Quantcast
Channel: Beauty | Kannada Dunia | Kannada News | Karnataka News | India News
Viewing all 3709 articles
Browse latest View live

‘ಆರೋಗ್ಯಕರ’ಕೂದಲು ನಿಮ್ಮದಾಗಬೇಕಾ…?

$
0
0

ನಮ್ಮ ಸೌಂದರ್ಯದ ಒಂದು ಭಾಗ ಕೂದಲು. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುವವರಿದ್ದಾರೆ. ಸಮಯದ ಜೊತೆ ಜನರು ಆರೋಗ್ಯಕರ ಕೂದಲನ್ನು ಕಳೆದುಕೊಳ್ತಿದ್ದಾರೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗ್ತಿದೆ. ಕೂದಲು ಬೆಳ್ಳಗಾಗುವುದು, ತಲೆ ಹೊಟ್ಟು ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತವೆ.

ನಿಮ್ಮ ಕೂದಲು ಕೂಡ ಹೊಳಪು ಕಳೆದುಕೊಂಡು ಉದುರುತ್ತಿದ್ದರೆ ಸರಳ ಮನೆ ಮದ್ದಿನ ಮೂಲಕ ಆರೋಗ್ಯ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.

ಕರಿಬೇವು : ಕರಿಬೇವಿನ ಪೇಸ್ಟ್ ಮಾಡಿ ಅದಕ್ಕೆ ಒಂದು ಚಮಚ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ವಾರದಲ್ಲಿ ಎರಡರಿಂದ ಮೂರು ಬಾರಿ ಈ ಪೇಸ್ಟನ್ನು ತಲೆಗೆ ಹಚ್ಚಿಕೊಳ್ಳಿ. ಇದು ಕೂದಲು ಹೊಳಪು ಪಡೆಯಲು ನೆರವಾಗುತ್ತದೆ.

ಮೆಂತ್ಯ : ಮೆಂತ್ಯವನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ತಲೆಗೆ ಹಚ್ಚಿಕೊಂಡು ಒಣಗಿದ ನಂತ್ರ ತಲೆ ಸ್ನಾನ ಮಾಡಿ. ನಿಧಾನವಾಗಿ ಕೂದಲು ಹೊಳಪು ಪಡೆಯುವ ಜೊತೆಗೆ ಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ.

ಆಲಿವ್ ಆಯಿಲ್ : ಮೂರರಿಂದ ನಾಲ್ಕು ಚಮಚ ಆಲಿವ್ ಆಯಿಲ್ ತೆಗೆದುಕೊಂಡು ಬಿಸಿ ಮಾಡಿ. ಸ್ವಲ್ಪ ಬಿಸಿಯಾದ ಮೇಲೆ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಸುಮಾರು ಒಂದು ಗಂಟೆ ನಂತ್ರ ತಲೆ ತೊಳೆದುಕೊಳ್ಳಿ.

ಮೊಸರು : ಈರುಳ್ಳಿ ರಸಕ್ಕೆ ಮೊಸರನ್ನು ಸೇರಿಸಿ. ಈ ಮಿಶ್ರಣಕ್ಕೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ನೆತ್ತಿಯ ಮೇಲೆ ಹಚ್ಚಿ. ಸ್ವಲ್ಪ ಸಮಯದ ನಂತ್ರ ಕೂದಲನ್ನು ತೊಳೆಯಿರಿ.


ನಿಮ್ಮ ತೂಕ ಇಳಿಸಲು ನೆರವಾಗುತ್ತೆ ʼಚೆಂದದ ಗುಲಾಬಿʼ

$
0
0

ತೂಕ ಇಳಿಸಿಕೊಳ್ಳಲು ಅನೇಕರು ಡಯೆಟ್, ವ್ಯಾಯಾಮ ಮಾಡ್ತಾರೆ. ಆದ್ರೆ ಬಹುತೇಕರ ತೂಕ ಎಷ್ಟು ಪ್ರಯತ್ನಪಟ್ಟರೂ ಕಡಿಮೆಯಾಗೋದಿಲ್ಲ. ತೂಕ ಕಡಿಮೆ ಮಾಡಿಕೊಳ್ಳಲು ಸುಂದರ ಗುಲಾಬಿ ಹೂ ನಿಮಗೆ ನೆರವಾಗಬಹುದು.

ಯಸ್, ಗುಲಾಬಿ ಹೂವಿನಲ್ಲಿರುವ ಲ್ಯಾಕ್ಸೆಟಿವ್ ಗುಣ ನಿಮ್ಮ ಚಯಾಪಚಯವನ್ನು ಸರಿಪಡಿಸುತ್ತದೆ. ಹಾಗೆ ಹೊಟ್ಟೆಯಲ್ಲಿರುವ ಟಾಕ್ಸಿನ್ ತೆಗೆದುಹಾಕುತ್ತದೆ. ಚಯಾಪಚಯ ವೇಗವಾಗಿ ನಡೆಯುವುದ್ರಿಂದ ಕ್ಯಾಲೋರಿ ವೇಗವಾಗಿ ಕಡಿಮೆಯಾಗುತ್ತದೆ. ಇದು ತೂಕವನ್ನು ನಿಯಂತ್ರಿಸಲು ನೆರವಾಗುತ್ತದೆ.

ಆಯುರ್ವೇದದಲ್ಲಿ ಗುಲಾಬಿ ಎಸಳನ್ನು ಔಷಧಿಗಾಗಿ ಬಳಸ್ತಾರೆ. ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟು ಸುಸ್ತಾಗಿದ್ದರೆ ನೀವು ಗುಲಾಬಿಯನ್ನು ಬಳಸಿನೋಡಿ.

ಮೊದಲು 10-15 ಗುಲಾಬಿ ದಳವನ್ನು ಸ್ವಚ್ಛಗೊಳಿಸಿ. ಒಂದು ಲೋಟ ನೀರಿಗೆ ದಳವನ್ನು ಹಾಕಿ ಕುದಿಸಿ. ನೀರಿನ ಬಣ್ಣ ಕಂದು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿದ ನಂತ್ರ ನೀರಿಗೆ ಚಿಟಕಿ ಏಲಕ್ಕಿ ಪುಡಿ ಹಾಗೂ ಜೇನುತುಪ್ಪವನ್ನು ಹಾಕಿ. ದಿನದಲ್ಲಿ ಎರಡು ಬಾರಿ ಟೀ ರೂಪದಲ್ಲಿ ಇದನ್ನು ಸೇವನೆ ಮಾಡಿ. ಇದು ಕೇವಲ ತೂಕ ಕಡಿಮೆ ಮಾಡುವುದೊಂದೇ ಅಲ್ಲ ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.

ಹೀಗೆ ಮಾಡಿದ್ರೆ ಕೆಂಪಗಾಗುತ್ತೆ ಮೆಹಂದಿ ಬಣ್ಣ…!

$
0
0

ಕೈಗಳ ಅಂದ ಹೆಚ್ಚಿಸಲು ಮಾತ್ರ ಮೆಹಂದಿ ಬಳಸುವುದಿಲ್ಲ. ಇದನ್ನು ಶುಭ ಸಂಕೇತವೆಂದು ನಂಬಲಾಗಿದೆ. ನಮ್ಮ ದೇಶದಲ್ಲಿ ಯಾವುದೇ ಹಬ್ಬ, ಸಮಾರಂಭವಿರಲಿ. ಕೈಗೆ ಮೆಹಂದಿ ಬಣ್ಣವಿಲ್ಲದೆ ಅದು ಪೂರ್ತಿಯಾಗುವುದಿಲ್ಲ. ಚೆಂದದ ಬಟ್ಟೆ, ಸುಂದರ ಮೇಕಪ್ ಜೊತೆ ಕೈ ಅಂದ ಹೆಚ್ಚಿಸಲು ಮೆಹಂದಿ ಇರಬೇಕು.

ಮೆಹಂದಿ ಹಚ್ಚಿದ್ರೆ ಸಾಕಾಗೊಲ್ಲ, ಅದು ಸರಿಯಾಗಿ ಬಣ್ಣ ಬಿಡಬೇಕು. ಎಲ್ಲ ಡಿಸೈನ್ ಸರಿಯಾಗಿ ಮೂಡಬೇಕು. ಕೆಲವೊಮ್ಮೆ ಮೆಹಂದಿ ಹಸಿಯಿರುವಾಗ ಸುಂದರವಾಗಿ ಕಾಣುತ್ತೆ. ಆದ್ರೆ ಬಣ್ಣ ಮಾತ್ರ ಸರಿಯಾಗಿ ಬಂದಿರುವುದಿಲ್ಲ. ಕೆಲವರ ಕೈಗೆ ಮೆಹಂದಿ ಕೇಸರಿಯಾದ್ರೆ ಮತ್ತೆ ಕೆಲವರ ಕೈಗೆ ಮೆಹಂದಿ ಕಪ್ಪಾಗಿಬಿಡುತ್ತದೆ. ಹಾಗಾಗಿ ಮೆಹಂದಿ ಹಚ್ಚಿಸಿಕೊಳ್ಳುವಾಗ ಕೆಲವೊಂದರ ಬಗ್ಗೆ ಗಮನ ನೀಡಿದ್ರೆ ಬಣ್ಣ ಸರಿಯಾಗಿ ಮೂಡುತ್ತದೆ.

ಮೆಹಂದಿ ಹಚ್ಚಿದ ನಂತ್ರ ತಾಳ್ಮೆ ವಹಿಸಬೇಕಾಗುತ್ತದೆ. ಕನಿಷ್ಠ ಐದರಿಂದ ಆರು ಗಂಟೆಗಳ ಕಾಲ ಗೋರಂಟಿ ಹಚ್ಚಿ ಹಾಗೆ ಬಿಡಬೇಕು.

ನಿಂಬು ಹಾಗೂ ಸಕ್ಕರೆ ಮಿಶ್ರಣ ಕೂಡ ಗೋರಂಟಿ ಬಣ್ಣ ಬಿಡಲು ಸಹಾಯ ಮಾಡುತ್ತದೆ. ವಾಸ್ತವವಾಗಿ ಈ ಮಿಶ್ರಣದಿಂದ ಬಹಳ ಹೊತ್ತು ಮೆಹಂದಿ ಹಸಿಯಾಗಿರುತ್ತದೆ. ಹಾಗೆ ಮೆಹಂದಿ ಕೆಂಪಾಗಲು ನೆರವಾಗುತ್ತದೆ.

ಬಾಣಲೆಗೆ ಲವಂಗದ ಮೊಗ್ಗನ್ನು ಹಾಕಿ ಬಿಸಿ ಮಾಡಿ, ಆ ಉಗಿಯಲ್ಲಿ ನಿಮ್ಮಕೈ ಇಡಿ. ಇದು ಮೆಹಂದಿ ಬಣ್ಣ ಬಿಡಲು ನೆರವಾಗುತ್ತದೆ.

ಮೆಹಂದಿಯನ್ನು ತೆಗೆಯಲು ನೀರನ್ನು ಬಳಸಬೇಡಿ. 10-12 ಗಂಟೆಗಳ ಕಾಲ ನೀರಿನಿಂದ ದೂರ ಇರುವುದು ಒಳ್ಳೆಯದು. ಸೋಪ್ ಬಳಕೆ ಬೇಡವೇ ಬೇಡ. ಹಾಗೆ ಸಾಸಿವೆ ಎಣ್ಣೆಯಿಂದ ಕೈ ತೊಳೆಯುವುದು ಉತ್ತಮ.

ಹೊಳಪಿನ ಕಣ್ಣು ನಿಮ್ಮದಾಗಬೇಕಾದ್ರೆ ಈ ಆಹಾರವನ್ನು ಅವಶ್ಯವಾಗಿ ಸೇವನೆ ಮಾಡಿ

$
0
0

ಬ್ಯುಸಿ ಲೈಫ್ ನಲ್ಲಿ ಒತ್ತಡ ಸಾಮಾನ್ಯ. ಒತ್ತಡದ ಪರಿಣಾಮವನ್ನು ಇಡೀ ದೇಹದಲ್ಲಿ ಕಾಣಬಹುದಾಗಿದೆ. ಅದ್ರಲ್ಲೂ ಕಣ್ಣು ನಮ್ಮ ದಣಿವನ್ನು ಸ್ಪಷ್ಟವಾಗಿ ಹೇಳುತ್ತದೆ. ಒತ್ತಡ ಹಾಗೂ ದಣಿವಾದಲ್ಲಿ ಕಣ್ಣು ಮಂಕಾಗುತ್ತದೆ. ಒತ್ತಡದಿಂದ ಹೊಳಪು ಕಳೆದುಕೊಳ್ಳುವ ಕಣ್ಣುಗಳಿಗೆ ಚೈತನ್ಯ ತುಂಬುವ ಕೆಲಸವನ್ನು ಕೆಲ ಆಹಾರ ಮಾಡುತ್ತದೆ. ಸುಂದರ ಕಣ್ಣಿಗಾಗಿ ಕೆಲವೊಂದು ಆಹಾರವನ್ನು ಅವಶ್ಯವಾಗಿ ಸೇವನೆ ಮಾಡಿ.

ಕಾರ್ನ್ : ಕಣ್ಣಿನ ಸೌಂದರ್ಯಕ್ಕೆ ಧಾನ್ಯಗಳು ಬೆಸ್ಟ್. ಕಾರ್ನ್ ಕಣ್ಣಿನ ಹೊಳಪನ್ನು ಹೆಚ್ಚಿಸುತ್ತದೆ. ಜಿಕ್ಸಾಂಥಿನ್, ಲಿಟೀನ್, ಆಂಟಿ ಆಕ್ಸಿಡೆಂಟ್ ಗಳಂತ ಅಂಶ ಕಾರ್ನ್ ನಲ್ಲಿರುವುದ್ರಿಂದ ಇದು ಕಣ್ಣನ್ನು ಸದಾ ಆರೋಗ್ಯವಾಗಿರಿಸುತ್ತದೆ.

ಟೋಮೋಟೋ : ಡಯೆಟ್ ನಲ್ಲಿ ಆಂಟಿ ಆಕ್ಸಿಡೆಂಟ್ ವಸ್ತುಗಳು ಅವಶ್ಯವಾಗಿರಲಿ. ಟೋಮೋಟೋದಲ್ಲಿ ಲೈಕೋಪೀನ್ ನಂತಹ ಆಂಟಿ ಆಕ್ಸಿಡೆಂಟ್ ಅಂಶವಿರುತ್ತದೆ. ಇದು ಕಣ್ಣಿಗೆ ಬಹಳ ಪ್ರಯೋಜನಕಾರಿ.

ಕ್ಯಾರೆಟ್ : ಕ್ಯಾರೆಟ್ ನಲ್ಲಿ ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಪ್ರತಿದಿನ ಕ್ಯಾರೆಟ್ ಸೇವನೆ ಮಾಡುವುದ್ರಿಂದ ಕಣ್ಣಿನ ಅನೇಕ ಸಮಸ್ಯೆಗಳು ದೂರವಾಗುತ್ತವೆ.

ಆಲಿವ್ ಆಯಿಲ್ : ಆಲಿವ್ ಆಯಿಲ್ ಕಣ್ಣಿಗೆ ಬಹಳ ಪ್ರಯೋಜನಕಾರಿ. ಕಣ್ಣಿನ ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿ ಆಲಿವ್ ಆಯ್ಲಿಗಿದೆ.

ಸಿಹಿ ಆಲೂಗಡ್ಡೆ : ಆರೋಗ್ಯಕರ ಕಣ್ಣಿಗೆ ಸಿಹಿ ಆಲೂಗಡ್ಡೆ ಬೆಸ್ಟ್. ಇದ್ರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಫೈಬರ್, ಮ್ಯಾಂಗನೀಸ್, ಪೋಟ್ಯಾಸಿಯಂ ಇರುತ್ತದೆ.

ಈ ಐದು ಉಪಾಯದಿಂದ ಏರಿರುವ ತೂಕ ಇಳಿಸಿ

$
0
0

ತಮ್ಮ ಸೌಂದರ್ಯ, ತೂಕದ ಬಗ್ಗೆ ಹುಡುಗಿಯರು ಹೆಚ್ಚಿನ ಗಮನ ನೀಡ್ತಾರೆ. ಪಾರ್ಟಿ, ಸಮಾರಂಭದಲ್ಲಿ ಆಕರ್ಷಕವಾಗಿ ಕಾಣಬೇಕೆಂದು ಕನಸು ಕಾಣ್ತಾರೆ. ಆದ್ರೆ ಏರಿರುವ ತೂಕ ಹಾಗೂ ಹೊಟ್ಟೆಯಿಂದಾಗಿ ಅವರಿಗಿಷ್ಟವಾಗುವ ಬಟ್ಟೆ ಧರಿಸಲು ಸಾಧ್ಯವಾಗುವುದಿಲ್ಲ. ಮುಜುಗರಕ್ಕೊಳಗಾಗುವ ಹುಡುಗಿಯರು ಬೊಜ್ಜು ಕರಗಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ.

ಕೆಲಸದ ಒತ್ತಡ ಅಥವಾ ಇನ್ಯಾವುದೋ ಕಾರಣಕ್ಕಾಗಿ ತೂಕ ಏರಿರುತ್ತದೆ. ಇದ್ರ ಬಗ್ಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದಿಲ್ಲ. ಕೆಲಸದ ನಡುವೆ ದೇಹದ ಸೌಂದರ್ಯ ಹಾಗೂ ಆರೋಗ್ಯಕ್ಕೆ ಕೆಲವೊಂದಿಷ್ಟು ಸಮಯ ನೀಡುವುದು ಅವಶ್ಯಕ.

ತೂಕ ಇಳಿಸಿಕೊಂಡು ಬೊಜ್ಜು ಹೊಟ್ಟೆ ಕರಗಿಸಿಕೊಳ್ಳಲು ಬಯಸಿದ್ದರೆ ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡಿ. ಹೊಟ್ಟೆ ಬೊಜ್ಜು ಕರಗಿಸಿಕೊಳ್ಳಲು ಅದಕ್ಕೆ ಸಂಬಂಧಿಸಿದ ವ್ಯಾಯಾಮವನ್ನು ಅವಶ್ಯವಾಗಿ ಮಾಡಿ. ದಿನದಲ್ಲಿ 500-600 ಕ್ಯಾಲೋರಿ ಬರ್ನ್ ಮಾಡುವ ವ್ಯಾಯಾಮ ಮಾಡಿ.

ಆಹಾರದ ಜೊತೆ ಹೆಚ್ಚು ಉಪ್ಪು ಬಳಸುವುದರಿಂದ ರಕ್ತದೊತ್ತಡ ಹಾಗೂ ತೂಕ ಏರಿಕೆ ಸಮಸ್ಯೆ ಕಾಡಲು ಶುರುವಾಗುತ್ತದೆ. ಹಾಗಾಗಿ ನಿಮ್ಮ ಆಹಾರದ ಜೊತೆ ಆದಷ್ಟು ಕಡಿಮೆ ಉಪ್ಪು ಸೇವನೆ ಮಾಡಿ.

ಆದಷ್ಟು ಬೇಗ ತೂಕ ಇಳಿಸಿಕೊಳ್ಳಲು ಬಯಸಿದ್ದರೆ ತರಕಾರಿ, ಹಣ್ಣು, ಮೀನು, ಕೋಳಿ ಹಾಗೂ ಕಡಿಮೆ ಕೊಬ್ಬಿರುವ ಡೈರಿ ಉತ್ಪನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ. ಜೊತೆಗೆ ಉಪ್ಪು ಹಾಗೂ ಸಕ್ಕರೆ ಬಳಕೆಯನ್ನು ಕಡಿಮೆ ಮಾಡಿ.

ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದ್ದರೆ ಒತ್ತಡದಿಂದ ದೂರವಿರಿ. ಒತ್ತಡ ದೇಹದಲ್ಲಿರುವ ಕಾರ್ಟಿಸೋಲ್ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ. ಇದು ವೇಗವಾಗಿ ತೂಕ ಹೆಚ್ಚಲು ಕಾರಣವಾಗುತ್ತದೆ.

ಬಿಳಿ ಕೂದಲು ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ಉಪಾಯ

$
0
0

ವಯಸ್ಸಾಗ್ತಿದ್ದಂತೆ ಕೂದಲು ಬಿಳಿಯಾಗುತ್ತಿದ್ದ ಕಾಲವೊಂದಿತ್ತು. ಈಗ ಹಾಗಲ್ಲ, ಬದಲಾದ ಜೀವನಶೈಲಿ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರಿದೆ. ಚಿಕ್ಕ ವಯಸ್ಸಿನಲ್ಲಿಯೇ ಕಪ್ಪು ಕೂದಲು ಬೆಳ್ಳಗಾಗಲು ಶುರುವಾಗುತ್ತದೆ. ಕೂದಲು ಬಿಳಿಯಾಗಲು ಅನೇಕ ಕಾರಣಗಳಿವೆ. ಅದ್ರಲ್ಲಿ ನಮ್ಮ ಜೀವನ ಶೈಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ನಮ್ಮ ದಿನನಿತ್ಯದ ಕೆಲಸಗಳಲ್ಲಿ ಹಾಗೂ ಆಹಾರದಲ್ಲಿ ಬದಲಾವಣೆ ಮಾಡಿದ್ರೆ ಬಿಳಿ ಕೂದಲು ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಬಿಳಿ ಕೂದಲು ಕಾಣಿಸಿಕೊಳ್ಳಲು ಒತ್ತಡವೂ ಒಂದು ಕಾರಣ. ಒತ್ತಡದಿಂದ ಕೂದಲು ಬಿಳಿಯಾಗುವ ಜೊತೆಗೆ ಕೂದಲು ಉದುರಲು ಶುರುವಾಗುತ್ತದೆ. ಹಾಗಾಗಿ ಅನಾವಶ್ಯಕ ಒತ್ತಡ ಬಿಟ್ಟುಬಿಡಿ. ಒತ್ತಡದಿಂದ ಮುಕ್ತಿ ಪಡೆಯಲು ಧ್ಯಾನ, ವ್ಯಾಯಾಮದ ಮೊರೆ ಹೋಗಿ.

ಆಹಾರದಲ್ಲಾದ ಬದಲಾವಣೆ ಕೂಡ ನಿಮ್ಮ ಕೂದಲಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಪೌಷ್ಠಿಕ ಆಹಾರ ಸೇವನೆ ಶುರು ಮಾಡಿ. ಫಾಸ್ಟ್ ಫುಡ್ ಗಳಿಂದ, ಕರಿದ ಆಹಾರಗಳಿಂದ ದೂರವಿರಿ.

ಅಕಾಲಿಕ ಬಿಳಿ ಕೂದಲಿಗೆ ಧೂಮಪಾನ ಕೂಡ ಮುಖ್ಯ ಕಾರಣ. ಧೂಮಪಾನ ತ್ಯಜಿಸಿದ್ರೆ ಬಿಳಿ ಕೂದಲಿನ ಸಂಖ್ಯೆ ಕಡಿಮೆಯಾಗುತ್ತದೆ.

ಒಳ್ಳೆಯ ನಿದ್ರೆ ಆರೋಗ್ಯಕ್ಕೆ ಹಾಗೂ ಕಪ್ಪು ಕೂದಲಿಗೆ ಬಹಳ ಮುಖ್ಯ. ಉತ್ತಮ ನಿದ್ರೆ ಒತ್ತಡ ಕಡಿಮೆ ಮಾಡುತ್ತದೆ. ಆರೋಗ್ಯದಲ್ಲಿ ಸುಧಾರಣೆ ತರುತ್ತದೆ.

ಬಹುತೇಕರು ಕೂದಲು ಜಿಡ್ಡಾಗುತ್ತದೆ ಎನ್ನುವ ಕಾರಣಕ್ಕೆ ಕೂದಲಿಗೆ ಎಣ್ಣೆ ಹಾಕುವುದಿಲ್ಲ. ಆದ್ರೆ ಇದು ತಪ್ಪು. ನಿಯಮಿತವಾಗಿ ಎಣ್ಣೆಯನ್ನು ಕೂದಲಿಗೆ ಹಾಕಿ ಮಸಾಜ್ ಮಾಡುವುದ್ರಿಂದ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು.

ನಿಮಗೆ ಗೊತ್ತಾ…? ʼಸೌಂದರ್ಯʼ ಹೆಚ್ಚಿಸುತ್ತೆ ವ್ಯಾಸಲೀನ್

$
0
0

ಚಳಿಗಾಲ ಬಂದ್ರೆ ವ್ಯಾಸಲೀನ್ ಗೆ ಬೇಡಿಕೆ ಜಾಸ್ತಿಯಾಗುತ್ತೆ. ಮುಖ ಹಾಗೂ ಚರ್ಮದ ರಕ್ಷಣೆಗೆ ಅನೇಕರು ವ್ಯಾಸಲೀನ್ ಹಚ್ಚಿಕೊಳ್ತಾರೆ. ಆದ್ರೆ ವ್ಯಾಸಲೀನ್ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಚರ್ಮ, ಕೂದಲು ಮತ್ತು ಉಗುರಿನ ಸೌಂದರ್ಯಕ್ಕೆ ವ್ಯಾಸಲೀನ್ ಬಳಸ್ತಾರೆ. ಇದರ ಬಳಕೆಯಿಂದ ಯಾವುದೇ ಹಾನಿ ಕೂಡ ಇಲ್ಲ.

ತುಟಿ ಬಿರುಕು ಬಿಟ್ಟಲ್ಲಿ ಅಥವಾ ತುಟಿಯ ಹೊಳಪು ಹೆಚ್ಚಿಸಲು ಲಿಪ್ ಗ್ಲಾಸ್ ರೀತಿಯಲ್ಲಿ ವ್ಯಾಸಲೀನ್ ಬಳಸಬಹುದಾಗಿದೆ.

ಕೈ ಹಾಗೂ ಕೈ ಬೆರಳುಗಳಿಗೆ ವ್ಯಾಸಲೀನ್ ನಿಂದ ಮಸಾಜ್ ಮಾಡಿಕೊಳ್ಳುವುದು ಒಳ್ಳೆಯದು. ಉಗುರುಗಳಿಗೆ ವ್ಯಾಸಲೀನ್ ನಿಂದ ಮಸಾಜ್ ಮಾಡಿಕೊಂಡರೆ ಉಗುರಿನ ಹೊಳಪು ಜಾಸ್ತಿಯಾಗುತ್ತದೆ.

ನಿಮ್ಮ ಕಣ್ಣಿನ ರೆಪ್ಪೆ ಹಾಗೂ ಸುತ್ತಮುತ್ತಲಿನ ಭಾಗ ಒಣಗಿದ್ದರೆ ವ್ಯಾಸಲೀನ್ ಹಚ್ಚಿಕೊಳ್ಳಿ.

ಹಿಮ್ಮಡಿ ಪಾದ ಬಿರುಕು ಬಿಟ್ಟಿದ್ದರೆ ವ್ಯಾಸಲೀನ್ ಹಚ್ಚಿಕೊಳ್ಳಿ. ರಾತ್ರಿ ಸ್ವಚ್ಛವಾಗಿ ಹಿಮ್ಮಡಿಯನ್ನು ತೊಳೆದು ವ್ಯಾಸಲೀನ್ ಹಚ್ಚಿ, ಸಾಕ್ಸ್ ಹಾಕಿ ಮಲಗಬೇಕು. ಇದರಿಂದ ಹಿಮ್ಮಡಿ ಬಿರುಕು ಬಿಡುವುದಿಲ್ಲ.

ಮೊಣಕೈ ಹಾಗೂ ಮೊಣಕಾಲು ಕಪ್ಪಾಗಿದ್ದರೆ ವ್ಯಾಸಲೀನ್ ಬಳಸಿ.

ಹೇರ್ ಕಂಡೀಶನರ್ ರೂಪದಲ್ಲಿ ಕೂಡ ವ್ಯಾಸಲೀನ್ ಉಪಯೋಗಿಸಬಹುದಾಗಿದೆ. ಇದ್ರಿಂದ ಹೊಟ್ಟು ನಿವಾರಣೆಯಾಗುತ್ತದೆ.

ಕಿವಿಯೋಲೆ ರಂಧ್ರಗಳಿಗೆ ವ್ಯಾಸಲೀನ್ ಬಳಸಬಹುದು. ವ್ಯಾಸಲೀನ್ ಗೆ ಉಪ್ಪು ಬೆರೆಸಿ ಸ್ಕಿನ್ ಸ್ಕ್ರಬ್ಬಾಗಿ ಇದನ್ನು ಉಪಯೋಗಿಸಿ.

ಮುಖದ ಅಂದ ಹೆಚ್ಚಿಸುತ್ತೆ ʼನೈಸರ್ಗಿಕʼ ಕಾಡಿಗೆ

$
0
0

ಕಣ್ಣಿಗೆ ಎಲ್ಲವನ್ನೂ ಹೇಳುವ ಶಕ್ತಿಯಿದೆ. ಮುಖದ ಸೌಂದರ್ಯ ಹೆಚ್ಚಿಸುವ ಕೆಲಸವನ್ನು ಕಣ್ಣು ಮಾಡುತ್ತದೆ. ಕಣ್ಣುಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕಾಜಲ್(ಕಾಡಿಗೆ) ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಕಣ್ಣುಗಳು ದೊಡ್ಡದಾಗಿ ಮತ್ತು ಆಕರ್ಷಕವಾಗಿ ಕಾಣುತ್ತವೆ.

ಮಾರುಕಟ್ಟೆಯಲ್ಲಿ ಅನೇಕ ರೀತಿ ಕಾಜಲ್ ಗಳು ಲಭ್ಯವಿದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕಾಜಲ್  ಕಣ್ಣಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಕಾಜಲ್ ಹೆಚ್ಚು ಒಳ್ಳೆಯದು. ಹಾಗಾಗಿ ನೀವೇ ಮನೆಯಲ್ಲಿ ಕಾಜಲ್ ತಯಾರಿಸಿಕೊಳ್ಳಿ.

ಕಾಜಲ್ ಮಾಡಲು ಬೇಕಾಗುವ ಸಾಮಗ್ರಿಗಳು:

ಬಾದಾಮಿ – 5

ಅಲೋವೇರಾ ಜೆಲ್ – 3ಚಮಚ

ತೆಂಗಿನ ಎಣ್ಣೆ – 3 ಚಮಚ

ಪ್ಲೇಟ್ ಅಥವಾ ಸೆರಾಮಿಕ್ ಬೌಲ್

ಮಾಡುವ ವಿಧಾನ:  ಮೊದಲ ಕೆಲವು ಬಾದಾಮಿಗಳನ್ನು ತೆಗೆದುಕೊಂಡು ಪ್ಲೇಟ್ ಅಥವಾ ಸೆರಾಮಿಕ್ ಬೌಲ್ ನಲ್ಲಿರಿಸಿ. ಕನಿಷ್ಟ 10 ನಿಮಿಷಗಳ ಕಾಲ ಬಾದಾಮಿಗಳನ್ನು ಫ್ರೈ ಮಾಡಿ.  ನಂತರ ಬಾದಾಮಿಯನ್ನು ಚೆನ್ನಾಗಿ ಪುಡಿಮಾಡಿ ಅದಕ್ಕೆ ಅಲೋವೆರಾ ಜೆಲ್ ಮತ್ತು 3 ಚಮಚ ತೆಂಗಿನೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ ಮಾಡಿ. ನೈಸರ್ಗಿಕ ಕಾಡಿಗೆ ಸಿದ್ಧವಾಗಿದ್ದು, ಈ ಮಿಶ್ರಣವನ್ನು ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ಶೇಖರಿಸಿಡಿ. ಅಗತ್ಯವಿರುವಾಗ ಬಳಸಿ.


‘ದಸರಾʼ ಹಬ್ಬದ ರಂಗು ಹೆಚ್ಚಿಸುವ ಎತ್ನಿಕ್‌ ಔಟ್‌ ಫಿಟ್ಸ್‌

$
0
0
Image result for ethnic-fitsಕರ್ನಾಟಕದಲ್ಲಿ ಆಚರಿಸಲ್ಪಡುವ ಅದ್ಧೂರಿ ಹಬ್ಬಗಳಲ್ಲಿ ನವರಾತ್ರಿ ಹಬ್ಬವೂ ಒಂದು. ಇಂದಿನ ಮಾಡರ್ನ್‌ ಅಂದಗಾತಿಯರು ದಸರಾ ಹಬ್ಬಕ್ಕಾಗಿ ಸುಂದರವಾಗಿ ಸಿದ್ಧಗೊಳ್ಳೋಕೆ ಈಗಾಗಲೇ ತಯಾರಿ ಶುರು ಮಾಡಿಯಾಗಿದೆ.

ಲಲನೆಯರ ಹಬ್ಬದ ಸಡಗರಕ್ಕೆ ಇನ್ನಷ್ಟು ಮೆರಗು ತರುವ, ದಸರಾ ಹಬ್ಬದ ರಂಗು ಹೆಚ್ಚಿಸುವ ಇಂದಿನ ಮಾಡರ್ನ್‌ ಎತ್ನಿಕ್‌ ದಿರಿಸುಗಳ ಬಗ್ಗೆ ಒಂದು ಚಿಕ್ಕ ಟಿಪ್ಪಣಿ ನೀಡಿದ್ದೇವೆ.

ಎತ್ನಿಕ್ಗೌನ್ಸ್

ಎತ್ನಿಕ್‌ ಗೌನ್‌ ಅತೀ ಜನಪ್ರಿಯತೆ ಪಡೆದಿರುವ ಒಂದು ಹೊಸ ಪರಿಕಲ್ಪನೆ. ಇತ್ತೀಚೆಗಂತೂ ಈ ಎತ್ನಿಕ್ ಗೌನ್‌ ದಿರಿಸಿನಲ್ಲಿ ಹಲವು ವಿನ್ಯಾಸಗಳು ಪರಿಚಿತಗೊಳ್ಳುತ್ತಿವೆ. ಫ್ಯಾಷನ್ ವಿನ್ಯಾಸಕರೂ ಕೂಡ ಈ ಎತ್ನಿಕ್‌ ಗೌನ್‌ಗಳ ಪ್ರಚಾರದ ಕುರಿತು ಗಮನ ವಹಿಸುತ್ತಿದ್ದು, ಇಂಥ ಗೌನ್ ಟ್ರೆಂಡ್‌ ಗಳನ್ನ ಕೇಪ್ ಶೈಲಿಯೊಂದಿಗೆ ವಿಲೀನಗೊಳಿಸಿ ಡಿಸೈನ್‌ ಮಾಡುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಂದಚೆಂದದ ಎತ್ನಿಕ್‌ ಗೌನ್ಸ್‌ಗಳನ್ನ ಧರಿಸಿ ಹಬ್ಬವನ್ನ ಆಚರಿಸಿ.

ಸಾರಿ ಟ್ರೆಂಡ್ಸ್

ನಮ್ಮ ಭಾರತದಲ್ಲಿ ಸೀರೆಗಳು ಎಂದೆಂದಿಗೂ ಎವರ್‌ ಗ್ರೀನ್‌ ಟ್ರೆಂಡ್‌. ಆದರೆ ಸೀರೆಯಲ್ಲಿ ಇಂದಿನ ಟ್ರೆಂಡ್‌ ನೋಡುವುದಾದರೆ ಮಲ್ಟಿಕಲರ್‌ ಪಲ್ಲು ಹೊಂದಿರುವ ಪ್ಲೇನ್‌ ಸಾರಿ ಮತ್ತು ಮಲ್ಟಿಕಲರ್‌ ಡಿಸೈನರ್‌ ಬ್ಲೌಸ್‌.

ಸೀರೆಯಲ್ಲಿಯೂ ಮಾಡರ್ನ್‌ ಆಗಿ ಕಾಣುವುದಕ್ಕಾಗಿ ಇಂದಿನ ಹೊಸ ಟ್ರೆಂಡ್‌ ಆಗಿರುವ ಡಿಸೈನರ್‌ ಬ್ಲೌಸ್‌ ಗಳನ್ನ ಧರಿಸಬಹುದು. ಇತ್ತೀಚೆಗೆ, ದೇಹದ ಆಕಾರಕ್ಕೆ ಸರಿಯಾಗಿ ಹೊಂದಿಕೊಳ್ಳುವ ಜಾರ್ಜ್ಟೇಟ್ ಫ್ಯಾಬ್ರಿಕ್ ಸಾರಿ ವ್ಯಾಪಕ ಪ್ರಚಾರ ಪಡೆಯುತ್ತಿದ್ದು, ಅಂದಗಾತಿಯರ ಮನಗೆಲ್ಲುತ್ತಿದೆ. ಸೋ ನೀವೂ ಕೂಡ ಇಂಥ ಟ್ರೆಂಡಿ ಸಾರಿಗಳನ್ನ ಟ್ರೈ ಮಾಡಬಹುದು.

ಸಲ್ವಾರ್ಸೂಟ್ಸ್

ಸಲ್ವಾರ್ ಸೂಟ್ಸ್‌ ಕೂಡ ಭಾರತೀಯ ನಾರಿಯರ ನೆಚ್ಚಿನ ಡ್ರೆಸ್‌. ಎಂದೆಂದಿಗೂ ಈ ಉಡುಪು ತನ್ನ ಬೇಡಿಕೆಯನ್ನ ಕಳೆದುಕೊಂಡಿಲ್ಲ. ಸಲ್ವಾರ್ ಸೂಟ್ಸ್‌ನಲ್ಲಿಯೇ ಅದೆಷ್ಟೋ ವಿನ್ಯಾಸಗಳು ಬಂದು ಹೋಗಿವೆ. ಕಳೆದ ಕೆಲವು ವರ್ಷಗಳಿಂದ  ಅನಾರ್ಕಲಿ ಡ್ರೆಸ್‌ ಅಂದಗಾತಿಯರ ಮನಗೆದ್ದಿತ್ತು.

ಆದರೆ ಇಂದೂ ಕೂಡ ಈ ಅನಾರ್ಕಲಿ ಶೈಲಿಯ ಉಡುಪಿನ ವಿನ್ಯಾಸದಲ್ಲಿಯ ಬದಲಾವಣೆ ಚಾಲ್ತಿಯಲ್ಲಿದೆ. ಈಗಲೂ ಕೂಡ ನಾವು ಅನಾರ್ಕಲಿ ಎಂಬ ಅಂದದ ದಿರಿಸನ್ನ ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಇಂದಿನ ಟ್ರೆಂಡ್‌ ಆಗಿರುವ ಗೌನ್ ಶೈಲಿಯ ಸಲ್ವಾರ್ ಸೂಟ್‌ ಗಳನ್ನ, ಅನಾರ್ಕಲಿಗಳನ್ನ ನೀವು ಖರೀದಿಸಬಹುದು.

ಲೆಹೆಂಗಾ ಟ್ರೆಂಡ್ಸ್

ಲೆಹೆಂಗಾಗಳು ಖಂಡಿತವಾಗಿಯೂ ಭಾರತೀಯ ಎತ್ನಿಕ್‌ ವೇರ್‌ ಜಗತ್ತಿನ ಅವಶ್ಯಕ ಮತ್ತು ಅನಿವಾರ್ಯ ಭಾಗಗಳಾಗಿವೆ. ಲೆಹೆಂಗಾ ಧರಿಸಿದ ಸ್ತ್ರೀ ಎಲ್ಲರ ಕೇಂದ್ರಬಿಂದುವಾಗಿ, ಆಕರ್ಷಕವಾಗಿ ಕಾಣುತ್ತಾಳೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇತ್ತೀಚೆಗೆ ಗಮನ ಸೆಳೆಯುತ್ತಿರುವ ಡಿಸೈನರ್ ಲೆಹೆಂಗಾಗಳನ್ನ ಧರಿಸಿ ನವರಾತ್ರಿಯನ್ನ ನೀವು ಆಚರಿಸಬಹುದು

ಸ್ಕರ್ಟ್‌‌ ನೊಂದಿಗೆ ಎತ್ನಿಕ್ಕುರ್ತಾ

ಎತ್ನಿಕ್‌ ಕುರ್ತಾವನ್ನ ಲಾಂಗ್ ಸ್ಕರ್ಟ್‌‌ ನೊಂದಿಗೆ ಧರಿಸುವುದೂ ಕೂಡ ಇಂದಿನ ಲೇಟೆಸ್ಟ್ ಟ್ರೆಂಡ್‌. ಅಂದದ ಲಾಂಗ್‌ ಸ್ಕರ್ಟ್‌‌ಗೆ ಒಪ್ಪುವಂಥ ಗ್ರ‍್ಯಾಂಡ್‌ ಕುರ್ತಾ ಧರಿಸಿ ನಿಮ್ಮ ದಸರಾ ಹಬ್ಬದ ಸೊಗಸನ್ನ ಇನ್ನಷ್ಟು ಇಮ್ಮಡಿಗೊಳಿಸಿ.

ಹೊಳೆಯುವ ಚರ್ಮ ನಿಮ್ಮದಾಗಬೇಕಾ…? ಇಲ್ಲಿದೆ ‘ಟಿಪ್ಸ್’

$
0
0

ಹೊಳೆಯುವ ಚರ್ಮವನ್ನ ಪಡೆಯುವುದಕ್ಕಾಗಿ ನೀವು ಯಾವಾಗಲೂ ದುಬಾರಿ ಫೇಶಿಯಲ್‌ ಮಾಡಿಸಬೇಕು ಅಂತೇನೂ ಇಲ್ಲ. ತಾಳ್ಮೆಯಿಂದ ಮನೆಯಲ್ಲಿಯೇ ಕೆಲವು ಬ್ಯೂಟಿ ಟ್ರೀಟ್ ಮೆಂಟ್ ಪಡೆದುಕೊಳ್ಳುವುದರಿಂದಲೂ ಆರೋಗ್ಯವಂತ ಮತ್ತು ಹೊಳೆಯುವ ಸುಂದರ ಚರ್ಮ ನಿಮ್ಮದಾಗಬಹುದು. ಅದೆಷ್ಟೋ ಚಿಕ್ಕ ಚಿಕ್ಕ ಸರಳ ಮನೆಮದ್ದಿನಿಂದಲೇ ಚರ್ಮದ ಅಂದ ಹೆಚ್ಚಬಲ್ಲದು. ಅಂಥ ಸರಳ ಬ್ಯೂಟಿ ಟ್ರೀಟ್‌ ಮೆಂಟ್‌ ಗಳು ಇಲ್ಲಿವೆ ನೋಡಿ.

ಗ್ಲಿಸರಿನ್‌

ಔಷಧ ಅಂಗಡಿಯಲ್ಲಿ ಸುಲಭವಾಗಿ ದೊರೆಯುವಂಥ ಗ್ಲಿಸರಿನ್‌ ಚರ್ಮದ ಆರೋಗ್ಯವನ್ನ ಹೆಚ್ಚಿಸುವಂಥ ಉತ್ಪನ್ನ. ಇದನ್ನ ಆಯ್ಲಿ, ಡ್ರೈ, ಸೀವಿಯರ್‌ ಡ್ರೈ ಹೀಗೆ ಎಲ್ಲಾ ತರಹದ ಚರ್ಮಗಳಿಗೂ ಬಳಸಬಹುದು. ಮೊಡವೆಗಳು, ಕಲೆಗಳು, ಸುಕ್ಕು ತೊಡೆದುಹಾಕಲು ಗ್ಲಿಸರಿನ್‌ ಸಹಾಯ ಮಾಡುತ್ತದೆ. ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಹತ್ತಿಯ ಉಂಡೆಯನ್ನ ಗ್ಲಿಸರಿನ್‌ ನಲ್ಲಿ ಅದ್ದಿ ಮೃದುವಾಗಿ ಚರ್ಮದ ಮೇಲೆ ಮಸಾಜ್‌ ಮಾಡಿಕೊಳ್ಳಿ. ರಾತ್ರಿ ಮಲಗುವ ಮುಂಚೆ ಮುಖವನ್ನ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡು ಗ್ಲಿಸರಿನ್‌ ಲೇಪಿಸಿಕೊಂಡು ಮಲಗಬೇಕು.

ಆಲೀವ್‌ ಆಯಿಲ್

ಚರ್ಮದ ಆರೋಗ್ಯವನ್ನ ಹೆಚ್ಚಿಸಲು ಆಲೀವ್‌ ಆಯಿಲ್ ಸಹಕಾರಿ. ಶುದ್ಧ ಆಲಿವ್ ಎಣ್ಣೆಯನ್ನ ಅಂಗೈಗೆ ಹಾಕಿಕೊಂಡು ಹದವಾಗಿ ತಿಕ್ಕಿದ ನಂತರ ಮುಖಕ್ಕೆ ಮೃದುವಾಗಿ ಮಸಾಜ್‌ ಮಾಡಿಕೊಳ್ಳಬೇಕು. ಮುಖ ಮತ್ತು ಕತ್ತಿನ ಭಾಗಗಳಿಗೆ ಮಸಾಜ್ ಮಾಡುವುದರಿಂದ ಚರ್ಮ ಕಪ್ಪಾಗುವುದನ್ನ ತಡೆಗಟ್ಟಬಹುದು. ಡ್ರೈ ಸ್ಕಿನ್‌ನಿಂದ ಉಂಟಾಗುವ ಕಡಿತದಂಥ ಸಮಸ್ಯೆಗಳೂ ಉಪಶಮನವಾಗುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುಂಚೆ ಆಲೀವ್‌ ಆಯಿಲ್ ಮಸಾಜ್‌ ಮಾಡಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಬಹುದು.

ಹಾಲು

ಇನ್ನೂ ಬಿಸಿ ಮಾಡಿರದ ಕಚ್ಚಾ ಹಾಲು ಕೂಡ ಚರ್ಮದ ಆರೋಗ್ಯವನ್ನ ಹೆಚ್ಚಿಸಬಲ್ಲ ಒಂದೊಳ್ಳೆಯ ಔಷಧಿ. ಹಾಲಿನಿಂದ ಚರ್ಮದ ಮೃದುತ್ವ ಹೆಚ್ಚಬಲ್ಲದು ಮತ್ತು ಚರ್ಮದ ರಂಧ್ರಗಳನ್ನು ಆಳವಾಗಿ ಶುದ್ಧೀಕರಿಸಬಲ್ಲದು. ರಾತ್ರಿ ಮಲಗುವುದಕ್ಕೂ 10-15 ನಿಮಿಷಗಳ ಮುಂಚೆ ಕಚ್ಚಾ ಹಾಲನ್ನು ಮುಖಕ್ಕೆ ಲೇಪಿಸಿಕೊಳ್ಳಿ. ನಂತರ ಲೇಪಿಸಿಕೊಂಡ ಹಾಲು ಸಂಪೂರ್ಣ ಒಣಗಿದ ಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಆಪಲ್‌ ಸೈಡರ್‌ ವಿನೇಗರ್‌

ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವಂಥ ‘ಆಪಲ್‌ ಸೈಡರ್‌ ವಿನೇಗರ್‌’ ಕೂಡ ಚರ್ಮದ ಆರೋಗ್ಯಕ್ಕೆ ಉತ್ತಮ. ಚರ್ಮದ ಮೇಲೆ ಕಾಣಿಸಿಕೊಳ್ಳುವ ವೆರಿಕೋಸ್ ವೇನ್ಸ್‌ ನಂಥ ಸಮಸ್ಯೆಗೆ ಈ ಆಪಲ್‌ ಸೈಡರ್‌ ವಿನೇಗರ್‌ ಲೇಪನ ಸಿದ್ಧೌಷಧ. ಆಗಷ್ಟೇ ಕಾಣಿಸಿಕೊಳ್ಳುತ್ತಿರುವ ವೆರಿಕೋಸ್‌ ವೇನ್ಸ್‌ ಭಾಗದ ಮೇಲೆ ಆಪಲ್‌ ಸೈಡರ್‌ ವಿನೇಗರ್‌ ಬಳಸಿ ಮಸಾಜ್‌ ಮಾಡಿಕೊಳ್ಳುವುದರಿಂದ ಕ್ರಮೇಣ ಸಮಸ್ಯೆಯಿಂದ ಉಪಶಮನ ಸಾಧ್ಯವಿದೆ. ಅಲ್ಲದೆ ಇಡೀ ದೇಹಕ್ಕೆ ಆಗಾಗ ಆಪಲ್‌ ಸೈಡರ್‌ ವಿನೇಗರ್‌ ಲೇಪಿಸಿಕೊಳ್ಳುವುದರಿಂದ ಚರ್ಮಕ್ಕೆ ಒಳ್ಳೆಯದು.

ಐಸ್‌ ಮಸಾಜ್‌

ಕಣ್ಣಿನ ಸುತ್ತ ಕಪ್ಪು ವರ್ತುಲವಾಗಿದ್ದರೆ ಅಥವಾ ಕಣ್ಣು ಊದಿಕೊಳ್ಳುವ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಐಸ್‌ ಮಸಾಜ್‌ ಮಾಡಿಕೊಳ್ಳಬಹುದು. ತೆಳುವಾದ ಬಟ್ಟೆಯಲ್ಲಿ ಐಸ್‌ ಇಟ್ಟು ಅದರಿಂದ ಮಸಾಜ್‌ ಮಾಡಿಕೊಳ್ಳಬಹುದು. ಇಲ್ಲವೇ ನೇರವಾಗಿ ಐಸ್‌ ನಿಂದಲೇ ಮಸಾಜ್‌ ಮಾಡಿಕೊಳ್ಳಬಹುದು. ತೀವ್ರ ಕಡಿತದಿಂದ ಕೈ, ಕಾಲು, ಚರ್ಮ ಕಿರಿಕಿರಿಯನ್ನ ಅನುಭವಿಸುತ್ತಿದ್ದರೂ ಕೂಡ ಈ ಐಸ್‌ ಮಸಾಜ್‌ ನಿಂದ ತಕ್ಷಣದ ಸಮಾಧಾನ ಲಭಿಸುತ್ತದೆ.

ರೋಸ್ ವಾಟರ್‌

ರೋಸ್‌ವಾಟರ್‌ ನ್ನ ದಿನನಿತ್ಯ ಬೇಕೆಂದಾಗಲೆಲ್ಲ ಚರ್ಮಕ್ಕೆ ಲೇಪಿಸಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಬಲ್ಲದು. ಔಷಧ ಅಂಗಡಿಗಳಲ್ಲಿ ಅಥವಾ ಕಾಸ್ಮೆಟಿಕ್ಸ್‌ ಲಭಿಸುವ ಅಂಗಡಿಗಳಲ್ಲಿ ಈ ರೋಸ್ ವಾಟರ್‌ ಲಭ್ಯವಾಗುತ್ತದೆ. ಅಲ್ಲದೆ ಮನೆಯಲ್ಲಿಯೂ ಕೂಡ ರೋಸ್ ವಾಟರ್ ಸಿದ್ಧಗೊಳಿಸಿಕೊಳ್ಳಬಹುದು.

ಜೇನುತುಪ್ಪ

ಚರ್ಮದ ಆರೋಗ್ಯವನ್ನ ಹೆಚ್ಚಿಸುವಲ್ಲಿ ಜೇನುತುಪ್ಪ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲರ ಅಡುಗೆ ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ಈ ಅದ್ಭುತ ಸೌಂದರ್ಯ ಪೂರಕ ವಸ್ತುವಾಗಿರುವ ಜೇನುತುಪ್ಪವನ್ನ ದಿನನಿತ್ಯ ಸ್ನಾನಕ್ಕೂ ಮುಂಚೆ ಲೇಪಿಸಿಕೊಳ್ಳುವುದರಿಂದ ಚರ್ಮಕ್ಕೆ  ಯೌವ್ವನ ಸಿಗಬಲ್ಲದು. ಮೃದು ಚರ್ಮ ನಿಮ್ಮದಾಗಬಲ್ಲದು.

ಅಪ್ಪರ್ ಲಿಪ್ಸ್ ಕೂದಲು ಕಿರಿಕಿರಿಗೆ ‘ಮನೆ ಮದ್ದು’

$
0
0

ತುಟಿಗಳ ಮೇಲ್ಭಾಗದಲ್ಲಿರುವ ಕೂದಲು ಅನೇಕ ಮಹಿಳೆಯರಿಗೆ ಕಿರಿಕಿರಿಯುಂಟು ಮಾಡುತ್ತದೆ. ಇದನ್ನು ತೆಗೆಯಲು ಮಹಿಳೆಯರು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಕೆಲ ಮಹಿಳೆಯರಿಗೆ ವಾರದೊಳಗೆ ಮತ್ತೆ ಕೂದಲು ಬೆಳೆಯುವುದುಂಟು.

ಇದಕ್ಕೆ ಹಾರ್ಮೋನ್ ನಲ್ಲಾಗುವ ಏರುಪೇರು ಕಾರಣ. ಪದೇ ಪದೇ ಬ್ಯೂಟಿ ಪಾರ್ಲರ್ ಗೆ ಹೋಗುವುದು ಸುಲಭವಲ್ಲ. ಅಂತವರು ಮನೆ ಮದ್ದು ಬಳಸಿ ಸೌಂದರ್ಯ ಕಾಪಾಡಿಕೊಳ್ಳಬಹುದು.

ತುಟಿಗಳ ಮೇಲ್ಭಾಗದಲ್ಲಿ ಕಾಣುವ ಕೂದಲು ಸಮಸ್ಯೆಗೆ ಅರಿಶಿನ ಹೇಳಿ ಮಾಡಿಸಿದ ಔಷಧಿ. ಒಂದು ಚಮಚ ಅರಿಶಿನಕ್ಕೆ ಸ್ವಲ್ಪ ನೀರನ್ನು ಸೇರಿಸಿ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ.

ಇದನ್ನು ಕೂದಲಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಕೈ ಬೆರಳುಗಳಿಂದ ಮಸಾಜ್ ಮಾಡುತ್ತ ಅರಿಶಿನದ ಪೇಸ್ಟ್ ತೆಗೆಯಿರಿ. ಅರಿಶಿನದ ಪೇಸ್ಟ್ ಜೊತೆ ಕೂದಲು ಕಿತ್ತು ಬರುತ್ತದೆ. ತಿಂಗಳಲ್ಲಿ 4-5 ದಿನ ಹೀಗೆ ಮಾಡಿದ್ರೆ ಕೂದಲು ಬೆಳೆಯುವುದು ನಿಲ್ಲುತ್ತದೆ.

ನಿಂಬೆ ಹಣ್ಣಿನ ರಸ ಹಾಗೂ ಸಕ್ಕರೆ ಕೂಡ ಅಪ್ಪರ್ ಲಿಪ್ಸ್ ಕೂದಲನ್ನು ಹೋಗಲಾಡಿಸುತ್ತದೆ. ಲಿಂಬೆ ರಸಕ್ಕೆ ನೀರು ಹಾಗೂ ಸಕ್ಕರೆಯನ್ನು ಮಿಕ್ಸ್ ಮಾಡಿ. ಸಕ್ಕರೆ ಕರಗಿದ ನಂತ್ರ ತುಟಿಯ ಮೇಲ್ಭಾಗಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಸ್ವಚ್ಛಗೊಳಿಸಿಕೊಳ್ಳಿ.

ಮೊಟ್ಟೆಯ ಬಿಳಿ ಭಾಗ ಕೂಡ ಅಪ್ಪರ್ ಲಿಪ್ಸ್ ಕೂದಲು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮೊಟ್ಟೆಯ ಬಿಳಿ ಭಾಗಕ್ಕೆ ಕಡಲೆ ಹಿಟ್ಟು ಹಾಗೂ ಸಕ್ಕರೆಯನ್ನು ಹಾಕಿ ಮಿಕ್ಸ್ ಮಾಡಿ. ಇದನ್ನು ತುಟಿಯ ಮೇಲ್ಭಾಗಕ್ಕೆ ಹಚ್ಚಿಕೊಂಡು 30 ನಿಮಿಷ ಬಿಟ್ಟು ಸ್ವಚ್ಛಗೊಳಿಸಿಕೊಳ್ಳಿ.

ಸ್ವಲ್ಪ ಮೊಸರಿಗೆ ಒಂದು ಚಮಚ ಕಡಲೆ ಹಿಟ್ಟನ್ನು ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಅಪ್ಪರ್ ಲಿಪ್ಸ್ ಗೆ ಹಚ್ಚಿಕೊಂಡು ಒಣಗಿದ ನಂತ್ರ ನಿಧಾನವಾಗಿ ತೆಗೆಯಿರಿ. ಕ್ರಮೇಣ ಕೂದಲು ಹುಟ್ಟುವ ಪ್ರಮಾಣ ಕಡಿಮೆಯಾಗುತ್ತ ಬರುತ್ತದೆ.

ಹೆಚ್ಚು ಖರ್ಚಿಲ್ಲದೆ ಮನೆಯಲ್ಲಿ ಮಾಡಿ ʼಪೆಡಿಕ್ಯೂರ್ʼ

$
0
0

ಸುಂದರ ಮುಖದ ಜೊತೆ ಅಂದದ ಕೈ, ಕಾಲುಗಳು ಆಕರ್ಷಿಸುತ್ತವೆ. ಚಳಿಗಾಲದಲ್ಲಿ ಬಿರುಕು ಬಿಡುವ ಕೈ ಕಾಲುಗಳು ಸೌಂದರ್ಯ ಹಾಳು ಮಾಡುತ್ತವೆ. ಪ್ರತಿ ದಿನ ಬ್ಯೂಟಿಪಾರ್ಲರ್ ಗೆ ಹೋಗಿ ಕೈ-ಕಾಲಿನ ಚೆಂದ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಮನೆಯಲ್ಲಿಯೇ ಕೆಲವೊಂದು ಟಿಪ್ಸ್ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.

ಕೈಗಳ ಸ್ವಚ್ಛತೆ ಮೆನಿಕ್ಯೂರ್ ಗೆ ಬೇಕಾಗುವ ವಸ್ತುಗಳು : ನೈಲ್ ಪೇಂಟ್ ರಿಮೋವರ್, ನೇಲ್ ಕಟ್ಟರ್, ಹತ್ತಿ, ಟಬ್ ಅಥವಾ ಬಕೆಟ್, ಶಾಂಪೂ, ಬೆಚ್ಚಗಿನ ನೀರು, 2 ಟೀಸ್ಪೂನ್ ಆಲಿವ್ ಎಣ್ಣೆ, 1 ಟೀಸ್ಪೂನ್  ಸಕ್ಕರೆ, ಟವೆಲ್.

ಮೆನಿಕ್ಯೂರ್  ಮಾಡೋದು ಹೇಗೆ? : ಮೊದಲು ಹತ್ತಿಯಿಂದ ಕೈ ಉಗುರುಗಳನ್ನು ಸ್ವಚ್ಛಗೊಳಿಸಿ ಮತ್ತು ಅವುಗಳನ್ನು ಉಜ್ಜಿ  ಆಕಾರ ನೀಡಿ. ನಂತರ ಬೆಚ್ಚಗಿನ ನೀರಿಗೆ ಶ್ಯಾಂಪೂ ಹಾಕಿ  ಕೈಗಳನ್ನು ಸ್ವಲ್ಪ ಸಮಯದವರೆಗೆ ಮುಳುಗಿಸಿ. ನಂತರ ನೀರಿನಿಂದ ಕೈಗಳನ್ನು ತೆಗೆದುಕೊಂಡು ಅದನ್ನು ಟವೆಲ್ ಗಳಿಂದ ಸ್ವಚ್ಛಗೊಳಿಸಿ. ಆಲಿವ್ ಎಣ್ಣೆ ಬಳಸಿ 10 ನಿಮಿಷಗಳವರೆಗೆ ಸ್ಕ್ರಬ್ ಮಾಡಿ. ಬೆಚ್ಚಗಿನ ನೀರಿನಿಂದ ಕೈಗಳನ್ನು ತೊಳೆಯಿರಿ. ಇದರಿಂದಾಗಿ ಕೈಗಳು ಸ್ವಚ್ಛವಾಗುವುದಲ್ಲದೆ ಹೆಚ್ಚು ಮೃದುವಾಗುತ್ತದೆ.

ಪೆಡಿಕ್ಯೂರ್ ಮಾಡಲು ಬೇಕಾಗುವ ವಸ್ತುಗಳು : ನೈಲ್ ಪೇಂಟ್ ರಿಮೋವರ್, ಹತ್ತಿ, ನೇಲ್ ಕಟ್ಟರ್, ನೈಲ್ ಫೈಲರ್, ಟವೆಲ್, ನೇಲ್ ಬ್ರಷ್, ಸ್ಕ್ರಬ್ ಮಾಡಲು ಬ್ರಷ್, ಜೇನುತುಪ್ಪ, ಕತ್ತರಿಸಿದ ನಿಂಬೆಹಣ್ಣು, ಹರ್ಬಲ್ ಶಾಂಪೂ, ಟಬ್ ಮತ್ತು ಬೆಚ್ಚಗಿನ ನೀರು.

ಪೆಡಿಕ್ಯೂರ್  ಹೀಗೆ  ಮಾಡಿ : ಮೊದಲಿಗೆ ಪಾದಗಳ ಉಗುರುಗಳನ್ನು ಸ್ವಚ್ಛಗೊಳಿಸಿ. ನಂತರ ಟಬ್ ಗೆ ಮೃದುವಾದ ನೀರು ಹಾಕಿ ನಿಂಬೆ ಮತ್ತು ಗುಲಾಬಿ ಹೂ ಸೇರಿಸಿ. 10-15 ನಿಮಿಷಗಳ ಕಾಲ ನಿಮ್ಮ ಪಾದಗಳನ್ನು ಅದರಲ್ಲಿರಿಸಿ. ಸ್ವಲ್ಪ ಸಮಯದ ನಂತರ  ಚರ್ಮ ಮೃದುವಾದ ಮೇಲೆ ಉಗುರುಗಳನ್ನು ಸ್ವಚ್ಛಗೊಳಿಸಿ. ಉಗುರಿನ ಮುಂಭಾಗವನ್ನು ಸ್ವಚ್ಛಗೊಳಿಸಲು ಮತ್ತು ಒಣಚರ್ಮವನ್ನು ತೆಗೆದುಹಾಕುವುದಕ್ಕೆ ಬ್ಯೂಟಿಕ್ ಕಲ್ಲು ಬಳಸಿ.

ನಿಮ್ಮ ಕಾಲುಗಳ ಮೇಲೆ ನಿಂಬೆ ಹಣ್ಣಿನ ಸ್ಲಯ್ಸ್ ಗಳನ್ನು ಇಡಿ. ಸ್ವಲ್ಪ ಸಮಯದ  ನಂತರ ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಪಾದಕ್ಕೆ 2 ಟೀ ಚಮಚ ಜೇನುತುಪ್ಪವನ್ನು ಹಾಕಿ, ಸ್ಕ್ರಬ್ ಮಾಡಿದ ನಂತರ ಮತ್ತೊಮ್ಮೆ ಬೆಚ್ಚಗಿನ ನೀರಿನಿಂದ ಪಾದಗಳನ್ನು ಶುಚಿಗೊಳಿಸಿ. ನಂತರ ಟವೆಲ್ ನಿಂದ ಒರೆಸಿ.

 

 

‘ಡಾರ್ಕ್ ಸರ್ಕಲ್’ಸಮಸ್ಯೆಗೆ ಮನೆಯಲ್ಲಿಯೇ ಇದೆ ಔಷಧಿ

$
0
0
Image result for these-effective- home remedies-will-disappear-dark-circle-forever-in-3-days

ಸೂರ್ಯನ ಕಿರಣ, ಕೆಟ್ಟ ಆಹಾರ ಪದ್ದತಿ, ನಿದ್ರೆ ಕೊರತೆ, ಒತ್ತಡ ಕಣ್ಣಿನ ಕೆಳ ಭಾಗ ಕಪ್ಪಾಗಲು ಕಾರಣವಾಗುತ್ತದೆ. ಇದ್ರಿಂದ ಮುಖ ವಯಸ್ಸಾದಂತೆ ಕಾಣಲು ಶುರುವಾಗುತ್ತದೆ.

ಮುಖ ಸೌಂದರ್ಯ ಕಳೆದುಕೊಳ್ಳುತ್ತದೆ. ಈ ಸಮಸ್ಯೆಯಿಂದ ಹೊರ ಬರಲು ಮಾರುಕಟ್ಟೆಯಲ್ಲಿ ಸಿಗುವ ಸಾಕಷ್ಟು ಕ್ರೀಂ ಬಳಸ್ತೇವೆ. ಜೊತೆಗೆ ಬ್ಯೂಟಿ ಪಾರ್ಲರ್ ಮೊರೆ ಹೋಗ್ತೇವೆ. ಆದ್ರೆ ಮನೆಯಲ್ಲಿಯೇ ನಿಮ್ಮ ಸಮಸ್ಯೆಗೆ ಔಷಧಿಯಿದೆ. ಮೂರೇ ದಿನದಲ್ಲಿ ಕಣ್ಣಿನ ಕೆಳಗಿದ್ದ ಕಪ್ಪು ಕಲೆ ಈ ಔಷಧಿಯಿಂದ ಮಂಗಮಾಯ.

ರೋಸ್ ವಾಟರ್ : ಪ್ರತಿದಿನ ಕಣ್ಣಿನ ಕೆಳ ಭಾಗಕ್ಕೆ ಹತ್ತಿ ಸಹಾಯದಿಂದ ರೋಸ್ ವಾಟರನ್ನು ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಕಣ್ಣನ್ನು ಸ್ವಚ್ಛಗೊಳಿಸಿಕೊಳ್ಳಿ. ಇದ್ರಿಂದ ಕಣ್ಣು ಫ್ರೆಶ್ ಆಗಿ ಕಾಣುವ ಜೊತೆಗೆ ಕಣ್ಣಿನ ಕೆಳ ಭಾಗದಲ್ಲಿದ್ದ ಕಪ್ಪು ಕಲೆ ಕೂಡ ಕಡಿಮೆಯಾಗುತ್ತದೆ.

ಟೀ ಪುಡಿ : ಟೀ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತ್ರ ಹತ್ತಿ ಸಹಾಯದಿಂದ ಕಣ್ಣಿನ ಕೆಳಭಾಗಕ್ಕೆ ಹಚ್ಚಿ 15-20 ನಿಮಿಷ ಬಿಡಿ. ಪ್ರತಿದಿನ ಹೀಗೆ ಮಾಡಿದ್ರೆ ಮೂರೇ ದಿನಗಳಲ್ಲಿ ಕಣ್ಣಿನ ಕೆಳ ಭಾಗದಲ್ಲಿರುವ ಕಪ್ಪು ಕಲೆ ಕಡಿಮೆಯಾಗುತ್ತದೆ.

ಬಾದಾಮಿ ಎಣ್ಣೆ : ಬಾದಾಮಿ ಎಣ್ಣೆಯನ್ನು ಕಣ್ಣಿನ ಕೆಳಗೆ 15-20 ನಿಮಿಷವಿಡಿ. 10 ನಿಮಿಷ ನಿಧಾನವಾಗಿ ಮಸಾಜ್ ಮಾಡಿ. ನಂತ್ರ ಹತ್ತಿ ಸಹಾಯದಿಂದ ಸ್ವಚ್ಛಗೊಳಿಸಿ.

ಪುದೀನಾ : ಪುದೀನಾ ಎಲೆಗಳನ್ನು ರುಬ್ಬಿ 10 ನಿಮಿಷಗಳ ಕಾಲ ಕಣ್ಣಿನ ಕೆಳಗೆ ಹಚ್ಚಿಕೊಳ್ಳಿ. ಇದು ಡಾರ್ಕ್ ಸರ್ಕಲ್ ಕಡಿಮೆ ಮಾಡಲು ನೆರವಾಗುತ್ತದೆ.

ಕೂದಲುದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ

$
0
0

ತಲೆ ಕೂದಲು ಬೆಳವಣಿಗೆಯಲ್ಲಿ ಪ್ರೋಟೀನ್ ಮಹತ್ವದ ಪಾತ್ರ ವಹಿಸುತ್ತದೆ. ಮನುಷ್ಯನ ಕೂದಲಿನಲ್ಲಿ ಶೇಕಡಾ 65-95 ರಷ್ಟು ಪ್ರೋಟೀನ್ ಇರುತ್ತದೆ. ಕೂದಲು ಗಟ್ಟಿಯಾಗಿ, ಹೇರಳವಾಗಿ, ಕಪ್ಪಾಗಿ ಬೆಳೆಯಲು ಪ್ರೋಟೀನ್ ಜೊತೆಗೆ ವಿಟಮಿನ್ ಹಾಗೂ ಐರನ್ ಅವಶ್ಯಕತೆಯೂ ಇದೆ.

ತಜ್ಞರ ಪ್ರಕಾರ ಪ್ರೋಟೀನ್ ಹಾಗೂ ಪೋಷಕಾಂಶ ಮಿಶ್ರಿತ ಆಹಾರ ಸೇವನೆ ಬಹಳ ಮುಖ್ಯ. ಪ್ರತಿಯೊಬ್ಬ ವಯಸ್ಕ ವ್ಯಕ್ತಿ ಒಂದು ಕೆಜಿ ತೂಕಕ್ಕೆ ಒಂದು ಗ್ರಾಂನಂತೆ ಪ್ರೋಟೀನ್ ಇರುವ ಆಹಾರ ಸೇವನೆ ಮಾಡಬೇಕು.

ತೂಕ 60 ಕೆ.ಜಿ ಇದ್ದಲ್ಲಿ 60 ಗ್ರಾಂ ಪ್ರೋಟೀನ್ ಇರುವ ಆಹಾರ ತೆಗೆದುಕೊಳ್ಳಬೇಕು. ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ ಶೇಕಡಾ 90 ರಷ್ಟು ಮಂದಿ ಅವಶ್ಯಕತೆಗಿಂತ ಕಡಿಮೆ ಪ್ರೋಟೀನ್ ಸೇವನೆ ಮಾಡ್ತಾರೆ. ಪ್ರತಿದಿನ ವ್ಯಕ್ತಿ ಮೊಳಕೆಯುಕ್ತ ಕಾಳು, ಹಸಿರು ತರಕಾರಿ, ಸೋಯಾ, ಹಾಲು, ಮೊಸರು, ಪನ್ನೀರ್, ಬೆಣ್ಣೆಯನ್ನು ಸೇವನೆ ಮಾಡಬೇಕು. ಇದರಿಂದ ಕೂದಲುದುರುವ ಸಮಸ್ಯೆ ಕಡಿಮೆಯಾಗುತ್ತದೆ.

 

ಮುಖದ ಸೌಂದರ್ಯಕ್ಕೆ ಮಾರಕ ನೆರಿಗೆಗಳು

$
0
0

ವಯಸ್ಸು ಏರುತ್ತಿದ್ದಂತೆ ಮುಖದಲ್ಲಿ ಕಾಣಿಸಿಕೊಳ್ಳೋ ನೆರಿಗೆಗಳು ಹೆಣ್ಣುಮಕ್ಕಳ ಆತಂಕಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಅತಿಯಾದ ಮಾನಸಿಕ ಒತ್ತಡ ಹಾಗೂ ಕಡಿಮೆ ಗುಣಮಟ್ಟದ ಕಾಸ್ಮೆಟಿಕ್ಸ್ ಬಳಕೆಯಿಂದಲೂ ಮುಖದ ಚರ್ಮ ಬಿಗಿ ಕಳೆದುಕೊಂಡು ಸುಕ್ಕು, ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ನೆರಿಗೆಗಳನ್ನು ಹೋಗಲಾಡಿಸಲು ಚಿಕಿತ್ಸೆಗಳಿಗಿಂತ ಮನೆ ಮದ್ದುಗಳೇ ಹೆಚ್ಚು ಉಪಯುಕ್ತವಾಗಿದೆ.

ಎರಡು ದೊಡ್ಡ ಚಮಚ ಕ್ಯಾರೆಟ್ ರಸಕ್ಕೆ, ಒಂದು ಚಮಚದಷ್ಟು ಸ್ವಚ್ಛವಾದ ಜೇನುತುಪ್ಪ ಸೇರಿಸಿ ಅದನ್ನು ಕಲಕಿ, ಈ ಮಿಶ್ರಣವನ್ನು ಮುಖ ಹಾಗೂ ಕತ್ತಿಗೆ ಹಚ್ಚಿಕೊಳ್ಳಬೇಕು. 15-20 ನಿಮಿಷದ ನಂತರ ಸ್ವಲ್ಪ ಬಿಸಿ ನೀರಿಗೆ ಅಡುಗೆ ಸೋಡಾ ಸೇರಿಸಿ ಹತ್ತಿಯನ್ನು ಈ ದ್ರಾವಣದಲ್ಲಿ ಅದ್ದಿ ಅದರಿಂದ ಮುಖವನ್ನು ಒರೆಸಿಕೊಳ್ಳೋದರಿಂದ ಮುಖದ ನೆರಿಗೆ ಸಮಸ್ಯೆ ಪರಿಹಾರವಾಗುತ್ತದೆ. ಇದರ ಜೊತೆಗೆ ಒರಟುತನವೂ ಕಡಿಮೆಯಾಗುತ್ತದೆ.

ಮೊಟ್ಟೆಯ ಬಿಳಿ ಲೋಳೆಯನ್ನು ಹತ್ತಿಯಲ್ಲಿ ಮುಖದ ಮೇಲೆ ನೆರಿಗೆಗೆ ಅಡ್ಡವಾಗಿ ಹಚ್ಚಿಕೊಳ್ಳಬೇಕು. ಬಳಿಕ ನಾಲ್ಕು ಗಂಟೆ ಬಿಡಬೇಕು. ಈ ವೇಳೆ ಮುಖ ಬಿಗಿದ ಸ್ಥಿತಿಯಲ್ಲಿರೋದರಿಂದ ನಗುವುದು, ಮಾತನಾಡುವುದು ಮಾಡಬಾರದು. ನಂತರ ಮಂಜುಗಡ್ಡೆ ಅಥವಾ ತಣ್ಣನೆಯ ನೀರಿಯಲ್ಲಿ ಹತ್ತಿಯನ್ನು ಅದ್ದಿ ಅದರಿಂದ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಬೇಕು.

ತುಟಿಯ ಮೇಲ್ಬಾಗದಲ್ಲಿ ನೆರಿಗೆಗಳಿದ್ದರೆ ಗ್ಲಿಸರಿನ್, ಕೋಳಿ ಮೊಟ್ಟೆಯ ಬಿಳಿಯ ಭಾಗ ತೆಗೆದುಕೊಂಡು ಅದಕ್ಕೆ ಗುಲಾಬಿ ನೀರು ಸೇರಿಸಿ, ಕದಡಿ ಹಚ್ಚಿಕೊಂಡು 15 ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು. ಇನ್ನು ಗ್ಲಿಸರಿನ್ ಮತ್ತು ಜೇನುತುಪ್ಪ ಬೆರೆಸಿ ನಿಯಮಿತವಾಗಿ ಹಚ್ಚಿಕೊಳ್ಳುವುದರಿಂದ ನೆರಿಗೆ ಸಮಸ್ಯೆಯನ್ನು ತಡೆಗಟ್ಟಬಹುದು.


ಡ್ರೈ ಸ್ಕಿನ್ ನಿಂದ ಮುಕ್ತಿ ಹೊಂದಲು ‘ಸಿಂಪಲ್ ಟಿಪ್ಸ್’

$
0
0

ಬೆಳ್ಳಗಿನ ಹೊಳೆಯವ ಚರ್ಮ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಕಷ್ಟ. ಮುಖ ಒಣಗಿ ಕಾಂತಿ ಕಳೆದುಕೊಳ್ಳುತ್ತೆ . ಚರ್ಮ ಒಣಗುವ ಮುನ್ನ ಕಾಳಜಿ ತೆಗೆದುಕೊಳ್ಳುವುದು ಉತ್ತಮ.

ಒಣ ಚರ್ಮ ಸಮಸ್ಯೆ ನಿವಾರಣಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬ್ಯೂಟಿ ಪ್ರಾಡಕ್ಟ್ ಗಳಿವೆ. ಆದ್ರೆ ಅವುಗಳ ಬಳಕೆಯಿಂದ ಅಡ್ಡ ಪರಿಣಾಮದ ಅಪಾಯ ಕಾಡುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಮುಖದ ಆರೋಗ್ಯವನ್ನು ಕಾಪಾಡಿಕೊಂಡು, ಸೌಂದರ್ಯವನ್ನು  ಹೆಚ್ಚಿಸಲು ಕೆಲವು ಸರಳ ನೈಸರ್ಗಿಕ ಉಪಾಯಗಳು ಇಲ್ಲಿವೆ.

ಜೇನುತುಪ್ಪ ಆರೋಗ್ಯಕ್ಕೊಂದೇ ಅಲ್ಲ ತ್ವಚೆಗೆ ಉತ್ತಮ. ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಇರುವ ಪದಾರ್ಥ ಇದು. ಜೇನುತುಪ್ಪವನ್ನು ಮುಖದ ಮೇಲೆ ಹಚ್ಚಿ ನಿಧಾನವಾಗಿ ಸ್ಕ್ರಬ್ ಮಾಡಬೇಕು. ಹತ್ತು ನಿಮಿಷದ ನಂತರ ಮುಖವನ್ನು ನೀರಿನಲ್ಲಿ ತೊಳೆಯಬೇಕು. ಇದು ಮುಖದ ಕಾಂತಿ ಹೆಚ್ಚಿಸುವ ಜೊತೆಗೆ ಒಣ ಚರ್ಮ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಹಾಲು ಮತ್ತು ಆಲಿವ್ ಆಯಿಲ್ ಕೂಡ ಚರ್ಮದ ಕಾಂತಿ ಹೆಚ್ಚಿಸುತ್ತವೆ. ತಂಪಾದ ಹಾಲಿನಲ್ಲಿ ಆಲಿವ್ ಆಯಿಲ್ ನ 2 ಹನಿ ಹಾಕಿ ಅದನ್ನು ಮುಖಕ್ಕೆ ಮಸಾಜ್ ಮಾಡುವ ಮೂಲಕ ಒಣ ಚರ್ಮದಿಂದ ಪರಿಹಾರ ಹೊಂದಬಹುದಾಗಿದೆ.

ಹುಡುಗರಿಗೂ ಬೇಕು ‘ಬ್ಯೂಟಿ ಟ್ರೀಟ್ಮೆಂಟ್’

$
0
0

ಮದುವೆ ಮುಹೂರ್ತ ನಿಗದಿಯಾಗ್ತಿದ್ದಂತೆ ಹುಡುಗಿ ಸೌಂದರ್ಯದ ಬಗ್ಗೆ ಮತ್ತಷ್ಟು ಕಾಳಜಿ ವಹಿಸ್ತಾಳೆ. ಬ್ಯೂಟಿ ಪಾರ್ಲರ್ ನಲ್ಲಿ ಸಮಯ ಕಳೆಯುತ್ತಾಳೆ. ಕೈ, ಕಾಲು, ಮುಖ, ಕೂದಲು ಅಂತಾ ಚೆಂದ ಕಾಣಲು ಬೇಕಾದ ಎಲ್ಲ ತಯಾರಿ ಮಾಡಿಕೊಳ್ತಾಳೆ. ಇದ್ರಲ್ಲಿ ಹುಡುಗರು ಹಿಂದೆ ಬಿದ್ದಿದ್ದಾರೆ. ಮಾಡೋದೆ ಇಲ್ಲ ಎಂದಲ್ಲ. ಹುಡುಗಿಯರಿಗೆ ಹೋಲಿಸಿದ್ರೆ ಬ್ಯೂಟಿ ಪಾರ್ಲರ್ ಗೆ ಹೋಗುವ ಹಾಗೂ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ಹುಡುಗರ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ.

ಮದುವೆ ಸಮಾರಂಭದಲ್ಲಿ ಹುಡುಗಿ ಹಾಗೂ ಹುಡುಗ ಇಬ್ಬರೂ ಸುಂದರವಾಗಿ ಕಾಣಬೇಕು. ಹಾಗಾಗಿ ವಧುವಿನಷ್ಟೇ ವರ ಕೂಡ ಸೌಂದರ್ಯದ ಬಗ್ಗೆ ಗಮನ ಹರಿಸಬೇಕು. ಕೆಲವೊಂದು ಅವಶ್ಯಕ ಬ್ಯೂಟಿ ಟಿಪ್ಸ್ ಗಳನ್ನು ಅಳವಡಿಸಿಕೊಂಡ್ರೆ ಸಾಕು.

ಸಾಮಾನ್ಯವಾಗಿ ವರ ಮದುವೆ ಹಿಂದಿನ ದಿನ ಹೇರ್ ಸ್ಟೈಲ್ ಮಾಡಲು ಹೋಗ್ತಾನೆ. ಯಾವಾಗ್ಲೂ ಮದುವೆಗೆ 10 ದಿನ ಮುಂಚಿತವಾಗ್ಲೇ ಹೇರ್ ಕಟ್  ಮಾಡಿಸಬೇಕು.

ಹುಡುಗಿಯರಂತೆ ಹುಡುಗರು ಕೂಡ ಮೆನಿಕ್ಯೂರ್ ಮಾಡಿಸಿಕೊಳ್ಳುವುದು ಉತ್ತಮ. ಮದುವೆ ದಿನ ಸಮಾರಂಭಕ್ಕೆ ಬರುವವರ ಕಣ್ಣು ನಿಮ್ಮ ಕೈ ಹಾಗೂ ಉಗುರುಗಳನ್ನೂ ನೋಡುತ್ತದೆ ಎಂಬುದು ಗಮನದಲ್ಲಿರಲಿ.

ಮದುವೆ ದಿನ ಬೆಳ್ಳಗೆ, ಸುಂದರವಾಗಿ ಕಾಣಬಯಸಬೇಕೆಂದಿದ್ದರೆ ಒಂದು ವಾರದಿಂದಲೇ ಶೇವಿಂಗ್ ಮಾಡಲು ಶುರುಮಾಡಿ. ಪ್ರತಿದಿನ ಶೇವಿಂಗ್ ಮಾಡಿ. ಜೊತೆಗೆ ಮದುವೆ ದಿನ ಕೂಡ ಶೇವಿಂಗ್ ಮಾಡಿ.

ಹಾಗೆ ಫೇಶಿಯಲ್ ಕೂಡ ಮಾಡಿಸಿಕೊಳ್ಳಿ. ಒಂದು ವಾರದ ಮೊದಲೇ ಫೇಶಿಯಲ್ ಮಾಡಿಸುವುದು ಒಳ್ಳೆಯದು.

ಎದೆಯ ಮೇಲಿರುವ ಕೂದಲನ್ನು ತೆಗೆಯಿರಿ. ವ್ಯಾಕ್ಸ್ ಮಾಡೋಕೆ ಇಷ್ಟಪಡಲ್ಲ ಎಂದಾದ್ರೆ ಕೂದಲನ್ನು ಟ್ರಿಮ್ ಮಾಡಿಕೊಳ್ಳಿ.

 

ಹೀಗಿದೆ ಇತ್ತೀಚಿನ ‌ʼಗರ್ಭಿಣಿʼಯರ ಫ್ಯಾಷನ್ ಟ್ರೆಂಡ್

$
0
0

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆ ಜೀವನದ ಮಹತ್ವದ ಘಟ್ಟ. ಹೊಟ್ಟೆಯಲ್ಲೊಂದು ಮಗು ಬೆಳೆಯುತ್ತಿದೆ ಎಂಬ ವಿಷ್ಯ ತಿಳಿದಾಗಿನಿಂದ ಮಗು ಹೊರಗೆ ಬರುವವರೆಗೂ ಮಹಿಳೆಗೆ ಆತಂಕದ ಜೊತೆ ಆನಂದ ಮನೆ ಮಾಡಿರುತ್ತದೆ. ಹಾಗೆ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುತ್ತವೆ. ಗರ್ಭಿಣಿಯಾದಾಗ ಸ್ಟೈಲಿಶ್ ಬಟ್ಟೆ ಹಾಗೂ ಚಪ್ಪಲಿಗಳು ಮೂಲೆ ಸೇರುವುದು ಮಾಮೂಲಿ.

ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರು ತಮ್ಮ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಇದಕ್ಕೆ ನಟಿ ಕರೀನಾ ಕಪೂರ್ ಉತ್ತಮ ಉದಾಹರಣೆ. ಗರ್ಭಿಣಿಯಾದಾಗ ಸ್ಟೈಲಿಶ್ ಬಟ್ಟೆಗಳನ್ನು ಧರಿಸಿ ಎಲ್ಲರ ಕಣ್ಮನ ಸೆಳೆದಿದ್ದಳು ಬೇಬೋ. ಈ ಸ್ಟೈಲ್ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾಮಾನ್ಯ ಜನರೂ ಹೊಸ ಫ್ಯಾಷನ್ ಗೆ ಹೊಂದಿಕೊಂಡಿದ್ದಾರೆ.

ಸೀರೆ ಇಲ್ಲ ಚೂಡಿ ಹಾಕಿ ರಸ್ತೆಗಿಳಿಯುತ್ತಿದ್ದ ಕಾಲ ಈಗಿಲ್ಲ. ಗರ್ಭಿಣಿಯರು ಮಾಡರ್ನ್ ಡ್ರೆಸ್ ತೊಟ್ಟು ಬಿಂದಾಸ್ ಆಗಿ ಓಡಾಡ್ತಾರೆ. ಗರ್ಭಿಣಿಯರಿಗೆ ಪಲಾಜೊ ಅತ್ಯುತ್ತಮ ಉಡುಗೆ. ಇದು ಗರ್ಭಿಣಿಯರ ಲುಕ್ ಬದಲಿಸುವ ಜೊತೆಗೆ ಆರಾಮವೆನಿಸುತ್ತದೆ. ಮೇಲೆ ಟೀ ಶರ್ಟ್ ಅಥವಾ ಕುರ್ತಾ ಹಾಕಬಹುದು. ಟೀ ಶರ್ಟ್ ಸೌಂದರ್ಯವನ್ನು ಹೆಚ್ಚು ಮಾಡುತ್ತದೆ. ಬೇಕಾದ್ರೆ ಟೀ ಶರ್ಟ್ ಜೊತೆ ಸ್ಕಾರ್ಪ್ ಹಾಕಿಕೊಳ್ಳಬಹುದು.

ಗರ್ಭಿಣಿಯರಿಗಾಗಿಯೇ ಮಾರುಕಟ್ಟೆಗೆ ವಿವಿಧ ವಿನ್ಯಾಸದ ಜೀನ್ಸ್ ಬಂದಿದೆ. ಇದು ಗರ್ಭಿಣಿಯರ ಅಂದ ಹೆಚ್ಚಿಸುವ ಜೊತೆಗೆ ಆರಾಮ ನೀಡುತ್ತದೆ.

ಹವಾಮಾನಕ್ಕೆ ತಕ್ಕಂತೆ ಚೆಂದದ ಬಟ್ಟೆ ಧರಿಸಬಹುದು. ಪಾರ್ಟಿಗೆ ಹೋಗುವುದಾದ್ರೆ ಲಾಂಗ್ ಅಥವಾ ಮ್ಯಾಕ್ಸಿ ಡ್ರೆಸ್ ಬೆಸ್ಟ್.

ಸಾಂಪ್ರದಾಯಿಕ ಉಡುಗೆಯಲ್ಲೂ ಸಾಕಷ್ಟು ಆಯ್ಕೆಗಳು ಸಿಗುತ್ತವೆ. ಸಮಾರಂಭಗಳಿಗೆ ಹೋಗುವ ವೇಳೆ ಗರ್ಭಿಣಿಯರಿಗಾಗಿ ಮಾರುಕಟ್ಟೆಗೆ ಬಂದಿರುವ ಸಲ್ವಾರ್ ಆಯ್ಕೆ ಮಾಡಿಕೊಳ್ಳಿ.

ಹೈ ಹೀಲ್ಡ್ ಚಪ್ಪಲಿ ಬೇಡವೇ ಬೇಡ. ಹಾಗೆ ಕೃತಕ ಆಭರಣಗಳು ಅಲರ್ಜಿಯುಂಟು ಮಾಡುವ ಸಾಧ್ಯತೆಗಳಿರುತ್ತವೆ. ಕೆಲವೊಂದು ಸುಗಂಧ ದ್ರವ್ಯ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಫ್ಯಾಷನ್ ಹೆಸರಿನಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಆರೋಗ್ಯದ ಜೊತೆಗೆ ಫ್ಯಾಷನ್ ಇರಲಿ. ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಾಪಿಂಗ್ ಬೇಡ. ಯಾಕೆಂದ್ರೆ ಮುಂದೆ ಅದು ಉಪಯೋಗಕ್ಕೆ ಬರುವುದಿಲ್ಲ.

‘ಭಂಗು’ನಿವಾರಣೆಗೆ ಸುಲಭ ಉಪಾಯ….!

$
0
0

ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಕಾಡುವ ಚರ್ಮದ ತೊಂದರೆಯಲ್ಲಿ ಭಂಗು ಕೂಡ ಒಂದು. ಹೆಚ್ಚಾಗಿ ಮುಟ್ಟು ನಿಲ್ಲುವ ಸಮಯದಲ್ಲಿ ಅಥವಾ ಮುಟ್ಟು ನಿಂತ ನಂತರ ಈ ಭಂಗು ಕಾಣಿಸಿಕೊಳ್ಳುತ್ತದೆ. ಕೆಲ ಸುಲಭ ಉಪಾಯಗಳನ್ನು ಅನುಸರಿಸಿದರೆ ಈ ಸಮಸ್ಯೆ ತಡೆಗಟ್ಟಬಹುದು.

* ಕಿತ್ತಳೆ ಹಣ್ಣಿನ ತಾಜಾ ಸಿಪ್ಪೆಯನ್ನು ಮುಖಕ್ಕೆ ತಿಕ್ಕಿದರೆ ಭಂಗು ಕಡಿಮೆಯಾಗುತ್ತದೆ.

* ಎಕ್ಕದ ಹಾಲಲ್ಲಿ ಕಸ್ತೂರಿ ಅರಿಶಿಣವನ್ನು ಕಲಸಿ ಹಚ್ಚಿದರೆ ಭಂಗು ನಿವಾರಣೆಯಾಗುತ್ತದೆ.

* ಮೊಸರು ಮತ್ತು ನಿಂಬೆ ರಸವನ್ನು ಕಲಸಿ ಮುಖಕ್ಕೆ ಲೇಪಿಸಬೇಕು.

* ಜೇನುತುಪ್ಪಕ್ಕೆ ಬೆಣ್ಣೆ ಕಲಸಿ ಮುಖಕ್ಕೆ ಲೇಪನ ಮಾಡಬೇಕು.

* ಮೂಲಂಗಿ ರಸವನ್ನು ಮಜ್ಜಿಗೆ ಜೊತೆ ಮಿಶ್ರಣ ಮಾಡಿ ಲೇಪನ ಮಾಡಬೇಕು.

* ಅರಿಶಿಣಕ್ಕೆ ರಕ್ತಚಂದನ ಮತ್ತು ಎಮ್ಮೆ ಹಾಲನ್ನು ಸೇರಿಸಿ ಮಿಶ್ರಣ ಮಾಡಿ ಹಚ್ಚಬೇಕು.

* ಅಲೋವೆರಾ ತಿರುಳಿಗೆ ನಿಂಬೆ ರಸ ಬೆರೆಸಿ ಪ್ರತಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚುತ್ತಿದ್ದರೆ ಭಂಗು ನಿವಾರಣೆಯಾಗುತ್ತದೆ.

ರಾತ್ರಿ ಹೀಗೆ ಮಾಡಿದ್ರೆ ಕಡಿಮೆಯಾಗುತ್ತೆ ಬೊಜ್ಜು…!

$
0
0

ಇಂದಿನ ಆಹಾರ ಪದ್ಧತಿ ನಮ್ಮ ಬೊಜ್ಜಿಗೆ ಕಾರಣವಾಗಿದೆ. ಹೊರಗಿನ ಆಹಾರಕ್ಕೆ ಯಾವ ಎಣ್ಣೆ ಬಳಸ್ತಾರೆಂಬುದು ನಮಗೆ ತಿಳಿದಿರೋದಿಲ್ಲ. ರುಚಿ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ ತಿಂದು ತೂಕ ಹೆಚ್ಚಿಸಿಕೊಂಡು ಜಿಮ್ ಗೆ ಅಲೆಯೋದು ಈಗ ಮಾಮೂಲಿಯಾಗಿದೆ.

ತೂಕ ಏರಿಸಿಕೊಳ್ಳೋದು ಇತ್ತೀಚಿಗೆ ಸುಲಭ. ಆದ್ರೆ ತೂಕ ಕಡಿಮೆ ಮಾಡಿಕೊಳ್ಳೋದು ದೊಡ್ಡ ಸವಾಲಿನ ಕೆಲಸ. ಆಹಾರದಲ್ಲಿ ನಿಯಂತ್ರಣದ ಜೊತೆ ಹಗಲು-ರಾತ್ರಿ ವ್ಯಾಯಾಮ, ಜಿಮ್, ಯೋಗ ಮಾಡಿದ್ರೂ ತೂಕ ಮಾತ್ರ ಕಡಿಮೆಯಾಗೋದಿಲ್ಲ ಎನ್ನುವವರು ಅನೇಕರು. ಕೆಲವರು ಹೆಚ್ಚಾಗಿರುವ ಹೊಟ್ಟೆ ಕಡಿಮೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆ ಕೂಡ ಮಾಡಿಸಿಕೊಳ್ಳುತ್ತಾರೆ.

ಸುಲಭ ಉಪಾಯವೊಂದರ ಮೂಲಕ ನೀವು ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಒಂದು ರಾತ್ರಿಯಲ್ಲಿ ನಿಮಗೆ ಪರಿಣಾಮ ಕಾಣಲಿದೆ. ರಾತ್ರಿ ಮಲಗುವ ಮೊದಲು ಒಂದು ದೊಡ್ಡ ಟವೆಲ್ ಗೆ ಬಿಸಿ ಅಥವಾ ತಣ್ಣನೆಯ ನೀರು ಹಾಕಿ ಒದ್ದೆ ಮಾಡಿಕೊಳ್ಳಿ. ಆ ಟವೆಲ್ ಹೊಟ್ಟೆ ಮೇಲಿಟ್ಟು, ಅದ್ರ ಮೇಲೆ ಬಟ್ಟೆಯೊಂದನ್ನು ಕಟ್ಟಿ ಮಲಗಿ. ಬೆಳಿಗ್ಗೆ ಎಚ್ಚರವಾದ ತಕ್ಷಣ ಟವೆಲ್ ತೆಗೆದುಬಿಡಿ. ಇದು ಜೀರ್ಣಕ್ರಿಯೆ ಸುಲಭ ಮಾಡುವ ಜೊತೆಗೆ ಕೊಬ್ಬು ಹೆಚ್ಚು ಮಾಡುವ ಜೀವಕೋಶಗಳನ್ನು ನಿಯಂತ್ರಣದಲ್ಲಿಡುತ್ತದೆ.

Viewing all 3709 articles
Browse latest View live


<script src="https://jsc.adskeeper.com/r/s/rssing.com.1596347.js" async> </script>