Quantcast
Channel: Beauty | Kannada Dunia | Kannada News | Karnataka News | India News
Viewing all 3709 articles
Browse latest View live

ಮದುವೆಯ ತಯಾರಿಯಲ್ಲಿದ್ದೀರಾ..? ಕುಡಿಯಿರಿ ಈ ಐದು ಜ್ಯೂಸ್

$
0
0
ಮದುವೆಯ ತಯಾರಿಯಲ್ಲಿದ್ದೀರಾ..? ಕುಡಿಯಿರಿ ಈ ಐದು ಜ್ಯೂಸ್

ಮದುವೆ ದಿನ ಸುಂದರವಾಗಿ ಕಾಣಬೇಕು ಎನ್ನುವುದು ಎಲ್ಲರ ಕನಸು. ಹೆಣ್ಣು ಮಕ್ಕಳಂತೂ ಮದುವೆ ಫಿಕ್ಸ್ ಆದ ದಿನದಿಂದಲೇ ಆ ಶುಭ ದಿನಕ್ಕಾಗಿ ತಯಾರಿ ಶುರು ಮಾಡಿಕೊಳ್ತಾರೆ. ಚೆಂದ ಕಾಣಬೇಕೆಂಬ ಕಾರಣಕ್ಕೆ ಕಾಸ್ಮೆಟಿಕ್ಸ್ ಮೊರೆ ಹೋಗ್ತಾರೆ.

ಕಾಸ್ಮೆಟಿಕ್ ಗಳು ಕ್ಷಣಿಕ ಸೌಂದರ್ಯವರ್ಧಕಗಳು. ಅದರ ಬದಲು ಕೆಲ ಹಣ್ಣು, ತರಕಾರಿಗಳ ಜ್ಯೂಸ್ ಮಾಡಿ ಕುಡಿಯುವುದು ಉತ್ತಮ. ಇವು ಸೌಂದರ್ಯ ವೃದ್ಧಿಸುವುದಲ್ಲದೇ ನಿಮ್ಮ ಆರೋಗ್ಯವನ್ನೂ ಸುಧಾರಿಸುತ್ತವೆ.

ಕ್ಯಾರೆಟ್ ಜ್ಯೂಸ್: ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ನೀವು ಬಯಸಿದ್ದರೆ. ಈಗಲೇ ಕ್ಯಾರೆಟ್ ಜ್ಯೂಸ್ ಕುಡಿಯಲು ಆರಂಭಿಸಿ. ಕ್ಯಾರೆಟ್ ನಲ್ಲಿ ವಿಟಮಿನ್ ಎ ಇರುತ್ತದೆ. ಅದು ಚರ್ಮಕ್ಕೆ ತುಂಬಾ ಒಳ್ಳೆಯದು. ತೂಕ ಇಳಿಸಿಕೊಳ್ಳಲು ಇದು ಸಹಕಾರಿ.

ಪಾಲಕ್ ರಸ: ಬೆಳಿಗ್ಗೆ ಕಾಫಿ ಕುಡಿಯುವ ಬದಲು ಪಾಲಕ್ ರಸ ಸೇವಿಸಿ. ಚರ್ಮದ ಮೇಲಿರುವ ಕಲೆಗಳನ್ನು ಹೋಗಲಾಡಿಸಿ, ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ. ಸುಕ್ಕು ಕಡಿಮೆಯಾಗಿ ನೀವು ಮತ್ತಷ್ಟು ಚಿಕ್ಕವರಾಗಿ ಕಾಣ್ತೀರಾ.

ಟೋಮೋಟೋ ಜ್ಯೂಸ್: ಇದರಲ್ಲಿ ಆಂಟಿ ಆಕ್ಸಿಡೆಂಟ್ ಇರುವುದರಿಂದ ಮೊಡವೆ ಹಾಗೂ ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಸೌತೆಕಾಯಿ ರಸ: ದೇಹದಲ್ಲಿರುವ ವಿಷ ಪದಾರ್ಥಗಳನ್ನು ತೆಗೆದು ಹಾಕಲು ಇದು ಸಹಕಾರಿ.

ಎಲೆಕೋಸಿನ ರಸ: ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದರಲ್ಲಿ ಬೀಟಾ-ಕ್ಯಾರೋಟಿನ್ ಕೂಡ ಇರುತ್ತದೆ. ಈ ಜ್ಯೂಸ್ ಕುಡಿಯುವುದರಿಂದ ಮೃದು ಹಾಗೂ ಕೋಮಲ ಚರ್ಮವನ್ನು ನಾವು ಪಡೆಯಬಹುದಾಗಿದೆ.


ಆಲೂಗಡ್ಡೆಯಲ್ಲಿದೆ ಬಹಳಷ್ಟು ಔಷಧಿ ಗುಣ

$
0
0
ಆಲೂಗಡ್ಡೆಯಲ್ಲಿದೆ ಬಹಳಷ್ಟು ಔಷಧಿ ಗುಣ

ಆಲೂಗಡ್ಡೆಯಿಂದ ದೂರ ಉಳಿಯುವವರೇ ಜಾಸ್ತಿ. ಇದು ಕೊಬ್ಬು ಹೆಚ್ಚಿಸುವುದರಿಂದ ದಪ್ಪವಾಗ್ತಿವೆಂಬ ಭಯ. ಆದರೆ ಆಲೂಗಡ್ಡೆಯಿಂದ ಅನೇಕ ಉಪಯೋಗಗಳಿವೆ. ಇದನ್ನು ಕೇಳಿದ್ರೆ ನೀವು ಆಲೂಗಡ್ಡೆ ಬಳಕೆಯನ್ನು ಜಾಸ್ತಿ ಮಾಡ್ತೀರಾ.

ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ರಂಜಕ ಗಮನಾರ್ಹ ಪ್ರಮಾಣದಲ್ಲಿ ಕಂಡು ಬರುತ್ತವೆ.

ಚರ್ಮದ ಬಣ್ಣ: ಹೊಳೆಯುವ ಚರ್ಮ ಪಡೆಯಲು ಆಲೂಗಡ್ಡೆ ಅತೀ ಮುಖ್ಯ. ಆಲೂಗಡ್ಡೆಯನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮ ಹೊಳಪು ಪಡೆಯುತ್ತದೆ. ಅಲ್ಲದೇ ಮುಖದಲ್ಲಿ ತುರಿಕೆ ಇದ್ದರೆ ಅದೂ ಕಡಿಮೆಯಾಗುತ್ತದೆ. 30 ನಿಮಿಷಗಳ ಕಾಲ ಮುಖಕ್ಕೆ ಆಲೂಗಡ್ಡೆ ಮಿಶ್ರಣವನ್ನು ಹಚ್ಚಿಡಬೇಕು. ಇದಕ್ಕೆ ಲಿಂಬು ರಸ ಬೆರೆಸಿದರೆ ಮತ್ತೂ ಉತ್ತಮ.

ಸುಕ್ಕು ತಡೆಯುತ್ತದೆ: ಮುಖ ಸುಕ್ಕುಗಟ್ಟುವುದನ್ನು ಆಲೂಗಡ್ಡೆ ತಡೆಯುತ್ತದೆ. ಸುಕ್ಕು ತಡೆಯುವ ಹಾಗೂ ಚರ್ಮವನ್ನು ಮೃದುಗೊಳಿಸುವ ಗುಣಗಳು ಇದರಲ್ಲಿದೆ.

ಕಪ್ಪು ಕಲೆ: ಕಣ್ಣುಗಳ ಕೆಳಗಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಆಲೂಗಡ್ಡೆ ಉತ್ತಮ ಔಷಧಿ. ಆಲೂಗಡ್ಡೆಯ ರಸವನ್ನು ಕಣ್ಣಿನ ಕೆಳಗೆ ಹಚ್ಚಿ, ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ.

ಸನ್ ಬರ್ನ್: ಸೂರ್ಯನ ಶಾಖದಿಂದ ಕಪ್ಪಾಗುವ ಮುಖವನ್ನು ಸುಂದರಗೊಳಿಸಲು ಆಲೂಗಡ್ಡೆ ಬಳಸುವುದು ಬಹಳ ಉಪಯೋಗಕಾರಿ. ಮೊದಲು ಆಲೂಗಡ್ಡೆಯನ್ನು ಹೋಳುಗಳಾಗಿ ಮಾಡಿ ಫ್ರಿಜ್ ನಲ್ಲಿಡಿ. ತಣ್ಣಗಾದ ಆಲೂಗಡ್ಡೆಯನ್ನು ಕಪ್ಪಾದ ಜಾಗದಲ್ಲಿ ಇಟ್ಟುಕೊಳ್ಳಿ. ಇದರಿಂದ ಮುಖ ಶುದ್ಧವಾಗುವುದಲ್ಲದೇ, ನಯವಾಗಿ, ಮೃದುವಾಗುತ್ತದೆ ಚರ್ಮ.

ಒಣ ಚರ್ಮ: ಒಣ ಚರ್ಮ ಹೊಂದಿದವರು ಆಲೂಗಡ್ಡೆ ರಸವನ್ನು ಮೊಸರಿನಲ್ಲಿ ಕಲಸಿ, ಮುಖಕ್ಕೆ ಪ್ಯಾಕ್ ಮಾಡಿಕೊಳ್ಳಿ. ಸುಮಾರು 20 ನಿಮಿಷಗಳ ಕಾಲ ಮುಖದ ಮೇಲೆ ಪ್ಯಾಕ್ ಇಟ್ಟುಕೊಂಡು ನಂತರ ತೊಳೆಯಿರಿ.

ವ್ಯಾಯಾಮ ಇಲ್ಲದೆ ಕೊಬ್ಬು ಕರಗಿಸಿಕೊಳ್ಳೋದು ಹೇಗೆ..?

$
0
0
ವ್ಯಾಯಾಮ ಇಲ್ಲದೆ ಕೊಬ್ಬು ಕರಗಿಸಿಕೊಳ್ಳೋದು ಹೇಗೆ..?

ದಿನೇ ದಿನೇ ತೂಕ ಜಾಸ್ತಿಯಾಗ್ತಾ ಇದೆ. ಫಿಜಾ, ಬೇಕರಿ ತಿಂಡಿಗೆ ಎಷ್ಟೇ ಕಡಿವಾಣ ಹಾಕಬೇಕು ಎಂದರೂ ಬಾಯಿ ಕೇಳಲ್ಲ. ಪ್ರತಿದಿನ ವ್ಯಾಯಾಮ ಮಾಡಲು ಸಮಯ ಇಲ್ಲ. ಹೀಗಂತ ಹೇಳೋರಿಗೆ ಇಲ್ಲಿದೆ ಟಿಪ್ಸ್.

ವ್ಯಾಯಾಮವಿಲ್ಲದೇ ತೂಕ ಕಡಿಮೆ ಮಾಡಲು ಆಲಿವ್ ಆಯಿಲ್ ಸಹಕಾರಿ. ಕೊಬ್ಬಿನ ಅಂಶವನ್ನು ಇದು ಕಡಿಮೆ ಮಾಡುತ್ತದೆ.

ನಿಂಬೆ ರಸ ಕುಡಿದು ದಿನ ಆರಂಭಿಸುವುದು ಉತ್ತಮ. ಇದು ಚಯಾಪಚಯಕ್ಕೆ ಸಹಕಾರಿ. ಬೆಳಿಗ್ಗೆ ಎದ್ದ ಕೂಡಲೇ ಬಿಸಿ ನೀರಿಗೆ ನಿಂಬೆ ರಸ ಬೆರಸಿ ಕುಡಿಯುತ್ತ ಬರಬೇಕು. ಇದು ಯಕೃತ್ತು ಬಲಪಡಿಸುತ್ತದೆ. ನಿಮ್ಮ ಸೊಂಟದ ಸುತ್ತ ಕೊಬ್ಬು ಕರಗಲು ಸಹಕಾರಿ.

ಕಾಳು ಮೆಣಸು ಕೊಬ್ಬು ಕರಗಿಸುತ್ತದೆ. ಊಟಕ್ಕೆ ಇದನ್ನು ಬಳಸುವುದರಿಂದ ಹಸಿವು ಕಡಿಮೆಯಾಗುತ್ತದೆ.

ತೂಕ ಕಡಿಮೆ ಮಾಡಲು ಬಾದಾಮಿ ಉತ್ತಮ. ಕೊಬ್ಬಿನ ಅಂಶ ಕಡಿಮೆ ಮಾಡಿ, ಬೊಜ್ಜಿನ ವಿರುದ್ಧ ಹೋರಾಡುತ್ತದೆ.

ಚಯಾಪಚಯಕ್ಕೆ ಗ್ರೀನ್ ಟೀ ಸಹಕಾರಿ. ಒಂದು ಕಪ್ ಸಾಮಾನ್ಯ ಟೀ ಗಿಂತ ಗ್ರೀನ್ ಟೀ ನೂರು ಪಟ್ಟು ಪ್ರಯೋಜನಕಾರಿ.

ತೂಕ ಕಡಿಮೆ ಮಾಡಿಕೊಳ್ಳಲು ಸೌತೆಕಾಯಿ ಅತ್ಯಂತ ಪರಿಣಾಮಕಾರಿ ತರಕಾರಿ. ಸೌತೆಕಾಯಿ ಪರಿಪೂರ್ಣ ಕೊಬ್ಬು ತೆಗೆದು, ದೇಹದಲ್ಲಿ ನೀರಿನ ಅಂಶ ಹೆಚ್ಚಿಸುತ್ತದೆ.

ಬೆಳಗಿನ ಉಪಹಾರಕ್ಕೆ ಓಟ್ಸ್ ಉತ್ತಮ. ಬಹಳ ಸಮಯದವರೆಗೆ ಇದು ಹಸಿವನ್ನು ಇಂಗಿಸುತ್ತದೆ.

ಟೊಮ್ಯಾಟೋ ದೇಹದಲ್ಲಿ ನೀರಿನ ಅಂಶ ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆಗೂ ಇದು ಸಹಕಾರಿ. ತೂಕವನ್ನು ಕಡಿಮೆ ಮಾಡುವ ಟೋಮ್ಯಾಟೋ ಪ್ರೋಟೀನ್ ಒದಗಿಸುತ್ತದೆ.

ಅವರೆ, ಕೊಬ್ಬನ್ನು ಕರಗಿಸಿ, ನಾರಿನ ಅಂಶವನ್ನು ಜಾಸ್ತಿ ಮಾಡುತ್ತದೆ. ಅಲ್ಲದೆ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

ಹಳದಿ ಹಲ್ಲಿಗೆ ಮನೆ ಮದ್ದು

$
0
0
ಹಳದಿ ಹಲ್ಲಿಗೆ ಮನೆ ಮದ್ದು

ಅಂದದ ಮುಖವೇನೋ ಇದೆ. ಹಳದಿ ಹಲ್ಲು ಸಮಸ್ಯೆಯಾಗಿದೆ. ಎಷ್ಟು ಸಲ ಬ್ರೆಶ್ ಮಾಡಿದರೂ ಹಳದಿ ಹಲ್ಲು ಬಿಳಿಯ ಬಣ್ಣಕ್ಕೆ ತಿರುಗುತ್ತಿಲ್ಲ ಎಂದು ಬೇಸರಪಡೋರು ಈ ಸ್ಟೋರಿಯನ್ನೊಮ್ಮೆ ಓದಿ.

ವಂಶವಾಹಿನಿ, ಆಹಾರ, ಹಲ್ಲಿನ ಸಮಸ್ಯೆ ಹಾಗೂ ವಯಸ್ಸಾದಂತೆಯೂ ಹಲ್ಲಿನ ಬಣ್ಣ ಬದಲಾಗಬಹುದು. ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿಕೊಂಡು ನಿಮ್ಮ ಹಲ್ಲನ್ನು ಬೆಳ್ಳಗೆ ಮಾಡಿಕೊಳ್ಳಬಹುದು.

ಸೋಡಾ: ಅಡುಗೆ ಸೋಡಾದಲ್ಲಿ ಹಲ್ಲನ್ನು ಬೆಳ್ಳಗೆ ಮಾಡುವ ಸಾಮರ್ಥ್ಯವಿದೆ. ಬಣ್ಣ ಬದಲಾಯಿಸುವುದೊಂದೆ ಅಲ್ಲದೆ, ಹಲ್ಲಿನ ಮೇಲೆ ಕುಳಿತಿರುವ ಲೋಳೆ ಅಂಶವನ್ನು ತೆಗೆದು ಹಾಕುತ್ತದೆ. ಪ್ರತಿದಿನ ಒಂದು ಟೀ ಸ್ಪೂನ್ ಅಡುಗೆ ಸೋಡಾವನ್ನು ಪೇಸ್ಟ್ ಗೆ ಸೇರಿಸಿ ಒಂದು ವಾರದವರೆಗೆ ಬ್ರೆಶ್ ಮಾಡುತ್ತ ಬಂದರೆ ಹಲ್ಲಿನ ಬಣ್ಣ ಬೆಳ್ಳಗಾಗುತ್ತದೆ. ಇಲ್ಲವೇ ಅರ್ಧ ಟೀ ಸ್ಪೂನ್ ಬೇಕಿಂಗ್ ಸೋಡಾಕ್ಕೆ ನೀರು ಸೇರಿಸಿ ಬ್ರೆಶ್ ಮಾಡಿದರೂ ಒಳ್ಳೆಯದೆ.

ನಿಂಬೆಹಣ್ಣ: ನಿಂಬೆಹಣ್ಣು ಹಲ್ಲು ಬೆಳ್ಳಗಾಗಲು ಸಹಕಾರಿ. ನಿಂಬು ಸಿಪ್ಪೆಯಿಂದ ಹಲ್ಲುಜ್ಜಬೇಕು. ಅಥವಾ ನಿಂಬೆ ರಸವನ್ನು ನೀರಿನೊಂದಿಗೆ ಬೆರಸಿ ಬಾಯಿ ಮುಕ್ಕಳಿಸುತ್ತ ಬಂದರೆ ಹಲ್ಲಿನ ಹಳದಿ ಬಣ್ಣ ತೊಲಗಿ ಬಿಳಿಯ ಬಣ್ಣಕ್ಕೆ ತಿರುಗುತ್ತದೆ.

ದಿನಕ್ಕೊಂದು ಸೇಬು: ದಂತ ವೈದ್ಯರು ದಿನಕ್ಕೊಂದು ಸೇಬು ತಿನ್ನುವಂತೆಯೂ ಸಲಹೆ ನೀಡುತ್ತಾರೆ. ಸೇಬಿನಲ್ಲಿ ಆಮ್ಲೀಯ ಗುಣವಿದ್ದು, ಇದು ಹಲ್ಲು ಬೆಳ್ಳಗಾಗಲು ಸಹಕರಿಸುತ್ತದೆ.

ಸ್ಟ್ರಾಬೆರ್ರಿ: ಸ್ಟ್ರಾಬೆರ್ರಿ ಕೂಡ ಹಲ್ಲು ಬೆಳ್ಳಗಾಗಲು ಸಹಕಾರಿ. ದಿನ ಬಿಟ್ಟು ದಿನ ಸ್ಟ್ರಾಬೆರ್ರಿ ಹಣ್ಣನ್ನು ಸಣ್ಣಗೆ ನುರಿದು, ಪೇಸ್ಟ್ ಜೊತೆ ಬ್ರೆಶ್ ಮಾಡಿ. ಉಪ್ಪಿನಲ್ಲಿ ಹಲ್ಲನ್ನು ಸ್ವಚ್ಚಗೊಳಿಸುವ ಹಾಗೂ ಬೆಳ್ಳಗೆ ಮಾಡುವ ಅಂಶವಿದೆ.

ತುಳಸಿ ಎಲೆ: ತುಳಸಿ ಎಲೆಗಳನ್ನು ಪೇಸ್ಟ್ ರೀತಿಯಲ್ಲಿ ಬಳಸಬಹುದು. ಅವು ಹಲ್ಲನ್ನು ಬೆಳ್ಳಗೆ ಮಾಡುತ್ತವೆ.

ಕಿತ್ತಳೆ: ಕಿತ್ತಳೆ ಬಾಯಿಯಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಇದು ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಹೊಂದಿದ್ದು, ಹಲ್ಲಿನ ಬಣ್ಣ ಬದಲಾಗುವುದನ್ನು ತಪ್ಪಿಸುತ್ತದೆ. ಒಂದು ವಾರಕ್ಕೆ ಮೂರು ಬಾರಿ ಕಿತ್ತಳೆ ಸಿಪ್ಪೆಯಿಂದ ಹಲ್ಲನ್ನು ಸ್ವಚ್ಛಗೊಳಿಸಿಕೊಂಡರೆ ಪರಿಣಾಮಕಾರಿ.

ಮುಖದ ಅಂದಕ್ಕೆ ಮಾರಕ ನೆರಿಗೆಗಳು

$
0
0
ಮುಖದ ಅಂದಕ್ಕೆ ಮಾರಕ ನೆರಿಗೆಗಳು

ವಯಸ್ಸು ಏರುತ್ತಿದ್ದಂತೆ ಮುಖದಲ್ಲಿ ಕಾಣಿಸಿಕೊಳ್ಳೋ ನೆರಿಗೆಗಳು ಹೆಣ್ಣುಮಕ್ಕಳ ಆತಂಕಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಅತಿಯಾದ ಮಾನಸಿಕ ಒತ್ತಡ ಹಾಗೂ ಕಡಿಮೆ ಗುಣಮಟ್ಟದ ಕಾಸ್ಮೆಟಿಕ್ಸ್ ಬಳಕೆಯಿಂದಲೂ ಮುಖದ ಚರ್ಮ ಬಿಗಿ ಕಳೆದುಕೊಂಡು ಸುಕ್ಕು, ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ನೆರಿಗೆಗಳನ್ನು ಹೋಗಲಾಡಿಸಲು ಚಿಕಿತ್ಸೆಗಳಿಗಿಂತ ಮನೆ ಮದ್ದುಗಳೇ ಹೆಚ್ಚು ಉಪಯುಕ್ತವಾಗಿದೆ.

ಎರಡು ದೊಡ್ಡ ಚಮಚ ಕ್ಯಾರೆಟ್ ರಸಕ್ಕೆ, ಒಂದು ಚಮಚದಷ್ಟು ಸ್ವಚ್ಛವಾದ ಜೇನುತುಪ್ಪ ಸೇರಿಸಿ ಅದನ್ನು ಕಲಕಿ, ಈ ಮಿಶ್ರಣವನ್ನು ಮುಖ ಹಾಗೂ ಕತ್ತಿಗೆ ಹಚ್ಚಿಕೊಳ್ಳಬೇಕು. 15-20 ನಿಮಿಷದ ನಂತರ ಸ್ವಲ್ಪ ಬಿಸಿ ನೀರಿಗೆ ಅಡುಗೆ ಸೋಡಾ ಸೇರಿಸಿ ಹತ್ತಿಯನ್ನು ಈ ದ್ರಾವಣದಲ್ಲಿ ಅದ್ದಿ ಅದರಿಂದ ಮುಖವನ್ನು ಒರೆಸಿಕೊಳ್ಳೋದರಿಂದ ಮುಖದ ನೆರಿಗೆ ಸಮಸ್ಯೆ ಪರಿಹಾರವಾಗುತ್ತದೆ. ಇದರ ಜೊತೆಗೆ ಒರಟುತನವೂ ಕಡಿಮೆಯಾಗುತ್ತದೆ.

ಮೊಟ್ಟೆಯ ಬಿಳಿ ಲೋಳೆಯನ್ನು ಹತ್ತಿಯಲ್ಲಿ ಮುಖದ ಮೇಲೆ ನೆರಿಗೆಗೆ ಅಡ್ಡವಾಗಿ ಹಚ್ಚಿಕೊಳ್ಳಬೇಕು. ಬಳಿಕ ನಾಲ್ಕು ಗಂಟೆ ಬಿಡಬೇಕು. ಈ ವೇಳೆ ಮುಖ ಬಿಗಿದ ಸ್ಥಿತಿಯಲ್ಲಿರೋದರಿಂದ ನಗುವುದು, ಮಾತನಾಡುವುದು ಮಾಡಬಾರದು. ನಂತರ ಮಂಜುಗಡ್ಡೆ ಅಥವಾ ತಣ್ಣನೆಯ ನೀರಿಯಲ್ಲಿ ಹತ್ತಿಯನ್ನು ಅದ್ದಿ ಅದರಿಂದ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಬೇಕು.

ತುಟಿಯ ಮೇಲ್ಬಾಗದಲ್ಲಿ ನೆರಿಗೆಗಳಿದ್ದರೆ ಗ್ಲಿಸರಿನ್, ಕೋಳಿ ಮೊಟ್ಟೆಯ ಬಿಳಿಯ ಭಾಗ ತೆಗೆದುಕೊಂಡು ಅದಕ್ಕೆ ಗುಲಾಬಿ ನೀರು ಸೇರಿಸಿ, ಕದಡಿ ಹಚ್ಚಿಕೊಂಡು 15 ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು. ಇನ್ನು ಗ್ಲಿಸರಿನ್ ಮತ್ತು ಜೇನುತುಪ್ಪ ಬೆರೆಸಿ ನಿಯಮಿತವಾಗಿ ಹಚ್ಚಿಕೊಳ್ಳುವುದರಿಂದ ನೆರಿಗೆ ಸಮಸ್ಯೆಯನ್ನು ತಡೆಗಟ್ಟಬಹುದು.

ಈ ಹಾಟ್ ಗರ್ಲ್ ಹೇಗೆ ತೂಕ ಇಳಿಸಿಕೊಂಡ್ಲು ಗೊತ್ತಾ?

$
0
0
ಈ ಹಾಟ್ ಗರ್ಲ್ ಹೇಗೆ ತೂಕ ಇಳಿಸಿಕೊಂಡ್ಲು ಗೊತ್ತಾ?

ಮನಸ್ಸು ಮಾಡಿದ್ರೆ ಮನುಷ್ಯನಿಗೆ ಯಾವುದೂ ಕಷ್ಟವಲ್ಲ ಎನ್ನುವ ಮಾತಿದೆ. ಇದಕ್ಕೆ ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ನಲ್ಲಿ ವಾಸಿಸುವ 25 ವರ್ಷದ ತಾನ್ಯಾ ರೆಬಕೋವಾ ಉತ್ತಮ ಉದಾಹರಣೆ.

ತಾನ್ಯಾ ತೂಕ ಮೊದಲು 108 ಕೆ.ಜಿ ಇತ್ತು. ಇದರಿಂದಾಗಿ ತಾನ್ಯಾ ಬಹಳ ಬೇಸರಗೊಂಡಿದ್ದಳು. ಯಾವುದರಲ್ಲೂ ಆಸಕ್ತಿ ಇರಲಿಲ್ಲ. ಆದ್ರೆ ಮೂರುವರೆ ವರ್ಷದಲ್ಲಿ ಆಶ್ಚರ್ಯ ಹುಟ್ಟಿಸುವಷ್ಟು ತೂಕ ಕಡಿಮೆ ಮಾಡಿಕೊಂಡು ಸ್ಲಿಮ್ ಆಗಿದ್ದಾಳೆ ತಾನ್ಯಾ.

ಕಳಪೆ ಆಹಾರವೇ ತಾನ್ಯಾ ಸ್ಥೂಲಕಾಯಕ್ಕೆ ಕಾರಣವಾಗಿತ್ತಂತೆ. ಅವರ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತಂತೆ. ಹಾಗಾಗಿ ಕಡಿಮೆ ಬೆಲೆಯ ಆಹಾರವನ್ನು ತಾನ್ಯಾ ಕುಟುಂಬ ಸೇವಿಸ್ತಾ ಇತ್ತಂತೆ. ಆದ್ರೆ ಆ ಆಹಾರ ಆರೋಗ್ಯಕರವಾಗಿರಲಿಲ್ಲವಂತೆ. ಇದರಿಂದಾಗಿ ಆಕೆಯ ತೂಕ ಏರಿತ್ತಂತೆ. ಉಸಿರಾಡಲು ತೊಂದರೆಪಡುತ್ತಿದ್ದ ತಾನ್ಯಾ ಓಡಾಡಲು ಕಷ್ಟ ಪಡ್ತಿದ್ದಳಂತೆ.

ತೂಕ ಕಡಿಮೆ ಮಾಡುವ ನಿರ್ಧಾರಕ್ಕೆ ಬಂದ ತಾನ್ಯಾ ಮೊದಲು ತಿನ್ನುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಿದ್ಲು. ಆದ್ರೆ ಇದರಿಂದ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಯ್ತು. ಪೌಷ್ಠಿಕಾಂಶದ ಕೊರತೆಯಿಂದಾಗಿ ಖಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿದವು. ತೂಕ ಮಾತ್ರ ಕಡಿಮೆ ಆಗಲಿಲ್ಲ. ಆಗ ತರಬೇತುದಾರರ ಮೊರೆ ಹೋದ್ಲು ತಾನ್ಯಾ. ಕೊಬ್ಬಿನಾಂಶ ಜಾಸ್ತಿ ಇರುವ ಹಾಗೂ ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಿದ್ಲು. ವಾರದಲ್ಲಿ ಮೂರು ದಿನ ಸ್ವಿಮ್ಮಿಂಗ್ ಗೆ ಹೋಗ್ತಿದ್ದಳಂತೆ. ನಂತರ ದೇಹದಲ್ಲಿರುವ ಹೆಚ್ಚಿನ ಚರ್ಮ ತೆಗೆಯಲು ಶಸ್ತ್ರಚಿಕಿತ್ಸೆ ಮಾಡಿಕೊಂಡಳು.

ತಲೆ ಹೊಟ್ಟಿಗೆ ಇಲ್ಲಿದೆ ಪಟಾಪಟ್ ಪರಿಹಾರ

$
0
0
ತಲೆ ಹೊಟ್ಟಿಗೆ ಇಲ್ಲಿದೆ ಪಟಾಪಟ್ ಪರಿಹಾರ

ಕೂದಲಿನಿಂದ ಉದುರಿ ಅಸಹ್ಯ ಹುಟ್ಟಿಸುವ ತಲೆ ಹೊಟ್ಟು ಮಹಿಳೆಯರನ್ನು ಕಾಡುವ ಬಹುದೊಡ್ಡ ಸಮಸ್ಯೆ. ಇದು ಒಂದು ರೀತಿಯಲ್ಲಿ ಕೀಳರಿಮೆಯನ್ನು ಹುಟ್ಟು ಹಾಕುತ್ತದೆ. ಎಷ್ಟೇ ಬಾರಿ ತಲೆ ತೊಳೆದುಕೊಂಡರೂ ಒಮ್ಮೊಮ್ಮೆ ಈ ಸಮಸ್ಯೆ ಬೆಂಬಿಡೋದೆ ಇಲ್ಲ. ಆದರೆ ಒಂದಷ್ಟು ಉಪಾಯಗಳಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ತಲೆ ಸ್ನಾನ ಮಾಡುವಾಗ ಸೀಗೆಪುಡಿ ಮತ್ತು ನಿಂಬೆರಸವನ್ನು ಮಿಶ್ರಣ ಮಾಡಿ ತಲೆಗೆ ಸರಿಯಾಗಿ ಹಚ್ಚಿ ತೊಳೆದುಕೊಳ್ಳೋದರಿಂದ ತಲೆ ಹೊಟ್ಟು ದೂರವಾಗುತ್ತದೆ. ಇದಲ್ಲದೇ ಅಡಿಗೆ ಉಪ್ಪನ್ನು ನೀರಿನಲ್ಲಿ ಕರಗಿಸಿ ಆ ದ್ರಾವಣದಲ್ಲಿ ತಲೆ ತೊಳೆದುಕೊಳ್ಳೋದರಿಂದ ಹೊಟ್ಟು ಏಳೋದು ನಿಲ್ಲುತ್ತದೆ.

ಮೊಟ್ಟೆಯ ಬಿಳಿಭಾಗವನ್ನು ತಲೆಗೆ ಹಚ್ಚಿ ಉಜ್ಜಿ, ನೀರಿನಿಂದ ತೊಳೆದುಕೊಳ್ಳೋದರಿಂದಲೂ ಹೊಟ್ಟು ಸಂಪೂರ್ಣವಾಗಿ ನಾಶವಾಗುತ್ತದೆ. ಮೆಂತ್ಯವನ್ನು ಮಜ್ಜಿಗೆಯಲ್ಲಿ ನೆನೆ ಹಾಕಿ ಒಂದು ಗಂಟೆಯ ನಂತರ ರುಬ್ಬಿ ತಲೆಗೆ ಹಚ್ಚಿಕೊಂಡು ಬಿಸಿ ನೀರಿನಲ್ಲಿ ತೊಳೆದುಕೊಳ್ಳೋದರಿಂದ ತಲೆಹೊಟ್ಟಿನಿಂದ ಮುಕ್ತಿ ಪಡೆಯಬಹುದು.

ಹರೆಯದಲ್ಲಿ ಕಾಡುವ ಮೊಡವೆ ಕಾಟಕ್ಕೆ ಕೊರಗದಿರಿ

$
0
0
ಹರೆಯದಲ್ಲಿ ಕಾಡುವ ಮೊಡವೆ ಕಾಟಕ್ಕೆ ಕೊರಗದಿರಿ

ಹರೆಯ ಬಂದಾಗ ಮೊಡವೆ ಬರುವುದು ಸಹಜ. ಇದರಿಂದ ಆಗುವ ಮಾನಸಿಕ ಕಿರಿಕಿರಿ ಕಡಿಮೆಯೇನಲ್ಲ. ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಮೊಡವೆ ಕಂಡರೆ ಮನಸ್ಸಿಗೆ ಏನೋ ಒಂಥರ, ಅದನ್ನು ಹೇಳಲಾಗದು.

ಹೆಚ್ಚಿನ ಜನರಲ್ಲಿ ಮೊಡವೆ ಕಾಟ ಬಹಳವಾಗಿ ಕಾಡಿರುತ್ತವೆ. ಹರೆಯದವರಂತೂ ಮೊಡವೆ ಯಾಕಾದರೂ ಬಂತಪ್ಪ ಎಂದು ನಿಟ್ಟುಸಿರು ಬಿಡುತ್ತಾರೆ. ವಯಸ್ಕರಲ್ಲಿಯೂ ಮೊಡವೆ ಬರುವುದರಿಂದ ಕಿರಿಕಿರಿ ಅನುಭವಿಸುತ್ತಾ ಹಿಡಿಶಾಪ ಹಾಕುವವರೇ ಹೆಚ್ಚು.

ಮೊಡವೆ ಬರಲು ಮುಖ್ಯ ಕಾರಣ ಟೆಸ್ಪೊಸ್ಟೆರಾನ್ ಎಂಬ ಹಾರ್ಮೋನು ಎನ್ನುತ್ತಾರೆ ತಜ್ಞರು. ವಿಭಿನ್ನವಾದ ತ್ವಚೆ ಬಳಕೆ ಉತ್ಪನ್ನಗಳನ್ನು ಬಳಸುವುದರಿಂದ, ಫೇಷಿಯಲ್ಸ್, ಬ್ಲಾಕ್ ಹೆಡ್ಸ್, ವೈಟ್ ಹೆಡ್ಸ್, ಕ್ರೀಮ್ ಗಳು, ಜಿಡ್ಡಿನ ಚರ್ಮ, ಯುವತಿಯರಲ್ಲಿ ಋತುಚಕ್ರ ಮೊದಲಾದ ಕಾರಣಗಳಿಂದ ಮೊಡವೆ ಬರುತ್ತವೆ.

ಸೂಕ್ತವಿಲ್ಲದ ತ್ವಚೆ ಉತ್ಪನ್ನಗಳ ಬಳಸಬೇಡಿ. ಮೊಡವೆಯಿಂದ ದೂರವಾಗಲು ಆದಷ್ಟು ಸೂರ್ಯನ ಕಿರಣಗಳಿಂದ ದೂರವಿರಿ. ಜೊತೆಗೆ ಶುಷ್ಕ ತ್ವಚೆ, ಜಿಡ್ಡು ತ್ವಚೆ ಇರುವವರು ನಿಗದಿತ ಬೇಸ್ಡ್ ಉತ್ಪನ್ನಗಳನ್ನು ಬಳಸಬಹುದಾಗಿದೆ. ಜಿಡ್ಡು ಕಂಡು ಬಂದಾಗ ಮುಖ ತೊಳೆಯಿರಿ. ಆದರೆ ಮುಖದಲ್ಲಿ ಮೊಡವೆ ಬಂದಿತೆಂದು ನೀವೇ ವೈದ್ಯರಾಗಿ ಕಂಡ ಕಂಡ ಯಾವುದೇ ಔಷಧಿ ಹಚ್ಚದೇ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಮೊಡವೆಗಳಿಂದ ದೂರವಿರಿ.


ಮೆಹಂದಿಯನ್ನು ಹೀಗೆ ಉಪಯೋಗಿಸಿ ಲಾಭ ಪಡೆಯಿರಿ

$
0
0
ಮೆಹಂದಿಯನ್ನು ಹೀಗೆ ಉಪಯೋಗಿಸಿ ಲಾಭ ಪಡೆಯಿರಿ

ಬಿಳಿ ಕೂದಲು ಜಾಸ್ತಿಯಾಗ್ತಿದ್ದಂತೆ ಜನರು ಮೆಹಂದಿಯ ಮೊರೆ ಹೋಗ್ತಾರೆ. ಮೆಹಂದಿ ಕೂದಲಿನ ಬಣ್ಣ ಬದಲಿಸುವ ಕೆಲಸವನ್ನು ಮಾತ್ರ ಮಾಡೋದಿಲ್ಲ. ಬದಲಾಗಿ ಹೊಟ್ಟು ಹಾಗೂ ಉದುರುವ ಕೂದಲನ್ನು ತಡೆದು, ಕೂದಲು ಸಮೃದ್ಧಿಯಾಗಿ ಬೆಳೆಯಲು ನೆರವಾಗುತ್ತದೆ.

ಮೆಹಂದಿ ಪ್ರಯೋಜನ ಅನೇಕರಿಗೆ ತಿಳಿದಿದೆ. ಆದ್ರೆ ಹೇಗೆ ಉಪಯೋಗಿಸಬೇಕೆನ್ನುವುದು ಗೊತ್ತಿಲ್ಲ. ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವ ಗುಣ ಇರುವ ಈ ಮೆಹಂದಿಯನ್ನು ಪ್ರೋಟೀನ್ ಅಥವಾ ವಿಟಮಿನ್ ಇ ಅಂಶವಿರುವ ಪದಾರ್ಥದೊಂದಿಗೆ ಸೇರಿಸಿಯೇ ತಲೆಗೆ ಹಚ್ಚಿಕೊಳ್ಳಬೇಕು.

ಮೆಹಂದಿಯನ್ನು ಈ ಕೆಳಗಿನ ರೀತಿಯಲ್ಲಿ ಉಪಯೋಗಿಸಿದ್ರೆ ಒಳ್ಳೆಯದು.

ಎರಡು ಚಮಚ ಮೆಹಂದಿ ಪುಡಿ, ಒಂದು ಚಮಚ ಆಲಿವ್ ಆಯಿಲ್, ಒಂದು ಚಮಚ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಮಿಕ್ಸ್ ಮಾಡಿ. ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಮಿಶ್ರಣ ಒಣಗಿದ ನಂತರ ಸ್ವಲ್ಪ ಬಿಸಿ ಇರುವ ನೀರಿನಲ್ಲಿ ತಲೆಯನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಒಣಗಿದ ಹಾಗೆ ಕಾಣುವುದಿಲ್ಲ. ಪೋಷಕಾಂಶ ಕೂಡ ಸಿಗುತ್ತದೆ.

ಮೆಹಂದಿಯ ಜೊತೆ ನಿಂಬೆ ರಸ ಹಾಗೂ ಮೊಸರನ್ನು ಸೇರಿಸಿ ಹಚ್ಚಿಕೊಳ್ಳಬೇಕು. ಮೆಹಂದಿ ಜೊತೆ ನಿಂಬೆ ರಸ ಸೇರಿ ನಿಮ್ಮ ಕೂದಲಿನ ಬಣ್ಣ ಬದಲಾಗುತ್ತದೆ. ಮೊಸರು ಕೂದಲನ್ನು ಮೃದುಗೊಳಿಸುತ್ತದೆ.

ಮೆಹಂದಿಯ ಪುಡಿಯನ್ನು ಟೀ ಪುಡಿಯ ಜೊತೆ ಸೇರಿಸಿ ರಾತ್ರಿ ಪೂರ್ತಿ ಇಡಿ. ಬೆಳಿಗ್ಗೆ ಅದರ ಬಣ್ಣ ಬದಲಾಗಿರುತ್ತದೆ. ಮೊದಲು ತಲೆಗೆ ಎಣ್ಣೆ ಹಚ್ಚಿಕೊಂಡು ನಂತರ ಈ ಮಿಶ್ರಣವನ್ನು ಹಚ್ಚಿ. ಅದು ಒಣಗಿದ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಮನೆ ಕೆಲಸದಾಕೆ ಕೈ ಹಿಡಿತು ಅದೃಷ್ಟ..!

$
0
0
ಮನೆ ಕೆಲಸದಾಕೆ ಕೈ ಹಿಡಿತು ಅದೃಷ್ಟ..!

ಕೆಲವರ ಬದುಕು ಕೆಲವೇ ಕ್ಷಣಗಳಲ್ಲಿ ಬದಲಾಗುತ್ತದೆ. ಶ್ರೀಮಂತ ಬಡವನಾಗ್ತಾನೆ. ಬಡವ ಶ್ರೀಮಂತನಾಗ್ತಾನೆ. ಕೆಲವರ ಕೈ ಹಿಡಿಯುವ ಅದೃಷ್ಟ ಅವರ ಭವಿಷ್ಯವನ್ನೇ ಬದಲಾಯಿಸುತ್ತದೆ. ಇದಕ್ಕೆ ಮನೆ ಕೆಲಸ ಮಾಡ್ತಿದ್ದ ಕಮಲಾ ಉತ್ತಮ ನಿದರ್ಶನ.

ಎರಡು ಮಕ್ಕಳ ತಾಯಿ ಕಮಲಾ. ಹೊಟ್ಟೆ ಪಾಡಿಗಾಗಿ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸ್ತಿದ್ದಾರೆ. ತಮ್ಮ ಜೀವನದಲ್ಲಿ ಹೀಗೊಂದು ಬದಲಾವಣೆ ಬರಬಹುದೆಂದು ಕಮಲಾ ಎಂದೂ ಯೋಚಿಸಿರಲಿಲ್ಲ. ಆಕೆಯ ಪಾಲಿಗೆ ಅದೃಷ್ಟ ತಂದುಕೊಟ್ಟವರು ಛಾಯಾಗ್ರಾಹಕ ಮನ್ದೀಪ್ ನೇಗಿ.

ಮನ್ದೀಪ್ ನೇಗಿ, ಕಮಲಾ ಕೆಲಸ ಮಾಡುವ ಮನೆಯ ಪಕ್ಕದಲ್ಲಿಯೇ ವಾಸವಾಗಿದ್ದಾರೆ. ಕಮಲಾರನ್ನು ನೋಡಿದ ತಕ್ಷಣ ಇಷ್ಟು ದಿನ ಯಾವುದನ್ನು ಹುಡುಕುತ್ತಿದ್ದರೋ ಅದು ಸಿಕ್ಕಿದೆ ಎಂಬುದನ್ನು ಅರಿತಿದ್ದಾರೆ ಮನ್ದೀಪ್. ಅನನ್ಯ ಛಾಯಾಚಿತ್ರಗಳಿಗೆ ಹೆಸರಾಗಿರುವ ಮನ್ದೀಪ್, ಮಾಡೆಲ್ ವೃತ್ತಿಯಲ್ಲಿರುವ ಮಹಿಳೆಯರನ್ನು ಬಳಸಿಕೊಳ್ಳುವುದಿಲ್ಲ. ಹೊಸಬರ ಹುಡುಕಾಟ ನಡೆಸುತ್ತಾರೆ.

ಕಮಲಾ ನೋಡಿ, ಫೋಟೋ ಶೂಟ್ ನ ಬಗ್ಗೆ ತಿಳಿಸಿದ್ದಾರೆ. ಮೊದಲು ಹಿಂದೆ ಸರಿದ ಕಮಲಾ ನಂತರ ಒಪ್ಪಿಕೊಂಡಿದ್ದಾರೆ.

ವಯಸ್ಸಿಗಿಂತ ಚಿಕ್ಕವರಾಗಿ ಕಾಣಲು ಹೀಗೆ ಮಾಡಿ

$
0
0
ವಯಸ್ಸಿಗಿಂತ ಚಿಕ್ಕವರಾಗಿ ಕಾಣಲು ಹೀಗೆ ಮಾಡಿ

ಆಧುನಿಕ ಜೀವನಶೈಲಿಯಿಂದಾಗಿ ಒತ್ತಡದಲ್ಲೇ ಬದುಕುವ ಅನಿವಾರ್ಯತೆ ಇಂದು ಮಾಮೂಲಿಯಾಗಿದೆ. ಟೆನ್ ಷನ್, ಹೈಪರ್ ಟೆನ್ ಷನ್, ಅತಿಯಾದ ಮಾನಸಿಕ ಚಿಂತೆ, ಅನುವಂಶೀಯತೆ, ವಿಟಮಿನ್ ಕೊರತೆ, ಅಪೌಷ್ಠಿಕ ಆಹಾರ ಸೇವನೆಯಿಂದ ತಲೆ ಕೂದಲು ಬೆಳ್ಳಗಾಗುತ್ತವೆ.

ಇವುಗಳ ಜೊತೆಗೆ ಕೆಲವೊಮ್ಮೆ ಒಂದು ನಿರ್ದಿಷ್ಟ ವಯಸ್ಸಿನ ನಂತರದಲ್ಲಿ ಕೂದಲು ಬಿಳಿಯಾಗುವುದುಂಟು. ನಿಯಮಿತವಾಗಿ ತಲೆ ಸ್ನಾನ ಮಾಡದಿರುವುದು, ತಲೆಗೆ ಎಣ್ಣೆ ಹಾಕದಿರುವುದು ಕೂಡ ಕಾರಣವಾಗಬಹುದಾದ ಸಾಧ್ಯತೆ ಇರುತ್ತದೆ. ಕೂದಲು ಬೆಳ್ಳಗಾದರೆ ವಯಸ್ಸಾದವರಂತೆ ಕಾಣುತ್ತಾರೆ. ಅದರಿಂದ ಪಾರಾಗಲು ಈ ರೀತಿ ಮಾಡಬಹುದು. ತಲೆಸ್ನಾನ ಮಾಡಿ ಕೂದಲನ್ನು ಚೆನ್ನಾಗಿ ಒಣಗಿಸಿ ನಂತರ ಹೇರ್ ಡೈ ಬಳಸಿ. ಸ್ವಲ್ಪ ಸಮಯ ಬಿಟ್ಟು ಪುನಃ ಸ್ನಾನ ಮಾಡಿ. ಇದರಿಂದ ನಿಮ್ಮ ವಯಸ್ಸು 10 ವರ್ಷ ಕಡಿಮೆಯಾದಂತೆ ಕಾಣುತ್ತದೆ.

ಹೇರ್ ಡೈ ರಾಸಾಯನಿಕ ದ್ರವ್ಯವಾಗಿದ್ದು, ಅದನ್ನು ಬಳಸುವಾಗ ಎಚ್ಚರಿಕೆ ಇರಲಿ. ಸರಿಯಾದ ರೀತಿಯಲ್ಲಿ ಅದನ್ನು ಬಳಸದಿದ್ದರೆ, ರಾಸಾಯನಿಕ ಚರ್ಮದ ಮೇಲೆ ಬಿದ್ದು ಕೆಲವೊಮ್ಮೆ ಹಾನಿಯಾಗಬಹುದಾದ ಸಾಧ್ಯತೆ ಇರುತ್ತದೆ. ಎಲ್ಲಾ ಹೇರ್ ಡೈ ಎಲ್ಲರಿಗೂ ಹೊಂದುವುದಿಲ್ಲ. ಕೆಲವರಿಗೆ ಅಲರ್ಜಿ ಆಗಬಹುದಾಗಿರುತ್ತದೆ. ಬಳಸುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.

ವಯಸ್ಸನ್ನು ಮುಚ್ಚಿಡಲು ಪ್ರತಿ ರಾತ್ರಿ ಹೀಗೆ ಮಾಡಿ

$
0
0
ವಯಸ್ಸನ್ನು ಮುಚ್ಚಿಡಲು ಪ್ರತಿ ರಾತ್ರಿ ಹೀಗೆ ಮಾಡಿ

ಸುಂದರವಾಗಿ ಕಾಣೋದಿಕ್ಕೆ ಏನೆಲ್ಲ ಕಸರತ್ತು ಮಾಡ್ತೇವೆ. ವಯಸ್ಸನ್ನು ಮುಚ್ಚಿಡಲು ಮೇಕಪ್ ಮೇಲೆ ಮೇಕಪ್ ಮಾಡ್ತೇವೆ. ಹಗಲಿನಲ್ಲಿ ನಮ್ಮ ಸೌಂದರ್ಯದ ಬಗ್ಗೆ ಅತಿ ಕಾಳಜಿ ವಹಿಸುವ ನಾವು ರಾತ್ರಿ ಮಾತ್ರ ಇದನ್ನು ಮರೆತು ಬಿಡ್ತೇವೆ. ರಾತ್ರಿ ಚರ್ಮದ ಬಗ್ಗೆ ನೀವು ಅಲಕ್ಷ ಮಾಡಿದ್ದರೆ ಈಗಲಾದ್ರೂ ಎಚ್ಚೆತ್ತುಕೊಳ್ಳಿ.

ತಜ್ಞರ ಪ್ರಕಾರ ರಾತ್ರಿ ಚರ್ಮಕ್ಕೆ ಆರೈಕೆ ಅಗತ್ಯ. ನಿರ್ಲಕ್ಷಿಸಿದ್ರೆ ಅಪಾಯವುಂಟಾಗಬಹುದು. ಹಾಗಾಗಿ ರಾತ್ರಿ ಮಲಗುವ ಮುನ್ನ ಕೆಲವೊಂದು ರೂಢಿ ಬೆಳೆಸಿಕೊಂಡು ನಿಮ್ಮ ಚರ್ಮವನ್ನು ಕಾಪಾಡಿಕೊಳ್ಳಿ.

ಅದೆಷ್ಟೇ ಒತ್ತಡವಿರಲಿ, ನಿದ್ದೆ ಬಂದಿರಲಿ ಯಾವುದೇ ಕಾರಣಕ್ಕೂ ಮೇಕಪ್ ಹಾಕಿಯೇ ಮಲಗಬೇಡಿ. ಹಾಸಿಗೆಗೆ ಹೋಗುವ ಮುನ್ನ ಮೇಕಪ್ ತೆಗೆಯಲು ಮರೆಯಬೇಡಿ. ಮೇಕಪ್ ನಲ್ಲಿರುವ ರಾಸಾಯನಿಕ ವಸ್ತುಗಳು ನಿಮ್ಮ ಚರ್ಮದ ರಂಧ್ರಗಳನ್ನು ಮುಚ್ಚಿಬಿಡುತ್ತವೆ. ಇದರಿಂದಾಗಿ ಚರ್ಮ ಹೊಳಪು ಕಳೆದುಕೊಳ್ಳುತ್ತದೆ.

ಚರ್ಮ ಒಣಗಿದಂತಾಗಿದ್ದರೆ ಚಿಂತೆ ಬೇಡ. ಮಲಗುವ ಮುನ್ನ ನಿಮ್ಮ ಸ್ವಚ್ಛವಾದ ಕೈಗಳಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಇದರಿಂದ ರಕ್ತ ಪರಿಚಲನೆ ಹೆಚ್ಚಾಗಿ ನಿರ್ಜೀವವಾಗಿದ್ದ ಚರ್ಮ ಹೊಳೆಯಲಾರಂಭಿಸುತ್ತದೆ.

ಹಾಸಿಗೆಗೆ ಹೋಗುವ ಮುನ್ನ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಉತ್ತಮ. ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಸ್ನಾನ ಮಾಡುವುದನ್ನು ರೂಢಿ ಮಾಡಿಕೊಳ್ಳಿ. ಉಪ್ಪಿಗೆ ಸೋಂಕನ್ನು ಹೊಡೆದೋಡಿಸುವ ಶಕ್ತಿ ಇದೆ.

ನಿಮ್ಮ ಕೂದಲು ಉದ್ದವಾಗಿದ್ದರೆ ಮಲಗುವ ಮೊದಲು ಕೂದಲನ್ನು ಬಾಚಿಕೊಳ್ಳಿ. ಹೀಗೆ ಮಾಡುವುದರಿಂದ ರಕ್ತ ಪರಿಚಲನೆ ಸರಿಯಾಗುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ.

ದಿನವಿಡಿ ಮಾಡುವ ದಣಿವು ಕಣ್ಣಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕಣ್ಣುಗಳನ್ನು ರಾತ್ರಿ ನೀರಿನಲ್ಲಿ ತೊಳೆದು ಮಲಗಬೇಕು. ಆಗ ಕಣ್ಣು ಕೆಳಗೆ ಕಾಣಿಸಿಕೊಳ್ಳುವ ಕಪ್ಪು ಕಲೆಯಿಂದ ಮುಕ್ತಿ ಪಡೆಯಬಹುದಾಗಿದೆ.

ತಲೆ ಬೊಕ್ಕಾಗುತ್ತಿದೆಯಾ..? ಇಲ್ಲಿದೆ ಪರಿಹಾರ !

$
0
0
ತಲೆ ಬೊಕ್ಕಾಗುತ್ತಿದೆಯಾ..? ಇಲ್ಲಿದೆ ಪರಿಹಾರ !

ಇಂದು ಹಲವಾರು ಕಾರಣಗಳಿಂದ ತಲೆಯಲ್ಲಿರುವ ಸಮೃದ್ದ ಕೂದಲು ಉದುರುತ್ತಿದ್ದು, ಹದಿಹರೆಯದಲ್ಲಿಯೇ ಬೊಕ್ಕ ತಲೆಯವರಾಗುತ್ತಿದ್ದಾರೆ. ಇಂತವರ ತಲೆಬಿಸಿಯನ್ನು ಕಡಿಮೆ ಮಾಡುವ ತೈಲ ತಮ್ಮದೆಂದು ಪ್ರಚಾರ ಮಾಡುತ್ತಿರುವ ಹಲವಾರು ಕಂಪನಿಗಳು ಕೂದಲ ಹೆಸರಿನಲ್ಲಿ ಕೋಟ್ಯಾಂತರ ಆದಾಯ ಪಡೆಯುತ್ತಿವೆ.

ಆದರೆ ಹಣ ಕೊಟ್ಟು ತೈಲ ತೆಗೆದುಕೊಂಡವನಿಗೆ ಕೂದಲೂ ಇಲ್ಲ. ಹಣವೂ ಹೋಯಿತು ಎಂಬ ಪರಿಸ್ಥಿತಿ. ಹಾಗಾಗಿ ಯಾವುದೇ ಜಾಹೀರಾತಿನ ಮೋಡಿಗೆ ಒಳಗಾಗದೇ ಕೂದಲು ಉಳಿಸಿಕೊಳ್ಳಲು ನೀವೇ ಮಾಡಬಹುದಾದ ಟಿಪ್ಸ್ ಇಲ್ಲಿದೆ.

ಕೂದಲು ಉದುರುವುದನ್ನು ತಪ್ಪಿಸೋದು ಹೇಗೆ..?
ಇಂದಿನ ದಿನಗಳಲ್ಲಿ ಎದುರಾಗುವ ಅತಿಯಾದ ಒತ್ತಡ, ಖಿನ್ನತೆ ಕೂದಲು ಉದುರುವಿಕೆಗೆ ಸಾಮಾನ್ಯವಾಗಿ ಕಾರಣವಾಗುತ್ತದೆ. ಹಾಗಾಗಿ ಒತ್ತಡ ಕಡಿಮೆ ಮಾಡಿಕೊಳ್ಳಿ. ಇದಕ್ಕೆ ಬೇಕಾದರೆ ಧ್ಯಾನದ ಮೊರೆ ಹೋಗಿ. ಇದರಿಂದ ಹಾರ್ಮೋನಿನ ಅಸಮತೋಲನ ತಡೆಯಲು ಅನುಕೂಲವಾಗುತ್ತದೆ.

ವಾರಕ್ಕೆರಡು ಬಾರಿ ಆಲಿವ್, ಕೊಬ್ಬರಿ ಎಣ್ಣೆ, ಹರಳೆಣ್ಣೆ ಹೀಗೆ ಯಾವುದೇ ಒಂದು ನೈಸರ್ಗಿಕ ತೈಲವನ್ನು ಉಗುರು ಬೆಚ್ಚಗೆ ಆಗುವಷ್ಟು ಬಿಸಿ ಮಾಡಿ ತಲೆಯ ನೆತ್ತಿಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಒಂದು ಗಂಟೆ ಬಿಟ್ಟು ಸ್ನಾನ ಮಾಡಿ.

ಬೆಳ್ಳುಳ್ಳಿ ರಸ, ಈರುಳ್ಳಿ ರಸ ಅಥವಾ ಶುಂಠಿ ರಸವನ್ನು ರಾತ್ರಿ ನೆತ್ತಿಗೆ ಹಾಕಿ ಚೆನ್ನಾಗಿ ಉಜ್ಜಿಕೊಂಡು ಮಲಗಿ ಬೆಳಗ್ಗೆ ಎದ್ದು ಬಿಸಿ ನೀರಿನಿಂದ ತೊಳೆಯಿರಿ. ಇದರಿಂದ ಕೂದಲ ಬುಡ ಸದೃಢವಾಗುವುದಲ್ಲದೇ ತಲೆಯಲ್ಲಿನ ಹೊಟ್ಟೂ ನಿವಾರಣೆಯಾಗುತ್ತದೆ.

ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಸರಳ ಟಿಪ್ಸ್

$
0
0
ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಸರಳ ಟಿಪ್ಸ್

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಕಷ್ಟದ ಕೆಲಸ. ಮುಖದ ಮೇಲೆ ಚಿಕ್ಕ ಚಿಕ್ಕ ಕಪ್ಪು ಚುಕ್ಕೆಗಳಾಗುವುದು ಹೆಚ್ಚು. ಆರಂಭದಲ್ಲಿಯೇ ಇದರ ಕುರಿತಾಗಿ ಕಾಳಜಿ ತೆಗೆದುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಅವು ಮುಖದ ಮೇಲೆ ಶಾಶ್ವತ ಕಲೆಗಳಾಗಿ ಉಳಿದುಬಿಡಬಹುದು. ಆದ್ದರಿಂದ ಬೇಸಿಗೆಯಲ್ಲಿ ಮುಖದ ಆರೋಗ್ಯ ಕಾಪಾಡಿಕೊಂಡು, ಸೌಂದರ್ಯ ಹೆಚ್ಚಿಕೊಳ್ಳಲು ಕೆಲವು ಸರಳ ಉಪಾಯಗಳು ಇಲ್ಲಿವೆ.

ಟೊಮೆಟೊ ಹಣ್ಣಿನ ರಸವನ್ನು ಮುಖದ ಮೇಲೆ ಚೆನ್ನಾಗಿ ಹಚ್ಚಿಕೊಂಡು ಮಸಾಜು ಮಾಡಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಸೌತೆಕಾಯಿಯ ಸ್ಲೈಸ್ ಗಳನ್ನು ಮಾಡಿಕೊಂಡು ಅದನ್ನು ನಿಧಾನವಾಗಿ ಮುಖದ ಮೇಲೆ ಉಜ್ಜಿಕೊಳ್ಳುವುದರಿಂದ ಮುಖದ ಚರ್ಮದಲ್ಲಿ ತೇವಾಂಶ ಹೆಚ್ಚುತ್ತದೆ. ಅಲ್ಲದೇ ಸ್ಲೈಸ್ ಗಳನ್ನು ಕಣ್ಣುಗಳ ಮೇಲೆ ಇಟ್ಟುಕೊಳ್ಳುವುದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ.

ರೋಸ್ ವಾಟರ್ ಅನ್ನು ಮುಖಕ್ಕೆ ಬಳಸುವುದರಿಂದ ಕಪ್ಪು ಚುಕ್ಕೆಗಳು ಕಡಿಮೆಯಾಗುತ್ತವೆ.

ಹಾಲಿನ ಕೆನೆಯನ್ನು ಅರಿಸಿನ ಪುಡಿಯೊಂದಿಗೆ ಕಲಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕಪ್ಪು ಚುಕ್ಕೆಗಳನ್ನು ತಡೆಗಟ್ಟಬಹುದು ಹಾಗೂ ಕಣ್ಣಿನ ಸುತ್ತಲಿನ ಕಪ್ಪು ಉಂಗುರವನ್ನು ಕಡಿಮೆ ಮಾಡಿಕೊಳ್ಳಬಹುದು.

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ನಂತರ ಆ ಕಿತ್ತಳೆ ಪೌಡರನ್ನು ನೀರಿನೊಂದಿಗೆ ಕಲಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಲಿಂಬೆ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಮೇಲಿನ ಬೆವರು ಗುಳ್ಳೆಗಳು ಕಡಿಮೆಯಾಗುತ್ತವೆ.

ಕಾಂತಿಯುತ ಚರ್ಮಕ್ಕೆ ಬಳಸಿ ಜೇನು

$
0
0
ಕಾಂತಿಯುತ ಚರ್ಮಕ್ಕೆ ಬಳಸಿ ಜೇನು

ಇಂದು ಪ್ರತಿಯೊಂದು ಸಮಸ್ಯೆಗೂ ವೈದ್ಯರಲ್ಲಿ ತೆರಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ನಮ್ಮಲ್ಲಿರುವ ಪ್ರಕೃತಿ ಸಂಪನ್ಮೂಲಗಳಿಂದ ಎಷ್ಟೋ ಸಮಸ್ಯೆಗೆ ಪರಿಹಾರ ಕಂಡು ಹಿಡಿದುಕೊಳ್ಳಬಹುದು ಎಂಬ ಅಂಶ ಹಲವರಿಗೆ ತಿಳಿದೇ ಇಲ್ಲ. ಅದರಲ್ಲಿಯೂ ಪ್ರತಿಯೊಬ್ಬರೂ ತಮ್ಮ ಸೌಂದರ್ಯವರ್ಧನೆಗಾಗಿ ಹಲವಾರು ಕಸರತ್ತು ನಡೆಸುತ್ತಾರೆ. ಅದರಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದೇ ತ್ವಚೆಯನ್ನು ಕಾಂತಿಯುತವಾಗಿಸುವ ಉಪಾಯವೊಂದು ಇಲ್ಲಿದೆ.

ಮಲೆನಾಡಿನ ಕಾಡುಗಳಲ್ಲಿ ಸಮೃದ್ದವಾಗಿ ದೊರೆಯುವ ಜೇನುತುಪ್ಪ ಹಲವು ಖಾಯಿಲೆಗಳಿಗೆ ರಾಮಬಾಣವಾಗಿದ್ದು, ಅದರಲ್ಲಿಯೂ ಚರ್ಮದ ಸಮಸ್ಯೆಗಳಿಗೆ ಅಮೃತ ಸಂಜೀವಿನಿಯಾಗಿದೆ. ವಿಟಮಿನ್, ಪ್ರೋಟಿನ್ ಮತ್ತು ರೋಗ ನಿರೋಧಕ ಜೀವಸತ್ವಗಳಿಂದ ಸಮೃದ್ಧವಾಗಿರುವ ಜೇನುತುಪ್ಪದ ವಿಟಮಿನ್ ‘ಸಿ’ ವಿಕಿರಣಗಳಿಂದ ಹಾನಿಗೀಡಾದ ಚರ್ಮದ ಪದರಗಳನ್ನು ಸರಿಪಡಿಸುವುದಲ್ಲದೇ ವಿಟಮಿನ್ ‘ಬಿ 5’ ಚರ್ಮದಲ್ಲಿ ಉತ್ಪತ್ತಿಯಾಗುವ ಎಣ್ಣೆಯ ಅಂಶವನ್ನು ತೆಗೆದು ಒಣ ಚರ್ಮವನ್ನು ಮೃದುಗೊಳಿಸುತ್ತದೆ.

ಬಳಕೆ ಹೇಗೆ…?
ಒಂದು ಚಮಚ ಜೇನುತುಪ್ಪಕ್ಕೆ ಸಮ ಪ್ರಮಾಣದ ಕಿತ್ತಳೆ ರಸವನ್ನು ಬೆರಸಿ ಫೇಸ್ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚಿದರೆ ಅಥವಾ ಸಿಪ್ಪೆ ತೆಗೆದ ಸೇಬನ್ನು ಚೆನ್ನಾಗಿ ರುಬ್ಬಿ ಅದಕ್ಕೆ 4 ಚಮಚ ಜೇನುತುಪ್ಪ ಬೆರೆಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ 10 ನಿಮಿಷಗಳ ಕಾಲ ಬಿಟ್ಟು ಹದ ಬಿಸಿ ನೀರಿನಲ್ಲಿ ತೊಳೆದುಕೊಂಡರೆ ಚರ್ಮದ ತೇವಾಂಶ ಹೆಚ್ಚುವುದರ ಜತೆಗೆ ತ್ವಚೆಗೆ ಹೊಳಪು ನೀಡುತ್ತದೆ.

ಬಾಳೆಹಣ್ಣಿಗೆ ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 5-10 ನಿಮಿಷಗಳ ನಂತರ ಹದ ಬಿಸಿ ನೀರಿನಲ್ಲಿ ಮುಖ ತೊಳೆದುಕೊಂಡರೆ ತ್ವಚೆ ಮೃದುವಾಗುತ್ತದೆ.

ಜೇನುತುಪ್ಪ ಮತ್ತು ಮಾಯಿಶ್ಚರೈಸಿಂಗ್ ಲೋಷನ್ ಸೇರಿಸಿ ಕ್ರೀಮ್ ತಯಾರಿಸಿ ತ್ವಚೆಗೆ ಹಚ್ಚಿ 15 ನಿಮಿಷಗಳ ನಂತರ ಬಿಸಿ ನೀರಿನಿಂದ ತೊಳೆದರೆ ತ್ವಚೆಯ ಕಾಂತಿ ನೈಸರ್ಗಿಕವಾಗಿ ವೃದ್ಧಿಯಾಗಲು ಸಹಕಾರಿಯಾಗುತ್ತದೆ.

ಹೀಗೆ ಹಲವು ರೀತಿಯಲ್ಲಿ ಜೇನುತುಪ್ಪವನ್ನು ಸೌಂದರ್ಯವರ್ಧಕವಾಗಿ ಬಳಸಬಹುದಾಗಿದ್ದು, ಉತ್ತಮ ಹಾಗೂ ಪರಿಶುದ್ದ ಜೇನುತುಪ್ಪ ಬಳಸಿದಲ್ಲಿ ಉತ್ತಮ ಫಲಿತಾಂಶ ಶತಃ ಸಿದ್ದ.


ಉತ್ತಮ ಅರೋಗ್ಯಕ್ಕಾಗಿ ಲೋಳೆಸರ

$
0
0
ಉತ್ತಮ ಅರೋಗ್ಯಕ್ಕಾಗಿ ಲೋಳೆಸರ

ಲೋಳೆಸರ ಇದು ಹಳ್ಳಿಗಳ ಮನೆಯಂಗಳದಲ್ಲಿ ನಳನಳಿಸುವ ಬಹು ಉಪಯೋಗಿ ಸಸ್ಯ ಪ್ರಬೇಧ. ಲೋಳೆ ಇರುವ ಹಸಿರು ಬಣ್ಣದ ಎಲೆ ಹೊಂದಿರುವ ಇದನ್ನು ಅಲೋವೆರಾ ಎಂದೂ ಕರೆಯಲ್ಪಡುತ್ತಿದ್ದು, ಆಯುರ್ವೇದದಲ್ಲಿ ಇದರ ಬಳಕೆ ವ್ಯಾಪಕವಾಗಿದೆ.

ಗಾಯ, ಸುಟ್ಟ ಗಾಯ ಮತ್ತು ಚರ್ಮದ ಸೋಂಕಿಗೆ ಬಳಸಲಾಗುವ ಅಲೋವೆರಾವನ್ನು ಸೌಂದರ್ಯವರ್ಧಕವಾಗಿಯೂ ಬಳಸುತ್ತಾರೆ. ಆಲೋವೆರಾದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿರುವ ವಿಷವನ್ನು ಹೊರಹಾಕುವ ಜೊತೆಗೆ ದೇಹದಲ್ಲಿನ ಹಾನಿಗೊಳಗಾಗಿರುವ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಸರಿಪಡಿಸುತ್ತದೆ.

ಆಲೋವೆರಾದ ಕ್ರೀಮ್ ಅನ್ನು ಮುಖದ ಮೇಲೆ ಲೇಪಿಸುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಿ ಮುಖದ ಕಾಂತಿ ವೃದ್ದಿಸುತ್ತದೆ. ಅಲ್ಲದೇ ಇದರ ಜ್ಯೂಸ್ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಅಗಾಧ ಪ್ರಮಾಣದ ಪೌಷ್ಠಿಕಾಂಶ, ಮಿನರಲ್ ಮತ್ತು ವಿಟಮಿನ್ ಗಳನ್ನು ಒದಗಿಸುತ್ತದೆ. ಈ ಜ್ಯೂಸ್ ನಲ್ಲಿ ಅಧಿಕ ಪ್ರಮಾಣದ ಅಮಿನೋ ಆ್ಯಸಿಡ್ ಮತ್ತು ಫ್ಯಾಟಿ ಆ್ಯಸಿಡ್ ಇದ್ದು, ಇದು ಆರೋಗ್ಯಕ್ಕೆ ಒಳ್ಳೆಯದು ಎಂಬ ಅಭಿಪ್ರಾಯ ವೈದ್ಯರದ್ದು.

ಬೇಡದ ಕೂದಲು ನಿವಾರಣೆಗೆ ಮನೆ ಮದ್ದು

$
0
0
ಬೇಡದ ಕೂದಲು ನಿವಾರಣೆಗೆ ಮನೆ ಮದ್ದು

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು ಸಮಾರಂಭಗಳಿಗೆ ಹೋಗಲು ಮುಜುಗರಪಡ್ತಾರೆ.

ಅನುವಂಶಿಕ ಅಥವಾ ಹಾರ್ಮೋನ್ ಏರುಪೇರಿನಿಂದ ಈ ಸಮಸ್ಯೆ ಎದುರಾಗುತ್ತದೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಪದೇ ಪದೇ ಕೂದಲನ್ನು ತೆಗೆಸುವುದು ಕಿರಿಕಿರಿಯುಂಟು ಮಾಡುವುದಲ್ಲದೇ, ಇದರಿಂದ ಸೌಂದರ್ಯ ಕುಂದಿದರೆ ಎಂಬ ಚಿಂತೆ ಕಾಡುತ್ತದೆ. ಇನ್ನು ಮುಂದೆ ಈ ಆಲೋಚನೆ ಬಿಡಿ. ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ಕೂದಲು ಸಮಸ್ಯೆಗೆ ಅಂತ್ಯ ಹಾಡಿ.

ಕಿತ್ತಳೆ ಸಿಪ್ಪೆ ಮತ್ತು ಮೊಸರು
ಕಿತ್ತಳೆ ಸಿಪ್ಪೆ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ. ಕಿತ್ತಳೆ ಸಿಪ್ಪೆ ಪುಡಿ ಮಾಡಿ, ಮೊಸರು ಮತ್ತು ನಿಂಬೆ ರಸ ಕಲೆಸಿ, ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳಿ. ಇದು ಮೊಡವೆ ಸಮಸ್ಯೆ ನಿವಾರಿಸಲು ಮತ್ತು ಮುಖದ ಮೇಲಿರುವ ಕೂದಲಿನ ಬಣ್ಣ ಬದಲಾಯಿಸುತ್ತದೆ.

ಪಪ್ಪಾಯಿ ಮತ್ತು ಅರಿಶಿನದ ಪೇಸ್ಟ್
ಪಪ್ಪಾಯ ನೈಸರ್ಗಿಕ ಬ್ಲೀಚ್. ಇದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಪಪ್ಪಾಯ ಜೊತೆ ಅರಿಶಿನ ಬೆರೆಸಿ ಪೇಸ್ಟ್ ಮಾಡಿ ಪ್ರತಿದಿನ ಮುಖಕ್ಕೆ ಹಚ್ಚಿ ಮಸಾಜ್ ಮಾಡಬೇಕು. 20 ನಿಮಿಷ ಬಿಟ್ಟು ಮುಖ ತೊಳೆಯಬೇಕು.

ನಿಂಬೆ ರಸ ಮತ್ತು ಜೇನುತುಪ್ಪ
ನಿಮ್ಮ ಮುಖದ ಕಾಂತಿ ಹೆಚ್ಚಿಸಿ, ಕೂದಲು ಸಮಸ್ಯೆಯಿಂದ ಹೊರಬರಲು ನಿಂಬೆ ಎಲ್ಲಕ್ಕಿಂತ ಉತ್ತಮ ಔಷಧ. ಪ್ರತಿದಿನ ನಿಂಬೆ ರಸ ಹಾಗೂ ಜೇನುತುಪ್ಪವನ್ನು ಬೆರೆಸಿ, ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆದರೆ ಮುಖದ ಬಣ್ಣ ಬದಲಾಗುತ್ತದೆ.

ತೆಳ್ಳಗಿರುವ ಮಹಿಳೆಯರನ್ನು ಬಯಸುತ್ತಾರಂತೆ ಪುರುಷರು

$
0
0
ತೆಳ್ಳಗಿರುವ ಮಹಿಳೆಯರನ್ನು ಬಯಸುತ್ತಾರಂತೆ ಪುರುಷರು

ಬಳ್ಳಿಯಂತೆ ಬಳುಕಬೇಕು, ಸಿಂಹದಂತಹ ಸೊಂಟ ಇರಬೇಕು, ಹೀಗೆ ಏನೇನೋ ಕಲ್ಪನೆಗಳು ಮಹಿಳೆಯರ ಬಗ್ಗೆ ಪುರುಷರಿಗೆ ಇರುತ್ತವೆ. ಸಿನಿಮಾಗಳಲ್ಲಿ ನಾಯಕಿಯರು ಹೆಚ್ಚಾಗಿ ತೆಳ್ಳಗಿನವರಾಗಿರುತ್ತಾರೆ. ದಪ್ಪಗೆ ಮೈಕೈ ತುಂಬಿಕೊಂಡ ಹೆಣ್ಣುಮಕ್ಕಳ ಬಗ್ಗೆ ಸಿನಿಮಾದಲ್ಲಿರಲಿ, ನಿಜ ಜೀವನದಲ್ಲಿಯೂ ಪುರುಷರು ಇಷ್ಟಪಡಲಾರರು ಎನ್ನುತ್ತದೆ ಅಧ್ಯಯನವೊಂದು.

ಆಧುನಿಕ ಜೀವನ ಶೈಲಿ, ಒತ್ತಡದ ಬದುಕಿನಿಂದ ದೇಹವನ್ನು ಒಂದೇ ರೀತಿಯಲ್ಲಿಟ್ಟುಕೊಳ್ಳುವುದು ಕಷ್ಟವಾಗಿದೆ. ಬೊಜ್ಜು ಸಾಮಾನ್ಯವಾಗಿದೆ. ಅದರಲ್ಲೂ ಗ್ಲಾಮರ್ ಲೋಕದಲ್ಲಂತೂ ಹೆಣ್ಣುಮಕ್ಕಳು ತೆಳ್ಳಗೆ ಇರಬೇಕು. ಸದಾ ಕಾಲ ಜೀರೋ ಫಿಗರ್ ಮೆಂಟೇನ್ ಮಾಡಬೇಕು ಇಲ್ಲದಿದ್ದರೆ ಬೇಡಿಕೆ ಕುಸಿಯುತ್ತದೆ ಎಂಬ ಆತಂಕ. ಹಾಗಾಗಿಯೇ ಎಷ್ಟೋ ಮಾಡೆಲ್ ಗಳು ಹೊಟ್ಟೆತುಂಬ ಊಟ ಕೂಡ ಮಾಡುವುದಿಲ್ಲ ಎಂಬ ವ್ಯಂಗ್ಯದ ಮಾತುಗಳೂ ಆಗಾಗ ಕೇಳಿಬರುತ್ತವೆ. ಅಷ್ಟಕ್ಕೂ ಇಷ್ಟು ದೊಡ್ಡ ಪೀಠಿಕೆ ಯಾಕೆ ಎಂದಿರಾ? ಅಧ್ಯಯನವೊಂದರ ಪ್ರಕಾರ ತೆಳ್ಳನೆಯ ಬಳ್ಳಿಯಂತೆ ಬಳುಕುವ ದೇಹ ಹೊಂದಿರುವ ಮಹಿಳೆಯರನ್ನು ತಮ್ಮ ಸಂಗಾತಿಯಾಗಿ ಪಡೆಯಲು ಪುರುಷರು ಇಷ್ಟ ಪಡುತ್ತಾರಂತೆ.

ಅಬಾರ್ಡನ್ ವಿಶ್ವವಿದ್ಯಾಲಯದ ವಿಜ್ಞಾನಿ, ಎವಲೂಷನರಿ ಫಿಟ್ ನೆಸ್ ಎಂಬ ಅಧ್ಯಯನ ಕೃತಿಯಲ್ಲಿ ಈ ರೀತಿ ತಿಳಿಸಿದ್ದಾರೆ. ಇಂಗ್ಲೆಂಡ್ ಸೇರಿದಂತೆ 9 ದೇಶಗಳಲ್ಲಿ 1300 ಮಂದಿಯನ್ನು ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆ ಸಂದರ್ಭದಲ್ಲಿ ಪುರುಷರಿಗೆ ದಪ್ಪ. ತೆಳು. ದಢೂತಿ, ಮಧ್ಯಮ, ಸಣ್ಣ ಗಾತ್ರ ಹೀಗೆ ಸುಮಾರು 21 ಬಗೆಯ ಮಹಿಳೆಯರ ಚಿತ್ರಗಳನ್ನು ತೋರಿಸಿ, ತಮ್ಮ ಇಷ್ಟದಂತೆ ಅನುಕ್ರಮವಾಗಿ ಜೋಡಿಸಲು ತಿಳಿಸಲಾಗಿತ್ತು. ಈ ಸಂದರ್ಭದಲ್ಲಿ ಬಹುತೇಕ ಪುರುಷರು ಬಳುಕುವ ಬಳ್ಳಿಯಂತಹ ತೆಳ್ಳನೆಯ ಚಹರೆ ಹೊಂದಿದವರನ್ನು ಹೆಚ್ಚು ಇಷ್ಟಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಮುಖದ ಸೌಂದರ್ಯಕ್ಕೆ ನುಗ್ಗೆ ಎಲೆ

$
0
0
ಮುಖದ ಸೌಂದರ್ಯಕ್ಕೆ ನುಗ್ಗೆ ಎಲೆ

ನಮ್ಮ ಮನೆಯ ಹಿತ್ತಿಲಿನಲ್ಲೇ ಸಿಗುವ ಅದೆಷ್ಟೋ ಸೊಪ್ಪುಗಳು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಆದರೆ ನಾವು ಅದನ್ನು ನಿರ್ಲಕ್ಷಿಸಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತೇವೆ. ಸೊಪ್ಪುಗಳನ್ನೇ ಸದ್ಭಳಕೆ ಮಾಡಿಕೊಂಡರೆ ಜಗಮೆಚ್ಚುವ ಸೌಂದರ್ಯ ಗಳಿಸಿಕೊಳ್ಳಬಹುದು. ಇಂತಹ ಸೊಪ್ಪುಗಳಲ್ಲಿ ನುಗ್ಗೆಸೊಪ್ಪು ಕೂಡಾ ಒಂದು.

ನುಗ್ಗೆ ಸೊಪ್ಪು ಚರ್ಮದ ವೃದ್ಧಾಪ್ಯವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು, ಮುಖದ ಚರ್ಮ ಸುಕ್ಕುಗಟ್ಟಲು ಕಾರಣವಾಗುವ ಪ್ರಿರಯಾಡಿಕಲ್ ಅಂಶವನ್ನು ತಡೆಗಟ್ಟಿ ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ನುಗ್ಗೆಕಾಯಿ ಸೊಪ್ಪನ್ನು ನುಣ್ಣಗೆ ರುಬ್ಬಿ ಮುಖ, ಕತ್ತಿಗೆ ಹಚ್ಚಿಕೊಂಡು ಕೆಲ ಸಮಯ ಬಿಟ್ಟು ತಣ್ಣೀರಿನಲ್ಲಿ ತೊಳೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ ಮತ್ತು ಇದು ಮುಖವನ್ನು ಬ್ಯಾಕ್ಟಿರೀಯಾ ಮುಕ್ತವಾಗಿಸುತ್ತದೆ.

ಹದಿಹರೆಯದ ಯುವತಿಯರನ್ನು ಕಾಡುವ ಮೊಡವೆ ಸಮಸ್ಯೆಗೂ ನುಗ್ಗೆಸೊಪ್ಪು ರಾಮಬಾಣವಾಗಿದೆ. ನುಗ್ಗೆ ಸೊಪ್ಪನ್ನು ಲಿಂಬೆಹಣ್ಣಿನ ರಸದೊಂದಿಗೆ ಅರೆದು ಹಚ್ಚಿಕೊಳ್ಳುವುದರಿಂದ ಮೊಡವೆ ಸಮಸ್ಯೆಗೆ ಪರಿಹಾರ ಕಾಣಬಹುದು. ದೇಹದಲ್ಲಿ ಸಂಗ್ರಹವಾಗುವ ವಿಷಕಾರಿ ಅಂಶಗಳಿಂದಾಗಿ ಚರ್ಮದ ಮೇಲೆ ಗುಳ್ಳೆಗಳು ಏಳುವುದು ಹಾಗೂ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ರಕ್ತ ಶುದ್ಧಿಗಾಗಿ ನುಗ್ಗೆಸೊಪ್ಪನ್ನು ಬಳಸಬಹುದು.

ನುಗ್ಗೆಸೊಪ್ಪಿನ ಎರಡು ಚಮಚ ರಸವನ್ನು ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ನುಗ್ಗೆಸೊಪ್ಪಿಗೆ ಒಂದು ಚಮಚ ಅರಿಶಿಣ, ಲಿಂಬೆರಸ, ಗಂಧದ ಪುಡಿ ಸೇರಿಸಿ, ನುಣ್ಣಗೆ ರುಬ್ಬಿ ಫೇಸ್ ಪ್ಯಾಕ್ ನಂತೆ ಬಳಸಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.

ಹಳದಿ ಹಲ್ಲುಗಳಿಗೆ ಹೇಳಿ ಗುಡ್ ಬೈ

$
0
0
ಹಳದಿ ಹಲ್ಲುಗಳಿಗೆ ಹೇಳಿ ಗುಡ್ ಬೈ

ಆಧುನಿಕ ಜೀವನಶೈಲಿ, ಆಹಾರ ಪದ್ಧತಿಯಿಂದ ಕೆಲವೊಮ್ಮೆ ಏರು ಪೇರು ಉಂಟಾಗುತ್ತದೆ. ಅದರಲ್ಲಿಯೂ, ಕೆಲವರು ಕಾಫಿ, ಟೀ ತಂಬಾಕು, ಜರ್ದಾ ಮೊದಲಾದವುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಸೇರಿದಂತೆ ಹಲವು ಕಾರಣದಿಂದ ಹಲ್ಲುಗಳ ಬಣ್ಣ ಮಾಸುತ್ತದೆ.

ಹಲ್ಲುಗಳ ಬಗ್ಗೆ ಕಾಳಜಿ ವಹಿಸದ ಪರಿಣಾಮ ತೊಂದರೆ ಅನುಭವಿಸಬೇಕಾಗುತ್ತದೆ. ಇನ್ನು ಕೆಲವರಿಗೆ ಹಲ್ಲಿನದೇ ದೊಡ್ಡ ಚಿಂತೆ. ಎಷ್ಟೆಲ್ಲಾ ಕೇರ್ ಮಾಡಿದರೂ, ಹಲ್ಲಿನ ಬಣ್ಣ ಮಾಸಿದ್ದರಿಂದ ಮುಜುಗರ ಅನುಭವಿಸುವಂತಾಗುತ್ತದೆ. ಬೇರೆಯವರ ಎದುರು ಮಾತನಾಡುವಾಗ, ತಮ್ಮ ಹಲ್ಲುಗಳು ಕಂಡರೆ ಎಂದುಕೊಳ್ಳುತ್ತಾರೆ. ಆದರೆ, ಮನೆಯಲ್ಲಿ ಬಳಸುವ ವಸ್ತುಗಳಿಂದಲೇ ಹೊಳಪು ಬರುವಂತೆ ಮಾಡಬಹುದು ಎನ್ನುತ್ತಾರೆ ತಿಳಿದವರು.

1 ಚಮಚ ತೆಂಗಿನ ಎಣ್ಣೆ, 1 ಚಮಚ ಅರಿಶಿಣ ಪುಡಿ, ಎರಡು ಹನಿ ಪುದಿನಾ ಎಣ್ಣೆ ಮಿಶ್ರಣ ಮಾಡಿಕೊಂಡು ಟೂತ್ ಬ್ರಶ್ ನಲ್ಲಿ ಸುಮಾರು 5 ನಿಮಿಷಗಳ ಕಾಲ ಹಲ್ಲನ್ನು ಉಜ್ಜಬೇಕು. ಬಳಿಕ ಬಾಯಿ ತೊಳೆದುಕೊಂಡು ಒಣಬಟ್ಟೆಯಿಂದ ಹಲ್ಲುಗಳನ್ನು ಒರೆಸಬೇಕು. ಹೀಗೆ ಸ್ವಲ್ಪ ದಿನ ಮಾಡಿದಲ್ಲಿ ಹಳದಿ ಹಲ್ಲಿಗೆ ವಿದಾಯ ಹೇಳಬಹುದು.

Viewing all 3709 articles
Browse latest View live


<script src="https://jsc.adskeeper.com/r/s/rssing.com.1596347.js" async> </script>