲ್ಲ. ಮುಖದ ಮೇಲಿರುವ ಬೇಡದ ಕೂದಲುಗಳನ್ನು ಶಾಶ್ವತವಾಗಿ ಸರಳ ವಿಧಾನದ ಮೂಲಕ ಕಿತ್ತು ಹಾಕಬಹುದು. ಅದಕ್ಕಾಗಿಯೇ ಸಣ್ಣದೊಂದು ಟ್ರಿಕ್ಸ್ ಇದೆ.

ಒಂದು ಟೇಬಲ್ ಚಮಚ ಓಟ್ ಮೀಲ್ ಪೇಸ್ಟ್, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆರಸ ತೆಗೆದುಕೊಳ್ಳಿ. ಇವನ್ನೆಲ್ಲ ಚೆನ್ನಾಗಿ ಮಿಶ್ರಮಾಡಿ ಪೇಸ್ಟ್ ತಯಾರಿಸಿ. ಮುಖದಲ್ಲಿ ಎಲ್ಲೆಲ್ಲಿ ನಿಮಗೆ ಬೇಡದ ಕೂದಲನ್ನು ತೆಗೆದು ಹಾಕಬೇಕೋ ಅಲ್ಲೆಲ್ಲಾ ಈ ಪೇಸ್ಟ್ ಹಚ್ಚಿ. 15 ನಿಮಿಷಗಳವರೆಗೆ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡಿರಿ. 15 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ನಂತರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

ಈ ರೀತಿ ವಾರಕ್ಕೆ 2-3 ಬಾರಿ ಮಾಡಿ. ಒಂದು ತಿಂಗಳಲ್ಲೇ ಬದಲಾವಣೆಯನ್ನು ಗಮನಿಸಬಹುದು. ಬೇಡದ ಕೂದಲುಗಳು ಮುಖದ ಮೇಲಿಂದ ಸಂಪೂರ್ಣ ಮಾಯವಾಗಿರುತ್ತವೆ.

ದಟ್ಟ ಹಾಗೂ ಹೊಳಪು ಕೂದಲಿಗೆ ʼದಾಸವಾಳʼ ಮದ್ದು….

$
0
0

ದಟ್ಟವಾದ, ಕಪ್ಪನೆಯ ಕೂದಲು ಮಹಿಳೆಯರ ಕನಸು. ಸುಂದರ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಮಾರುಕಟ್ಟೆಯಲ್ಲಿ ಕೂದಲು ಬೆಳವಣಿಗೆಗೆ ಸಿಗುವ ಎಲ್ಲ ಉತ್ಪನ್ನಗಳನ್ನು ಕೊಂಡು ತಂದು ಪ್ರಯೋಗ ಮಾಡ್ತಾರೆ. ಆದ್ರೆ ಇದರಿಂದ ಕೂದಲು ಬೆಳೆಯುವ ಬದಲು ಮತ್ತಷ್ಟು ಕೂದಲು ಉದುರಲು ಕಾರಣವಾಗುತ್ತದೆ.

ಮನೆಯಲ್ಲಿ ಸುಲಭವಾಗಿ ಸಿಗುವ ದಾಸವಾಳದ ಹೂ ನಿಮ್ಮ ಕೂದಲಿಗೆ ಹೇಳಿ ಮಾಡಿಸಿದ ಔಷಧ. ಕೂದಲು ಉದುರುವುದನ್ನು ತಡೆಯುವ ಜೊತೆಗೆ ಗಟ್ಟಿಯಾದ ಸುಂದರ ಕಪ್ಪು ಕೂದಲು ಬೆಳೆಯಲು ನೆರವಾಗುತ್ತದೆ.

ದಾಸವಾಳದ ಜೊತೆ ಬೇರೆ ಬೇರೆ ಉತ್ಪನ್ನಗಳನ್ನು ಬೆರೆಸಿ ಮಾಸ್ಕ್ ತಯಾರಿಸಿಕೊಂಡು ಬಳಸಬಹುದಾಗಿದೆ.

ದಾಸವಾಳ-ಈರುಳ್ಳಿ : ದಾಸವಾಳದ ರಸ, ಈರುಳ್ಳಿ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತ್ರ ತೊಳೆಯಿರಿ.

ದಾಸವಾಳ–ನೆಲ್ಲಿ : ದಾಸವಾಳ ಹಾಗೂ ನೆಲ್ಲಿ ರಸವನ್ನು ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ದಾಸವಾಳ ಹಾಗೂ ಆಲಿವ್ ಆಯ್ಲ್ : ಇದನ್ನು ಶಾಂಪೂ ರೀತಿಯಲ್ಲಿಯೂ ಬಳಸಬಹುದು. ದಾಸವಾಳದ ಎಲೆ ಹಾಗೂ ಹೂವನ್ನು ಮಿಶ್ರಮಾಡಿ ಅದಕ್ಕೆ ಸ್ವಲ್ಪ ಹನಿ ಆಲಿವ್ ಆಯಿಲ್ ಮಿಕ್ಸ್ ಮಾಡಿ ಬಳಸಿ.

ದಾಸವಾಳ-ಕರಿಬೇವು : ದಾಸವಾಳ ಹಾಗೂ ಕರಿಬೇವಿನ ಎಲೆಯ ರಸಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಕೂದಲಿಗೆ ಹಚ್ಚಿಕೊಳ್ಳಿ.

ದಾಸವಾಳ –ಮೆಂತ್ಯೆ : ಮೆಂತ್ಯೆಯನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಮೆಂತ್ಯೆ ಜೊತೆ ದಾಸವಾಳ ಸೇರಿಸಿ ಮಿಕ್ಸಿ ಮಾಡಿ. ಇದನ್ನು ಕೂದಲಿನ ಬುಡಕ್ಕೆ ಸರಿಯಾಗಿ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಈ ಮಿಶ್ರಣದಿಂದ ಕೂದಲು ಹೊಳಪು ಪಡೆಯುವ ಜೊತೆಗೆ ಕೂದಲು ಉದುರುವುದು ಕಡಿಮೆಯಾಗುತ್ತದೆ.

ತುಟಿಗಳ ಕಾಂತಿ ಹೆಚ್ಚಿಸಲು ಮನೆಯಲ್ಲೇ ನೈಸರ್ಗಿಕ ಪ್ಯಾಕ್

$
0
0
ತುಟಿಗಳು ಒಣಗಿದ್ದು, ನಿರ್ಜೀವವಾಗಿ ಕಂಡು ಬರುವ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿರುತ್ತದೆ. ಇದನ್ನು ದೂರ ಮಾಡಲು ಲಿಪ್ ಸ್ಟಿಕ್ ಹಾಕಿಕೊಳ್ಳುವುದು ಸೂಕ್ತ ಪರಿಹಾರವಲ್ಲ. ತುಟಿಗಳಿಗೆ ಆಗಾಗ ಈ ಸಣ್ಣಪುಟ್ಟ ಪ್ಯಾಕ್‌ಗಳನ್ನು ಹಾಕಿಕೊಳ್ಳಬೇಕು.

ಗುಲಾಬಿ ಜಲ

ಗುಲಾಬಿ ಜಲವು ಚರ್ಮಕ್ಕೆ ಆಹ್ಲಾದ ನೀಡಿ ಮೃದುವಾಗಿ ಮಾರ್ಪಾಡು ಮಾಡುತ್ತದೆ. ಈ ನೀರು ನೈಜವಾಗಿಯೇ ತುಟಿಗಳಿಗೆ ತಿಳಿ ಗುಲಾಬಿ ಬಣ್ಣವನ್ನು ನೀಡುತ್ತದೆ. ಕೆಲವು ಹನಿಗಳಷ್ಟು ಗುಲಾಬಿ ಜಲ, ಸ್ವಲ್ಪ ಜೇನು ಬೆರಸಿ ತುಟಿಗಳಿಗೆ ಹಚ್ಚಿ. ಪ್ರತಿದಿನ ಈ ರೀತಿ ಮಾಡಿದರೆ ತುಂಬಾ ಕಡಿಮೆ ಅವಧಿಯಲ್ಲಿ ಬದಲಾವಣೆ ಕಂಡು ಬರುತ್ತದೆ.

ಬೀಟ್‌ರೂಟ್‌

ಇದು ತುಟಿಗಳ ಮೇಲಿರುವ ಕಲೆಗಳನ್ನು ದೂರ ಮಾಡುತ್ತದೆ. ತಾಜ ಬೀಟ್ ರೂಟ್ ರಸವನ್ನು ರಾತ್ರಿ ಹಚ್ಚಿ
ಮುಂಜಾನೆ ತೊಳೆಯಬೇಕು. ಈ ರೀತಿ ತಪ್ಪದೇ ಮಾಡಿದರೆ ತುಟಿ ತಿಳಿಗೆಂಪು ಬಣ್ಣವನ್ನು ತನ್ನದಾಗಿಸಿಕೊಳ್ಳುತ್ತದೆ.

ದಾಳಿಂಬೆ

ಈ ಬೀಜಗಳ ರಸವನ್ನು ಒಣಗಿದ ತುಟಿಗೆ ಹಚ್ಚಿದರೆ ಪೋಷಣೆ ಜೊತೆಗೆ ತೇವದಿಂದ ಕೂಡಿರುತ್ತದೆ. ಒಂದು ದೊಡ್ಡ ಚಮಚದಷ್ಟು ದಾಳಿಂಬೆ ರಸ, ಕೆನೆ, ಗುಲಾಬಿ ನೀರು ಎಲ್ಲವನ್ನು ಮಿಶ್ರ ಮಾಡಬೇಕು. ತುಟಿಗೆ ಹಚ್ಚಿ ಕೆಲವು ನಿಮಿಷಗಳ ಕಾಲ ಮೃದುವಾಗಿ ಮರ್ದನ ಮಾಡಬೇಕು. ಸ್ವಲ್ಪ ಸಮಯದ ಬಳಿಕ ಉಗುರು ಬೆಚ್ಚಗಿರುವ ನೀರಿನಿಂದ ಸ್ವಚ್ಛಗೊಳಿಸಬೇಕು.

ಸೌತೆಕಾಯಿ

ಪ್ರತಿದಿನ ಸೌತೆಕಾಯಿ ಚೂರುಗಳಿಂದ ತುಟಿಗಳನ್ನು ಮೃದುವಾಗಿ ಉಜ್ಜಬೇಕು. ಆಗ ಅದರ ರಸವನ್ನು ತುಟಿಯು ಹೀರುತ್ತದೆ. ಈ ರೀತಿ ಪ್ರತಿದಿನ ಐದು ನಿಮಿಷ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಬಾದಾಮಿ ಎಣ್ಣೆ

ತುಟಿಯು ಕಪ್ಪಗಿದ್ದವರು, ಮೃದುವಾಗಿ ಬದಲಾಗಬೇಕೆಂದರೆ ಬಾದಾಮಿ ಎಣ್ಣೆಯನ್ನು ಬಳಸುವುದು ಉತ್ತಮ. ಒಂದು ದೊಡ್ಡ ಚಮಚ ಜೇನಿನಲ್ಲಿ ಐದಾರು ಹನಿಗಳಷ್ಟು ಬಾದಾಮಿ ಎಣ್ಣೆಯನ್ನು ಬೆರಸಿ ತುಟಿಗಳಿಗೆ ಹಚ್ಚಿ ಮೃದುವಾಗಿ ಮರ್ದನ ಮಾಡಬೇಕು. ಹೀಗೆ ಆಗಾಗ ಮಾಡುವುದರಿಂದ ಪೋಷಣೆ ದೊರಕುವುದಲ್ಲದೆ ಹೊಳಪಿನ ಬಣ್ಣವು ನಿಮ್ಮದಾಗುತ್ತದೆ.

ಕೋಮಲ ಕೈ ನಿಮ್ಮದಾಗಬೇಕಾ…? ಇಲ್ಲಿದೆ ‘ಟಿಪ್ಸ್’

$
0
0

ಕೆಲವರ ಕೈ ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿ ಕೂಡ ಶುಷ್ಕವಾಗಿರುತ್ತದೆ. ಮುಟ್ಟಿದ್ರೆ ಒರಟು ಅನುಭವವಾಗುತ್ತದೆ. ಗಾಳಿ, ಸೂರ್ಯನ ಕಿರಣ ಹಾಗೂ ರಾಸಾಯನಿಕ ವಸ್ತುಗಳನ್ನು ಮುಟ್ಟುವುದು ಹಾಗೂ ದೈಹಿಕ ಪರಿಶ್ರಮ ಎಲ್ಲವೂ ಇದಕ್ಕೆ ಕಾರಣವಾಗುತ್ತದೆ.

ಒಣಗಿರುವ, ಸೌಂದರ್ಯ ಕಳೆದುಕೊಂಡಿರುವ ನಿಮ್ಮ ಕೈಗಳನ್ನು ಕೋಮಲಗೊಳಿಸಲು ಈ ಕೆಳಗಿನ ಉಪಾಯಗಳನ್ನು ಅನುಸರಿಸಿ.

ಒಣ ಕೈ ಸಮಸ್ಯೆಗೆ ಕ್ಯಾಸ್ಟರ್ ಆಯಿಲ್ ಒಳ್ಳೆಯ ಮದ್ದು. ಕ್ಯಾಸ್ಟರ್ ಆಯಿಲ್ ಗೆ ನಿಂಬೆ ರಸ ಹಾಗೂ ಆಲಿವ್ ಆಯಿಲ್ ಹಾಕಿ ಈ ಮಿಶ್ರಣವನ್ನು ಅಂಗೈಗೆ ಹಚ್ಚಿ ಉಜ್ಜಿಕೊಳ್ಳಿ. ಇದು ಕೈಗಳನ್ನು ಮೃದುಗೊಳಿಸುತ್ತದೆ.

ಟೋಮೋಟೋ ಕೂಡ ನಿಮ್ಮ ಕೈಗಳನ್ನು ಕೋಮಲಗೊಳಿಸುತ್ತದೆ. ಟೊಮೊಟೊ ರಸಕ್ಕೆ ಸಮ ಪ್ರಮಾಣದಲ್ಲಿ ನಿಂಬೆ ರಸ ಹಾಗೂ ಗ್ಲಿಸರಿನ್ ಹಾಕಿ ಅಂಗೈ ಉಜ್ಜಿಕೊಳ್ಳಿ. ಎರಡು ನಿಮಿಷದ ನಂತ್ರ ಕೈ ತೊಳೆದುಕೊಳ್ಳಿ.

ಸಮ ಪ್ರಮಾಣದಲ್ಲಿ ಆಲಿವ್ ಆಯಿಲ್ ಹಾಗೂ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ, ಕೈಗೆ ಹಚ್ಚಿ ಉಜ್ಜಿಕೊಳ್ಳಿ. ಇದು ಕೈಗಳನ್ನು ಮೃದುಗೊಳಿಸಿ, ಶುಷ್ಕವನ್ನು ಹೋಗಲಾಡಿಸುತ್ತದೆ.

Viewing all 3709 articles
Browse latest View live


<script src="https://jsc.adskeeper.com/r/s/rssing.com.1596347.js" async> </script>